ಬರಹಗಾರ: ಡಾ.ಗಿರಿ ಹೆಗಡೆ
ಪ್ರಕಾಶಕರು - ಅಕ್ಷರ ಪ್ರಕಾಶನ
ಬ್ರಿಟಿಷ್ ಸಾಮ್ರಾಜ್ಯಶಾಹಿಯ ಮೇಲಿನ ಐತಿಹಾಸಿಕ ಪುಸ್ತಕಗಳು ಮತ್ತು ಕಾದಂಬರಿಗಳು ೧೮೫೮ರಲ್ಲಿ ಶುರುವಾದ ಇಂಗ್ಲಿಷ್ ರಾಜರಾಣಿಯರ ಆಡಳಿತವನ್ನು ವೈಭವೀಕರಿಸುತ್ತವೆ. ಆದರೆ ವೈಭವವೆಲ್ಲ ಬಿಳಿ ಬ್ರಿಟಿಷರ ಪಾಲಾಗಿತ್ತು. ಇಂಡಿಯಾದ ಜನರಿಗೆ ದೊರಕಿದ್ದು ಅವರ ದೇಶವನ್ನೇ ಕವಿದ ಗ್ರಹಣ – ಶತಮಾನಗಳ ಬಿಳಿಗ್ರಹಣ. ಈ ಕಾದಂಬರಿ ಹೆಚ್ಚು ಪರಿಚಿತವಲ್ಲದ ಈಸ್ಟ್ ಇಂಡಿಯ ಕಂಪನಿಯ ಹೆಣ್ಣು ಗಂಡುಗಳ ಕತೆ. ಅವರ ದಬ್ಬಾಳಿಕೆಯ ಕತೆ. ಅವರ ದಬ್ಬಾಳಿಕೆಗೆ ಒಳಗಾದವರ ಕತೆ. ಬ್ರಿಟಿಷರು ಇಂಡಿಯಾದಲ್ಲಿ ಬೇರೂರಲು ಅವಕಾಶ ಮಾಡಿಕೊಟ್ಟ ದೇಶದ ಸ್ವಾರ್ಥಿಗಳ ಮತ್ತು ದೇಶದ್ರೋಹಿಗಳ ಕತೆ. ಇದು ಐತಿಹಾಸಿಕ ಸತ್ಯಾಂಶಗಳನ್ನೊಳಗೊಂಡ ಕಾಲ್ಪನಿಕ ಕಾದಂಬರಿ. ಪ್ರಾಸಂಗಿಕವಾಗಿ ಬಂದ ಕೆಲವು ನಿಜ ವ್ಯಕ್ತಿಗಳ ಹೆಸರುಗಳನ್ನು ಬಿಟ್ಟರೆ ಐತಿಹಾಸಿಕವಾಗಿ ನಿಜವಾದ ವ್ಯಕ್ತಿಗಳು ಈ ಕಾದಂಬರಿಯಲ್ಲಿ ಇಲ್ಲ. ಆದರೆ ಅಂತಹ ವ್ಯಕ್ತಿಗಳು, ಅವರು ಮಾಡಿದ ಕೆಲಸಗಳು ಐತಿಹಾಸಿಕವಾಗಿ ಪ್ರಮಾಣಬದ್ಧವಾಗಿವೆ. ಆದ್ದರಿಂದ ಇದು ಐತಿಹಾಸಿಕ-ಸಾಮಾಜಿಕ-ರಾಜಕೀಯ ಕಾದಂಬರಿ…