Click here to Download MyLang App

ಶ್ರೀನಿವಾಸ ಕಕ್ಕಿಲ್ಲಾಯ ಬಿ,    ಡಾ. ಬಾಲಸರಸ್ವತಿ ಪಣಂಬೂರು,  ಕೊರೋನ ಹೆದರದಿರೋಣ,  Srinivasa Kakkilaya B,    Dr. Balasaraswati Panambur,  Corona HedaradiroNa,

ಕೊರೋನ ಹೆದರದಿರೋಣ (ಇಬುಕ್)

e-book

ಪಬ್ಲಿಶರ್
ಡಾ|| ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ, ಡಾ|| ಬಾಲಸರಸ್ವತಿ ಪಣಂಬೂರು
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

 

ಲೇಖಕರು:

ಡಾ|| ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ

ಡಾ|| ಬಾಲಸರಸ್ವತಿ ಪಣಂಬೂರು

 

ಈ ವರ್ಷ 2020ರ ಮೊದಲಿನಿಂದಲೇ ಭೂವಾಸಿಗಳಿಗೆಲ್ಲ ಆತಂಕವುಂಟಾಗುವಂತೆ ಹರಡತೊಡಗಿದ್ದು ಹೊಸ ಕೊರೋನ ವೈರಸ್. ಈ ಹೊಸ ಸೂಕ್ಷ್ಮಾಣು ಕೋಟಿಗಟ್ಟಲೆ ಜನರಲ್ಲಿ ಸೋಂಕನ್ನುಂಟು ಮಾಡಿ, ಆರೇಳು ಲಕ್ಷ ಜನರ ಸಾವಿಗೆ ಕಾರಣವಾದದ್ದಷ್ಟೇ ಅಲ್ಲ, ಮನುಷ್ಯರ ದೌರ್ಬಲ್ಯಗಳನ್ನು, ಅಮಾನವೀಯ ಕ್ರೌರ್ಯಗಳನ್ನು, ಹಾಗೆಯೇ ಮಾನವೀಯತೆಯ ಉತ್ಕಟ ನಿದರ್ಶನಗಳನ್ನು, ವೈಜ್ಞಾನಿಕ-ವೈಚಾರಿಕ ಚಿಂತನೆಗಳ ಕೊರತೆಯನ್ನು, ಆಡಳಿತ ವ್ಯವಸ್ಥೆಗಳ ಟೊಳ್ಳುತನವನ್ನು, ಅನಿರೀಕ್ಷಿತವಾಗಿ ಎದುರಾಗುವ ಸಂಕಷ್ಟವನ್ನು ಎದುರಿಸಲಾಗದ ವೈಫಲ್ಯಗಳನ್ನು ಎಲ್ಲವನ್ನೂ ಎತ್ತಿ ಹೊರಹಾಕಿತು.

ಈ ನಾಲ್ಕು ತಿಂಗಳುಗಳಲ್ಲಿ ಕೊರೋನ ಸೋಂಕು ನಿರೀಕ್ಷೆಯಂತೆಯೇ ಹಬ್ಬಿದೆ, ಈ ಕಾಲಾವಕಾಶವನ್ನು ಬಳಸಿ ಅದನ್ನೆದುರಿಸುವ ಕ್ರಮಗಳನ್ನು ಕೈಗೊಳ್ಳುವಲ್ಲಿ ನಮ್ಮ ವ್ಯವಸ್ಥೆಯು ಸೋತಿರುವುದು ಸ್ಪಷ್ಟವಾಗಿದೆ. ಒಂದು ಹೊಸ ಸೋಂಕಿನ ಬಗ್ಗೆ ಇಷ್ಟೊಂದು ಅಗಾಧವಾದ ಮಾಹಿತಿಯು ಇಷ್ಟೊಂದು ಕಿರು ಅವಧಿಯೊಳಗೆ ಇಷ್ಟೊಂದು ಸುಲಭವಾಗಿ, ಮುಕ್ತವಾಗಿ, ವ್ಯಾಪಕವಾಗಿ ಮೊದಲೆಂದೂ ಲಭ್ಯವಾಗಿರಲಿಲ್ಲ. ಆದರೆ ಈ ಮಾಹಿತಿಯನ್ನು, ವಿಜ್ಞಾನ-ತಂತ್ರಜ್ಞಾನಗಳ ಅತ್ಯದ್ಭುತ ಸಾಧನೆಗಳನ್ನು, ಬಳಸಿಕೊಳ್ಳುವ ಜಾಣ್ಮೆಯನ್ನು ಮನುಷ್ಯರು ತೋರಿಸಲಿಲ್ಲ.

ಕಳೆದ 2019ರ ಡಿಸೆಂಬರ್ ಕೊನೆಗೆ ಚೀನಾದಲ್ಲಿ ಪತ್ತೆಯಾಗಿ, 2020ರ ಫೆಬ್ರವರಿ ಅಂತ್ಯದ ವೇಳೆಗೆ ಅಲ್ಲಿ ಸುಮಾರು 80 ಸಾವಿರ ಜನರಿಗೆ ಸೋಂಕಿ, 3000 ಜನರ ಸಾವಿಗೆ ಕಾರಣವಾದ ಈ ಹೊಸ ವೈರಸ್ ಬಗ್ಗೆ ಆಗಿಂದಾಗ್ಗೆ ಪ್ರಕಟವಾಗುತ್ತಿದ್ದ ಮಾಹಿತಿಯನ್ನು ಸಂಗ್ರಹಿಸಿ, ಮಾರ್ಚ್ ಮೊದಲಿನಿಂದಲೇ ಈ ಕೊರೋನ ಸೋಂಕಿನ ಬಗ್ಗೆ, ಅದರಿಂದ ನಮ್ಮ ನಾಡಿಗೆ ಆಗಬಹುದಾದ ಸಮಸ್ಯೆಗಳ ಬಗ್ಗೆ, ಅವನ್ನು ನಿಭಾಯಿಸಲು ನಾವಿಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಕನ್ನಡಿಗರಿಗೂ, ಕರ್ನಾಟಕ ಸರಕಾರಕ್ಕೂ ನಾವು ಹೇಳುತ್ತಲೇ ಬಂದಿದ್ದೇವೆ. ಇವು ವಾರ್ತಾಭಾರತಿ, ಪ್ರಜಾವಾಣಿ, ವಿಜಯಕರ್ನಾಟಕ ವಿಜಯವಾಣಿ ಹಾಗೂ ಇತರ ಹಲವು ಪತ್ರಿಕೆಗಳಲ್ಲಿ, ಟಿವಿ9, ಪವರ್ ಟಿವಿ, ನ್ಯೂಸ್ 14, ದಿಗ್ವಿಜಯ ನ್ಯೂಸ್‍ಗಳಲ್ಲಿ ಮತ್ತು ಆಕಾಶವಾಣಿ ಕಾರವಾರ ಹಾಗೂ ರಾಯಚೂರು ಕೇಂದ್ರಗಳಿಂದ ಪ್ರಕಟವಾಗಿವೆ; ಅವರೆಲ್ಲರಿಗೂ ನಾವು ಆಭಾರಿಗಳಾಗಿದ್ದೇವೆ.

ಆರಂಭದಿಂದಲೇ ಹೊಸ ಕೊರೋನ ಸೋಂಕಿನ ಬಗ್ಗೆ ಪ್ರಕಟವಾಗುತ್ತಲೇ ಇರುವ ವೈಜ್ಞಾನಿಕ ಮಾಹಿತಿಯನ್ನೂ, ಸೋಂಕಿನ ಹರಡುವಿಕೆ ಮತ್ತು ಅದರಿಂದಾಗಿರುವ ಸಾವುನೋವುಗಳ ಬಗೆಗಿನ ಅಂಕಿಅಂಶಗಳನ್ನೂ, ಸೋಂಕನ್ನು ನಿಭಾಯಿಸುವಲ್ಲಿ ಬೇರೆ ಬೇರೆ ದೇಶಗಳು ಕೈಗೊಂಡಿರುವ ಕ್ರಮಗಳ ವರದಿಗಳನ್ನೂ ಮನನ ಮಾಡಿಕೊಂಡು ಈ ಕೃತಿಯನ್ನು ರಚಿಸಿದ್ದೇವೆ. ನಮ್ಮ ದೇಹದಲ್ಲೂ, ನಮ್ಮ ಚರ್ಮದಲ್ಲೂ ಉಂಟಾಗುವ ಅನೇಕ ಸಮಸ್ಯೆಗಳಿಗೆ ನಮ್ಮ ದೇಹದ ಉಪಾಪಚಯದೊಂದಿಗೆ ಮತ್ತು ಅದಕ್ಕೆ ಮೂಲವಾಗಿರುವ ನಮ್ಮ ಆಹಾರಕ್ರಮದೊಂದಿಗೆ ಇರುವ ಸಂಬಂಧಗಳ ಬಗ್ಗೆ ಕಳೆದೆರಡು ದಶಕಗಳಿಂದ ಅಧ್ಯಯನಗಳನ್ನು ಮಾಡುತ್ತಿರುವವರಾಗಿ, ಈ ಹೊಸ ಕೊರೋನ ಸೋಂಕಿನಲ್ಲೂ ಉಪಾಪಚಯ ಸಂಬಂಧಿ ಕಾಯಿಲೆಗಳಿದ್ದವರಲ್ಲೇ ಹೆಚ್ಚಿನ ಸಮಸ್ಯೆಗಳಾಗುತ್ತಿರುವುದನ್ನು ಗಮನಿಸಿ, ಆ ನೆಲೆಯಲ್ಲಿ ಹೊಸ ಕೊರೋನ ಸೋಂಕನ್ನು ತಿಳಿಯುವ, ತಿಳಿಸುವ ಪ್ರಯತ್ನವನ್ನೂ ನಾವಿಲ್ಲಿ ಮಾಡಿದ್ದೇವೆ.

 

- ಡಾ|| ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ

- ಡಾ|| ಬಾಲಸರಸ್ವತಿ ಪಣಂಬೂರು

 

ಪುಟಗಳು: 180

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !