ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಸಿ. ಆರ್. ಸತ್ಯ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಪದ್ಮವಿಭೂಷಣ ಡಾ|| ಉಡುಪಿ ರಾಮಚಂದ್ರ ರಾವ್ (೧೯೩೨-೨೦೧೭) ವಿಶ್ವವಿಖ್ಯಾತ ಬಾಹ್ಯಾಕಾಶ ವಿಜ್ಞಾನಿ. ಆಧುನಿಕ ಭಾರತದ ಭವಿಷ್ಯವನ್ನು ಬರೆದ ಮಹಾನ್ ಚೇತನಗಳಲ್ಲಿ ಯು. ಆರ್. ರಾವ್ ಅವರೂ ಸಹ ಒಬ್ಬರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮೆರೆಯಿಸಿದ ತೀಕ್ಷ್ಣಮತಿ ಯು. ಆರ್. ರಾವ್. ಅತ್ಯುತ್ತಮ ನಾಯಕನ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದ ಯು. ಆರ್. ರಾವ್ ದೂರದೃಷ್ಟಿ ಉಳ್ಳವರಾಗಿದ್ದು ವೈಜ್ಞಾನಿಕ ಭಾರತ ದೇಶದ ನಡೆಯ ಸ್ವರೂಪವನ್ನು ಮುಂಚಿತವಾಗಿ ನಿರ್ಧರಿಸಿ, ಅದೇ ಪಥದಲ್ಲಿ ಯಶಸ್ವಿಯಾಗಿ ಮುನ್ನಡೆಯಿಸಿದರು.
ಭಾರತವು ೧೯೬೩ರ ನವೆಂಬರ್ ೨೧ರಂದು ಅಮೆರಿಕ ಕೊಟ್ಟ ನೈಕಿ ಅಪಾಚಿ ಎಂಬ ಎರಡು ಹಂತದ ರಾಕೆಟ್ ಒಂದನ್ನು ತುಂಬಾ ಕೇಂದ್ರದಿಂದ ಉಡಾಯಿಸಿತು. ಇದು ಭಾರತೀಯ ನೆಲದಿಂದ ಚಿಮ್ಮಿದ ಮೊದಲ ರಾಕೆಟ್! ಅದೇ ಭಾರತವು ಫೆಬ್ರವರಿ ೧೫, ೨೦೧೭ರಂದು ತನ್ನ ಪಿ.ಎಸ್.ಎಲ್.ವಿ. - ಸಿ೩೭ ರಾಕೆಟ್ ಮೂಲಕ ೧೦೪ ಉಪಗ್ರಹಗಳನ್ನು ಒಮ್ಮೆಲೆ ಬಾಹ್ಯಾಕಾಶಕ್ಕೆ ಒಯ್ದು ನಿಖರವಾಗಿ ಅವುಗಳನ್ನು ಕಕ್ಷೆಗೆ ಸೇರಿಸಿ ಜಾಗತಿಕ ದಾಖಲೆಯನ್ನು ಮಾಡಿತು. ಇವುಗಳಲ್ಲಿ ೯೬ ಉಪಗ್ರಹಗಳು ಅಮೆರಿಕಕ್ಕೆ ಸೇರಿದ್ದವು! ಈ ಎರಡು ಘಟ್ಟಗಳ ನಡುವೆ ಭಾರತದ ಏಳುಬೀಳುಗಳನ್ನು ಸಮರ್ಥವಾಗಿ ನಿಭಾಯಿಸಿದವರಲ್ಲಿ ಯು. ಆರ್. ರಾವ್ ಅಗ್ರಗಣ್ಯರು. ಯಾವುದೇ ದೇಶವಾಗಲಿ ಹೆಮ್ಮೆ ಪಡುವಂತಹ ಮಹಾನ್ ಚೇತನ ಯು. ಆರ್. ರಾವ್!
- ಡಾ|| ನಾ. ಸೋಮೇಶ್ಪರ
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !