ಪ್ರಕಾಶಕರು: ಮೈತ್ರಿ ಪ್ರಕಾಶನ
Publisher: Mythri Prakashana
'ಕೂರ್ಗ್ ರೆಜಿಮೆಂಟ್' ಕಥೆಗಳನ್ನ ಓದುತ್ತಾ ಹೋದಂತೆ ಮೊದಲು ನನ್ನನ್ನ ಕಾಡಿದ ಪ್ರಶ್ನೆಯೇ ಇದು!.ನಿಜಕ್ಕೂ ಇದು ಇವರ ಮೊದಲ ಪುಸ್ತಕವಾ!? ಅನ್ನೋದು. ಅದೆಷ್ಟು ಸರಳವಾಗಿ, ಸರಳವಾದ ಭಾಷೆಯಲ್ಲಿ ಕಥೆಗಳನ್ನ ಹೇಳುತ್ತಾ ಹೋಗಿದ್ದೀರಿ ಅಂದ್ರೆ, ಕಥೆಗಳನ್ನ ಓದುತ್ತಾ ಹೋದಂತೆ ನಮ್ಮ ಕಣ್ಣು ಮುಂದೆ ಸಿನಿಮಾವೊಂದು ಓಡುತ್ತಿದೆಯೇನೋ ಎನ್ನುವ ಅನುಭವ..! ಕಥೆಗಳಲ್ಲಿನ ಒಂದೊಂದು ಪಾತ್ರವೂ ಕಣ್ಣ ಮುಂದೆ ಸುಳಿದು ಹೋಗುವಾಗ ಅದೇನೋ ಒಂಥರ ಖುಷಿ.! ಆ ಕಥೆಗಳಲ್ಲಿ ನಾವುಗಳು ಸಹ ಒಂದು ಪಾತ್ರವಾಗಿ, ನಮ್ಮ ಮುಂದೆಯೇ ಆ ಕಥೆಗಳು ನಡೆಯುತ್ತಿವೆಯೋ ಎನ್ನುವಂತಹ ಅನುಭವ..! ಮೊದಲ ಕಥೆ 'ಕೂರ್ಗ್ ರೆಜಿಮೆಂಟ್' ನಿಂದ ಹಿಡಿದು ಪುಸ್ತಕದ ಕೊನೆಯ ಕಥೆ 'ಇಝತ್ ಓ ಇಕ್ಬಾಲ್' ವರೆಗಿನ ಪ್ರತಿಯೊಂದು ಕಥೆಯೂ ಮನಸ್ಸಿನ ಒಳಗೆ ಇಳಿದು ನಮ್ಮನ್ನ ಯೋಚನೆಗೆ ಹಚ್ಚುವಂತೆ ಮಾಡುತ್ತವೆ ಎನ್ನುವುದರಲ್ಲಿ ಯಾವ ಅತಿಶೋಕ್ತಿಯು ಇಲ್ಲ. ಸೈನಿಕರ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನ ಕಥೆಯಾಗಿಸಿದ, 'ಬಂದೂಕು ಹಿಡಿದವರ ನಾಡಿಮಿಡಿತ'ವನ್ನ ಅರಿತುಕೊಂಡು ಅವುಗಳನ್ನ ಪುಸ್ತಕ ರೂಪಕ್ಕೆ ಇಳಿಸಿದ ಮೇಜರ್| ಡಾ| ಕುಶ್ವಂತ್ ಕೋಳಿಬೈಲು ಅವರಿಗೆ ನಿಜಕ್ಕೂ ಒಂದು 'ಸಲ್ಯೂಟ್' ಹೊಡೆಯಲೇ ಬೇಕು.
- ಬೋಪಣ್ಣ ಬೊಳ್ಳಿಯಂಗಡ ಅಪ್ಪು
ಪುಟಗಳು: 87
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !
ಬಂದೂಕುಹಿಡಿದವರನಾಡಿಮಿಡಿತ ..
ಶೈಲಜಾ ಸಂತೋಷ್ ಮೇಡಂ ದೃಷ್ಟಿಯಲ್ಲಿ ಕೂರ್ಗ್ ರೆಜಿಮೆಂಟ್