ಸಮಾಜದ ಮನಸ್ಸಿಗೆ ಬೇಕಾಗಿರುವ ಚಿಕಿತ್ಸೆಯಂತೆ ಸೇತೂರಾಮ್ ಅವರ ಮೂರು ಕಥೆಗಳು ಇಲ್ಲಿವೆ.
‘ನಂಗೇಲಿ’ ಇಲ್ಲಿ ಇಡೀ ಪ್ರಜಾಪ್ರಭುತ್ವದ ಅಧಃಪತನದ ನಾಟಕವು ಪ್ರಧಾನ ನೆಲೆಯಲ್ಲಿದೆ. ನಮ್ಮ ದೇಶ ಕೃಷಿಪ್ರಧಾನ ದೇಶವೆನ್ನುತ್ತೇವೆ. ದೇಶದ ಬಹುದೊಡ್ಡ ಜನಸಮುದಾಯವು ತೊಡಗಿರುವ ಈ ವೃತ್ತಿಗೆ ಸಂಬಂಧಪಟ್ಟಂತೆ, ಮೊದಲ ‘ಹಸಿರುಕ್ರಾಂತಿ’ಯು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಅತಿಯಾಗಿ ಹೆಚ್ಚಿಸಿತು. ಸರ್ಕಾರವು ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಗೊಬ್ಬರಗಳ ಖರೀದಿಗೆ ರೈತರಿಗೆ ಸಬ್ಸಿಡಿ ನೀಡತೊಡಗಿತು. ಸರ್ಕಾರದ ಈ ಸೌಲಭ್ಯವನ್ನು ರೈತರು ಮತ್ತು ಗೊಬ್ಬರಗಳ ಮಾರಾಟಗಾರರ ಅಪವಿತ್ರ ಕೂಟವು ದುರುಪಯೋಗ ಮಾಡಿಕೊಳ್ಳ ತೊಡಗಿತು; ಸರ್ಕಾರ ವನ್ನು ದೋಚತೊಡಗಿತು. ಸರ್ಕಾರೀ ಅಧಿಕಾರಿಗಳೂ ಈ ದುಷ್ಟ ಕೂಟದಲ್ಲಿ ಶಾಮೀಲಾದರು. ರಾಜಕೀಯ - ವಾಣಿಜ್ಯಾತ್ಮಕವಾದ ಈ ಭ್ರಷ್ಟತೆಯು ತನ್ನಷ್ಟಕ್ಕೆ ತಾನು ಎನ್ನುವಂತೆ ಪ್ರತ್ಯೇಕವಾಗಿ ಉಳಿಯುವುದಿಲ್ಲ. ಅನೈತಿಕತೆಯಿಂದ ಬಂದ ಹಣ ಕುಟುಂಬದಲ್ಲಿ ಅನೈತಿಕತೆಯ ಬೀಜವನ್ನೂರುತ್ತದೆ; ಅದರ ವಿಘಟನೆಗೆ ಕಾರಣವಾಗುತ್ತದೆ. ಸೋಮಸುಂದರನ ಕುಟುಂಬದ ವಿಘಟನೆಯ ದುರಂತವನ್ನು ಕಥೆ ತೀವ್ರವಾಗಿ ಹೇಳುತ್ತದೆ. ಮಗ ಕುಡುಕನಾಗುತ್ತಾನೆ; ಷಂಡನಾಗುತ್ತಾನೆ. ಎಂಜಲಿನ ಕಾಸಿಗೆ ಕೈಯೊಡ್ಡುತ್ತ ತಲೆಹಿಡುಕನಾಗುತ್ತಾನೆ. ಸೊಸೆ ಸಿಡಿದುನಿಲ್ಲುತ್ತಾಳೆ; ಮನೆಯಲ್ಲಿಯೇ ಗೆಣೆಕಾರನೊಬ್ಬ ನೊಂದಿಗೆ ಕೂಟ ನಡೆಸುತ್ತಾಳೆ; ಕೊನೆಗೆ ಗೆಣೆಕಾರನ ವಂಚನೆಗೆ ಈಡಾಗಿ ನೇಣುಬಿಗಿದು ಕೊಂಡು ಸಾಯುತ್ತಾಳೆ.
‘ಒಂದೆಲಗ’ ಕಥೆಯಲ್ಲಿ ಸಿಂಗಲ್-ಪೇರೆಂಟ್ನ ಗಂಡು ಹೆಣ್ಣುಗಳ ಜೀವನಚಿತ್ರಗಳಿವೆ.
ದಹನ’ ಉಳಿದೆರಡು ಕಥೆಗಳಿಗಿಂತ ಭಿನ್ನವಾದದ್ದು ಮತ್ತು ಹೆಚ್ಚು ಸಂಕೀರ್ಣವಾದ ಕಥೆಯಾಗಿದೆ. ಇಲ್ಲಿ ಮುರಿದುಹೋಗುತ್ತಿದ್ದ ತನ್ನ ಕೌಟುಂಬಿಕ ಬದುಕನ್ನು ಸಂಭಾಳಿಸಿ ಪುನಃರಚಿಸಿಕೊಳ್ಳುವ ಅಕ್ಷತಾ, ಗಂಡು ಒಡ್ಡುವ ಆಮಿಷವನ್ನು ತನ್ನ ಅಂತರಂಗದ ಕೆಚ್ಚನ್ನು ಹೆಚ್ಚಿಸಿಕೊಳ್ಳುವ ಚಿಕಿತ್ಸೆಯಂತೆ ನಿರ್ವಹಿಸುತ್ತಾಳೆ.
ಪುಟಗಳು: 148
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !
ಸೇತುರಾಂ ರವರ 'ದಹನ' ದ ವಿಡಿಯೋ ವಿಮರ್ಶೆ ಇಲ್ಲಿದೆ: