Click here to Download MyLang App

ದೇವರ ಕಾಲೋನಿ (ಇಬುಕ್)

ದೇವರ ಕಾಲೋನಿ (ಇಬುಕ್)

e-book

ಕತೆ / stories

ಪಬ್ಲಿಶರ್
ಚಂದ್ರಶೇಖರ ಬಂಡಿಯಪ್ಪ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್‌

Publisher: Sahityaloka Publications

  

ಸಿನಿಮಾ ಪತ್ರಕರ್ತ, ಚಿತ್ರಕಥೆ, ಸಂಭಾಷಣೆಗಳ ರಚನೆಯ ಮೂಲಕ ಬಣ್ಣದ ಲೋಕದಲ್ಲಿ ಗುರುತಿಸಿಕೊ೦ಡಿರುವ ಯುವ ಬರಹಗಾರ ಟಿ.ಜಿ ನಂದೀಶ್‌ ಅವರು ತಾವು ಮೆಚ್ಚಿದ ಪುಸ್ತಕದ ಬಗ್ಗೆ ಇಲ್ಲಿ ಬರೆದಿದ್ದಾರೆ. ಅ೦ದಹಾಗೆ 'ದೇವರ ಕಾಲೋನಿ' ಎನ್ನುವ ಈ ಪುಸ್ತಕವನ್ನು 'ರಥಾವರ' ಖ್ಯಾತಿಯ ಚಿತ್ರನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ರಚಿಸಿದ್ದಾರೆ. 

‘ದೇವರ ಕಾಲೋನಿ’ಯಲ್ಲಿ ಒಂದು ಸುತ್ತು. 

ನಾನು ಕಥಾ ಸ೦ಕಲನಗಳನ್ನು ಓದುವುದು ತೀರಾ ಕಡಿಮೆ. ಓದುವಿಕೆಗಿ೦ತ ಬರವಣಿಗೆಯೇ ಪ್ರಿಯವಾದ ಕಾರಣ ಅದರಲ್ಲೇ ಹೆಚ್ಚು ಸಮಯ ಕಳಯುತ್ತೇನೆ. 

ಆದರೆ ಕಳೆದ ಕಲವು ದಿನಗಳಿಂದ ನನ್ನ ಓದಿನಲ್ಲಿ ಮುಳುಗುವಂತೆ ಮಾಡಿದ, ನನ್ನ ಮನಸನ್ನು ಆವರಿಸಿದ ಪುಸ್ತಕ 'ದೇವರ ಕಾಲೋನಿ'. 

‘ರಥಾವರ' ಖ್ಯಾತಿಯ ಚಲನಚಿತ್ರ ನಿರ್ದೇಶಕ ಚ೦ದ್ರಶೇಖರ್‌ ಬ೦ಡಿಯಷ್ಟ ಅವರ ಲೇಖನಿಯಿಂದ ಅರಳಿದ ಮೂರು ವಿಭಿನ್ನ ಕಥೆಗಳ ಸ೦ಕಲನವೇ ಈ ದೇವರ ಕಾಲೋನಿ. 

ಸಾಮಾನ್ಯವಾಗಿ ಬರಹಗಾರರು, ತಮ್ಮೊಳಗಿನ ಕಥೆ ಹೇಳಲು ಸಿನಿಮಾ ಆಯ್ದುಕೊಳ್ಳುವುದು ಲೋಕಾರೂಢಿ. ಆದರೆ ಇಲ್ಲಿಅದಾಗಲೇ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊ೦ಡ ಚಂದ್ರಶೇಖರ್‌ ಬ೦ಡಿಯಷ್ಟ ಸಿನಿಮಾದಲ್ಲಿ ನೇರ ಮತ್ತು ನಿಖರವಾಗಿ. ಹೇಳಬೇಕೆನಿಸಿದರೂ ಹೇಳಲಾಗದ ಅಂಶಗಳನ್ನು ಹಿನ್ನೆಲೆಯಾಗಿಸಿ ಮೂರು ಅದ್ಭುತ ಕಥೆಗಳನ್ನು ಬರೆದಿದ್ಮಾರೆ. ಅದರಲ್ಲಿಯು ದೇವರ ಕಾಲೋನಿ ಮಾನವೀಯತೆ ಮತ್ತು ಅವಕಾಶವಾದಿಗಳ ನಡುವಿನ ಸತ್ಯಾಸತ್ಯತೆ ಬಟಾಬಯಸಲಾಗಿಸುತ್ತೆ. ಸಿಕ್ಕಂತೆ ಭಾಸವಾಗಿ, ಮರುಕ್ಷಣವೇ ಮಾಯಾವಾಗೋ ಬಂಧ, ಸಂಬ೦ಧಗಳ ಮೇಲೆ ಬೆಳಕು ಚೆಲ್ಲುತ್ತೆ. 

ಎರಡನೇ ಕಥೆ 'ಚೈನಾಸೆಟ್‌’ ನವಿರು ಪ್ರೀತಿಯ ಜೊತೆಗೆ ಊಹಿಸಿಲಾಗದಂಥ ಕಟುಸತ್ಯವನು ಬೆರೆಸಿ ಮತ್ತೊಂದು ವಿಭಿನ್ನ ಅನುಭವ ಕೂಡುತ್ತದೆ. ಬೆಳೆದ ಜಾಗ, ಅನುಸರಿಸುವ ಸಂಸ್ಕೃತಿ, ಅಭ್ಯಾಸವಾದ ಜೀವನಶೈಲಿ ಎಂತಹ ಸಂದಿಗ್ದಗಳನ್ನು ಸೃಷ್ಟಿಸುತ್ತದ ಎಂಬುದನ್ನು ಪ್ರತಿಬಿಂಬಿಸುತ್ತದೆ. 

ಮೂರನೇ ಕಥೆ ‘ಉಯಿಲು’. ಮೊದಲರಡು ಕಥೆಗಿಂತ ಭಿನ್ನ. ಆಧುನಿಕ ಯುಗದಲ್ಲೂ ಕೂನೆಯಾಗದ ಗೊಡ್ಡು ಸಂಪ್ರದಾಯವನ್ನು ವಿರೋಧಿಸುವ ಮತ್ತು ಹೊಸ ಆಶಯಗಳಿಗೆ ಹುಟ್ಟು ನೀಡುವ ಹೆಣ್ಮೊಬ್ಬಳ ನಿರ್ಧಾರ ಮತ್ತು ಅದರ ಸುತ್ತ ಮುತ್ತಲಿನ ಘಟನಾವಳಿಗಳನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. 

ಚಂದ್ರಶೇಖರ್‌ ಬ೦ಡಿಯಪ್ಪನವರ ಬರವಣಿಗೆಯಲ್ಲಿ ನಾವೀನ್ಯತೆ ಇದೆ, ಸಲೀಸಾಗಿ ಓದಿಸಿಕೊಳ್ಳುತ್ತದೆ. ಕಥೆಯಲ್ಲಿನ ವೇಗ ಸಿನಿಮಾವೊಂದರಲ್ಲಿ ಕಾಣಬಹುದಾದ ರೋಚಕತೆಯನ್ನು ಹೊಂದಿದೆ. ಪುಸ್ತಕ ಪ್ರಕಟಿಸುವ ಅವರ ಹಲವು ವರ್ಷಗಳ ಕನಸು ಸಾಕಾರಾಗೊಳ್ಳಲು ಪರೋಕ್ಷವಾಗಿ ಕಾರಣವಾಗಿದ್ದು ಲಾಕ್‌ ಡೌನ್‌ ಮತ್ತು ಲಾಕ್‌ ಡೌನ್‌ ಸ೦ದರ್ಭದಲ್ಲಿ ಸಿಕ್ಕ ಅಮೂಲ್ಯ ಬಿಡುವಿನ ಸಮಯ. ಒ೦ದು ಅದ್ಭುತ ಕಥಾಸ೦ಕಲನ ಬರೆಯುವ ಮೂಲಕ ಆ ಸಮಯವನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. 

ಪುಸ್ತಕ ಪ್ರಿಯರ ಜೊತೆಗೆ ಸಿನಿಪ್ರಿಯರು ಕೂಡ ಓದಲೇಬೇಕಾದ ಚೆಂದದ ಪುಸ್ತಕ ದೇವರ ಕಾಲೋನಿ. 

ಒಂದೊಳ್ಳೆ ಪುಸ್ತಕ ಓದಿದ ಖುಷಿಗೆ ಕಾರಣರಾದ ಚಂದ್ರಶೇಖರ್‌ ಬಂಡಿಯಪ್ಪನವರಿಗೆ ಧನ್ಯವಾದ.

 

ಕೃಪೆ

https://cinikannada.com/2021/02/23/chandrasekhar-bandiyappa-story-book-cinikannada/

 

ಪುಟಗಳು: 94

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 

Customer Reviews

Based on 5 reviews
80%
(4)
0%
(0)
0%
(0)
0%
(0)
20%
(1)
N
Neelesh K
One of the best book... ದೇವರ ಕಾಲೋನಿ

ದೇವರ ಕಾಲೋನಿ ಪುಸ್ತಕ ಮೂರು ಕಥಾವಸ್ತುವುಳ್ಳ ಪುಸ್ತಕ ಮೂರು ಕಥಾವಸ್ತು ಅದರದ್ದೇ ಆದ ಛಾಪು ಮೂಡಿಸಿದೆ ಭಿನ್ನ ವಿಬ್ಬಿನತೆಗೆ ಒಳಗೊಂಡಿದೆ.,

😯, ಚೈನಾಸೆಟ್,,, ಕಥಾವಸ್ತು ಅಂತೂ ನಿಮಗೆ ಅಚ್ಚರಿ ಹುಟ್ಟಿಸುತದ್ದೇ,

N
Neelesh K
One of the best book..📖 ದೇವರ ಕಾಲೋನಿ

ರಥಾವರ ಚಿತ್ರ ಅಂದ ತಕ್ಷಣ ಸಿನಿಪ್ರಿಯರ ಮನಸ್ಸಿಗೆ ಬರುವ ವಿಷಯ ಏನೆಂದರೆ ಆ ಚಿತ್ರದ ಹಿಂದೆ ಇರುವ ನಿರ್ದೇಶಕ ಯಾರು ಅಂತ ಯೋಚಿಸುವುದು ಸಹಜ, ಅವರೇ ಖ್ಯಾತ ನಿರ್ದೇಶಕ chandrashekar bandiyappa,sir ರವರು ಈಗ ಸಾಹಿತ್ಯ ಲೋಕಕ್ಕೂ ಕಾಲಿಟ್ಟಿದ್ದಾರೆ,

chandrashekar bandiyappa,sir ಅವರ ಕೃತಿಯಲ್ಲಿ ಮೂಡಿಬಂದಿರುವ ದೇವರ ಕಾಲೋನಿ ಎಂಬ ಪುಸ್ತಕ ಓದುಗರ ಕೈ ಸೇರುತ್ತಿರುವುದು ಖುಷಿಯ ವಿಚಾರ,,💐

ದೇವರ ಕಾಲೋನಿಯ ಒಳಗೂ ಕೂಡ ರಾಜಕೀಯ ಜಾತಿ ಪ್ರೀತಿ ಅಡಗಿದೆ,

ಈ ಪುಸ್ತಕವು ಮೂರು ಕಥಾವಸ್ತುವುಳ್ಳ ಪುಸ್ತಕ ಒಂದೊಂದು ಭಿನ್ನ ವಿಭಿನ್ನತೆಗೆ ಒಳಗೊಂಡಿದೆ,

ಮೊದಲನೇ ಕಥಾವಸ್ತು,,,(1)
°°°°°°°°°°°°°°°°°°°°°°°°°°°°°°°°°°°°°°°°°°°°°°°°°

ದೇವರ ಕಾಲೋನಿಯ ಮೊದಲ ಪುಟದ ಕೊನೆಯ ಸಾಲುಗಳು ಹೀಗಿವೆ,

ಯಾರು ಇಲ್ಲದ ಅನಾಥರು ದೇವರಿಗೆ ಸ್ವಂತ ಆದ್ದರಿಂದ “ ದೇವರ ಕಾಲೋನಿ ” ಅಂತ ಕರಿಯೋದು ಗೌರವ,

ಹೀಗೆ ಮುಗಿಯುವ ಮೊದಲು ಪುಟದ ಕೊನೆಯ ಸಾಲುಗಳು ಹಾಳೆಗಳನ್ನು ಬದಲಾಯಿಸಲು ಹೇಳುತ್ತಾ ಮುಂದುವರಿಯುತ್ತದೆ,,

ನಿಮ್ಮ ನಿರೀಕ್ಷೆಯನ್ನು ಮೀರಿಸುತ್ತದೆ ಮುಂದಿನ ಕಥಾವಸ್ತು,,

ಎರಡನೇ ಕಥಾವಸ್ತು..(2)
°°°°°°°°°°°°°°°°°°°°°°°°°°°°°°°°°°°°°°°°°°°°°°°°°

ಚೈನಾ ಸೆಟ್,,, ಅಬ್ಬಾ ಮೈ ರೋಮಾಂಚನ
ಈ ಕಥಾವಸ್ತು ಮುಗಿಯುವ ಹಂತದಲ್ಲಿ ನಿಮಗೂ ಕೂಡ ಹೀಗೆ ಎನಿಸುತ್ತದೆ,

ಚೈನಾ ಸೆಟ್ ಕಥಾವಸ್ತು ಅಂತೂ ನಿಮ್ಮನ್ನು ಕಾಡದೇ ಬಿಡುವುದಿಲ್ಲ,,

Nagathihalli chandrashekar,sir ರವರು ಮುನ್ನುಡಿಯಲ್ಲಿ ಹೇಳಿರುವ ಹಾಗೆ, ಅಚ್ಚರಿ ಹುಟ್ಟಿಸುವಷ್ಟು ಭಿನ್ನತೆ, ಇಂಥ ಬರಹಗಾರ ಮಾತ್ರ ಅನಾವರಣ ಮಾಡುವ ಅಗೋಚರ ಲೋಕ, ದೇವರ ಕಾಲೋನಿ.ಯಲ್ಲಿ ಮೂಡಿರುವ ಚಿತ್ರಗಳು ಮತ್ತು ಪಾತ್ರಗಳು ಇದುವರೆಗೂ ಎಲ್ಲೂ ದಾಖಲಾದವುಗಳಲ್ಲ. ಚೈನಾಸೆಟ್ ನಲ್ಲಿರುವ ಅಂತ್ಯ ಬೆಚ್ಚಿ ಬೀಳಿಸುತ್ತದೆ,,

ಚೈನಾಸೆಟ್ hangover ನಿಂದ ಆಚೆ ಬಂದು ಉಯಿಲು ಎಂಬ ಕಥಾವಸ್ತು ನಿಮಗೆ ಆಶ್ಚರ್ಯ ವೆನಿಸುತ್ತದೆ,,

ಮೂರನೇ ಕಥಾವಸ್ತು,,(3)
°°°°°°°°°°°°°°°°°°°°°°°°°°°°°°°°°°°°°°°°°°°°°°°°°

ದೇವರ ಕಾಲೋನಿ ಪುಸ್ತಕ ಕೊಂಡುಕೊಂಡ ನಂತರ
ಪುಸ್ತಕದ ಮೇಲಿರುವ ಭಾವಚಿತ್ರ ಒಂದು ಹೆಂಗಸನ್ನು ಮತ್ತೊಂದು ಹೆಂಗಸು ತಲೆಬೋಳಿಸುವುದು, ಸಾಮಾನ್ಯವಾಗಿ ನೀವು ಯೋಚಿಸುತ್ತೀರಿ,, ಏನಿರಬಹುದು ಎಂದು,,?

ಉಯಿಲು ಕಥೆ ಸಂಪ್ರದಾಯವನ್ನೇ ಬದಲಾಯಿಸುತ್ತಾಳೆ ಸ್ವಾಮಿ ಗೌಡರ ಮಗಳು ಕವಿತಾ,

ಈ ಮೂರು ಕಥೆಗಳು ಭಿನ್ನ-ವಿಭಿನ್ನ ಕಥೆಗಳು ಅದರದೇ ಆದ ಛಾಪು ಮೂಡಿಸಿದೆ,,

ಪುಸ್ತಕ ಓದಿದ ನಂತರ ನಮಗೆ ನೆನಪಾಗುವುದು ಈ ಪುಸ್ತಕದ ಲೇಖಕ,chandrashekar bandiyappa, sir. ಅವರ ಶ್ರಮ ಎದ್ದು ಕಾಣುತ್ತದೆ
ಅವರು ಸೃಷ್ಟಿಸುವ ಪಾತ್ರ ಬೇರೊಂದು ಲೋಕಕ್ಕೆ ಕರೆದುಕೊಂಡು ಹೋದಂತಿದೆ,,

ಅವರ ಮುಂಬರುವ ಚಿತ್ರ ಮತ್ತು ಪುಸ್ತಕಕ್ಕೆ ಶುಭಾಶಯಗಳು,,,💐💐💐💐😍

P
Prashant Gouli
ಮೂರು ಅದ್ಭುತವಾದಂತಹ ಕತೆಗಳನ್ನೊಲ್ಗೊಂಡ ಪುಸ್ತಕ

ಎಲ್ಲರಿಗೂ ನಮಸ್ಕಾರ.... ಇತ್ತೀಚಿಗೆ ನಾನು #ದೇವರ_ಕಾಲೋನಿ ಅನ್ನೋ ಒಂದು ಪುಸ್ತಕ ಓದತೊಡಗಿದೆ ... ಅದನ್ನ ಬರಿದೋರು ಬೇರೆ ಯಾರು ಅಲ್ಲ,, ರಥಾವರ, ತಾರಕಾಸುರ ಚಿತ್ರಗಳ ಖ್ಯಾತಿಯ ಚಂದ್ರಶೇಖರ ಬಂಡಿಯಪ್ಪ ಸರ್... ನನಗೆ ಪುಸ್ತಕ ಓದುವ ಹವ್ಯಾಸ ಇರಲಿಲ್ಲ... ಓದಲು ಮುಖ್ಯ ಕಾರಣ ಅಂದ್ರೆ ಬಂಡಿಯಪ್ಪ ಸರ್ ರವರ ವಿಭಿನ್ನ ಕಥೆಯುಳ್ಳ ಚಿತ್ರಗಳು... ಅದೇ ಕುತೂಹಲದಿಂದ ನಾನು ದೇವರ ಕಾಲೋನಿ ಪುಸ್ತಕ ಓದಿದೆ.. ನನ್ನ ನಿರೀಕ್ಷೆಗೂ ಮೀರಿ ಪುಸ್ತಕ ತುಂಬಾ ಅದ್ಭುತವಾಗಿ ಬರಿದಿದ್ದಾರೆ...ಈ ಪುಸ್ತಕದಲ್ಲಿ 3 ಕಥೆಗಳು ಇವೆ... ಒಂದೊಂದು ಕಥೆನೂ ಒಂದಕ್ಕಿಂತ ಒಂದು ಭಿನ್ನವಾಗಿವೆ... ಮೊದ್ಲನೇ ಕಥೆ ದೇವರ ಕಾಲೋನಿ... ಇದ್ರಲ್ಲಿ ಭಿಕ್ಷುಕರ ಮತ್ತು ನಿರಾಶ್ರಿತರ ಬದುಕು... ನಿರಾಶ್ರಿತರ ಆಶ್ರಮದಲ್ಲಿನ ಬದುಕು... ರಾಜಕೀಯ ಕುತಂತ್ರ, ದುಡ್ಡು, ಅಧಿಕಾರದ ಆಸೆ, ಜಾತಿ ಮತಾಂತರ, ಇವೆಲ್ಲದರ ಮದ್ಯ ಒಂದು ಪ್ರೇಮ ಕಥೆ ಅದ್ಭುತವಾಗಿ ಕಥೆ ಬರಿದಿದ್ದಾರೆ,, ಇದರ ಅಂತ್ಯ ಮನಮುಟ್ಟುವಂತಿದೆ... ಪ್ರತಿಯೊಂದು ಪಾತ್ರನು ತುಂಬಾ ಚೆನ್ನಾಗಿ ರಚನೆ ಮಾಡಿದ್ದಾರೆ... ಎರಡನೇ ಕಥೆ ಚೈನಾ ಸೆಟ್... ಇದಂತೂ ಒಂದು ಅಚ್ಚರಿ ಮೂಡಿಸುವಂತ ಕಥೆ... ಚೈನಾದಲ್ಲಿ ಕಾಲೇಜು ಪಾರ್ಟಿಗಳಲ್ಲಿ ಮಾಡೋ ಇಲ್ಲಿಗಲ್ ಚಟವನ್ನ ತುಂಬಾ ವಿಭಿನ್ನವಾಗಿ ಭಯಂಕರವಾಗಿ ಬರಿದಿದ್ದಾರೆ... ಆ ಚಟ ಏನು ಅನ್ನೋದು ಪುಸ್ತಕದಲ್ಲಿ ನೀವೇ ಓದಿ... ಇದರ ಅಂತ್ಯ ಮಾತ್ರ ಬೆರಗು ಗೊಳಿಸುತ್ತೆ...
ಇನ್ನೂ ಮೂರನೇ ಕಥೆ... ಉಯಿಲು... ಇದ್ರಲ್ಲಿ ಹೆತ್ತವರಿಗೆ ಸಂಸ್ಕಾರ ಮಾಡೋದ್ರಲ್ಲಿ ಗಂಡು ಹೆಣ್ಣಿನ ನಡುವೆ ತಾರತಮ್ಯ ಏಕೆ ಅನ್ನೋದು ಮತ್ತು ಹೆಣ್ಣು ಸಂಸ್ಕಾರ ಕಾರ್ಯಗಳನ್ನ ಮಾಡುವದ್ರಲ್ಲಿ ತಪ್ಪೇನು ಅನ್ನೋದು ಸ್ವಾಮಿಗೌಡರ ವೈಚಾರಿಕತೆಯಲ್ಲಿ ತುಂಬಾ ಚೆನ್ನಾಗಿ ಬರಿದಿದ್ದಾರೆ...ನೀವು ಈ ಪುಸ್ತಕವನ್ನ ಓದಿ ಖಂಡಿತ ಇಷ್ಟಆಗುತ್ತೆ,,, ಇಂತಹ ಒಂದು ಅದ್ಭುತವಾದಂತಹ ಪುಸ್ತಕವನ್ನ ರಚನೆ ಮಾಡಿದ್ದಕ್ಕೆ ಬಂಡಿಯಪ್ಪ ಸರ್ ಅವರಿಗೆ ಧನ್ಯವಾದಗಳನ್ನ ಹೇಳೋಕೆ ಇಷ್ಟಪಡ್ತೇನಿ.. ಇಂತಹ ಇನ್ನಷ್ಟು ವಿಭಿನ್ನ ಪುಸ್ತಕಗಳು ಮತ್ತು ಚಿತ್ರಗಳು ನಿಮ್ಮಿಂದ ನಿರೀಕ್ಷೆ ಮಾಡ್ತೇವಿ ಸರ್.. ನಿಮ್ಮ ಮುಂದಿನ ಎಲ್ಲ ಯೋಜನೆಗಳಿಗೆ ಒಳ್ಳೇದಾಗ್ಲಿ ಸರ್...

R
R.Yash Yallaling
ದೇವರ ಕಾಲೋನಿ ಪುಸ್ತಕವು ವಿಷಯಗಳಿಗನುಗುಣವಾಗಿರುವುದು ಪುಸ್ತಕದ ವಿಶೇಷತೆ! ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥ ಆಗುತ್ತದೆ.

ಸಿನಿಮಾವಾಗಲಿ, ಪುಸ್ತಕವಾಗಲಿ ಅದ್ಭುತವಾದ ಕಥಾವಸ್ತುವಿನೊಂದಿಗೆ ಪರಿಶ್ರಮವಿದ್ದರೆ ಗೆಲುವಾಗುತ್ತದೆ ಎಂದು ನಿರೂಪಿಸಿದವರ ಸಾಲಿನಲ್ಲಿ ನನ್ನ ಗುರುಗಳಾದ ಚಂದ್ರಶೇಖರ್ ಬಂಡಿಯಪ್ಪ ರವರು ಒಬ್ಬರು ಎನ್ನುವುದು ಸಂತೋಷದ ವಿಷಯ.

ದೇವರ ಕಾಲೋನಿ ಈ ಕಥಾಸಂಕಲನ ಓದುಗರಿಗೆ ಹೊಸ ಅನುಭವ ನೀಡುತ್ತದೆ.

ಓದುವುದರ ಮೂಲಕ ಹರಸಿ - ಹಾರೈಸಿ

❤️🤝ಧನ್ಯವಾದಗಳು🙏✌️

ಅಭಿಷೇಕ ದೆಸಾಯಿ
ಅತ್ಯುತ್ತಮ ಕಥಾ ಸಂಕಲನ

ರಥಾವರದ ನಿರ್ದೇಶಕರಾದ ಚಂದ್ರಶೇಖರ ಬಂಡಿಯಪ್ಪ ಸರ ಅವರ ದೇವರ ಕಾಲೋನಿ ಓದಿದೆ. ಸಂಭಾಷಣೆ ಮತ್ತು ಸಾಹಿತ್ಯದ ಆಳ ಅಗಲವನ್ನು ನಿರ್ದೇಶಕರಾಗಿ ಅರ್ಥಮಾಡಿಕೊಂಡು ಬರೆದ್ದಿದ್ದಾರೆ ಅನಿಸುತ್ತದೇ
ದೇವರ ಕಾಲೋನಿ, ಚೈನಾ ಸೆಟ್, ಉಯಿಲು ಕಥೆಗಳು ದಿಗಿಲು,ಆಶ್ಚರ್ಯ, ಭಯ,ನಗು, ಹುಟ್ಟಿಸುವಂತಿದೇ ಅವರ ಸಾಹಿತ್ಯ ಭಂಡಾರ ಸಮೃದ್ಧವಾಗಿದ್ದು ಸಿನಿಮಾಗಳ ಜೊತೆಗೆ ಇನ್ನೊಂದಿಷ್ಟು ಕಥಾ ಸಂಕಲನಗಳು ಹೂರಬರಲಿ ಎನ್ನುದು ಓದುಗನಾದ ನನ್ನ ಆಶಯ
ಧನ್ಯವಾದಗಳು
ಅಭಿಷೇಕ ದೇಸಾಯಿ
ಧಾರವಾಡ