ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ
Publisher: Centre for Agricultural Media
ಜೇನುಹುಳುಗಳು ಎಂದೊಡನೆ ಜನಸಾಮಾನ್ಯರಿಗೆ ಹೊಳೆಯುವುದು ಅವು ಉತ್ಪಾದಿಸುವ ರುಚಿಕರ ಹಾಗೂ ಅಮೂಲ್ಯ ಜೇನುತುಪ್ಪ ಮತ್ತು ಅವು ಆಗಾಗ ನಮ್ಮನ್ನು ಚುಚ್ಚಿ ನೋವನ್ನುಂಟುಮಾಡುವ ವಿಷಯ. ಆದರೆ ಚುಚ್ಚದೇ ಇರುವಂಥ ಜೇನ್ನೊಣ ನಮ್ಮ ಪರಿಸರದಲ್ಲಿದೆ ಎಂಬ ಸಂಗತಿ ಅನೇಕರಿಗೆ ತಿಳದಿಲ್ಲ. ಇಂತಹ ಜೇನುಗಳೂ ಸಹ ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಔಷಧೀಯ ಗುಣಗಳನ್ನೊಳಗೊಂಡ ಜೇನುತುಪ್ಪವನ್ನು ಉತ್ಪಾದಿಸುತ್ತವೆ ಎಂಬುದು ಗಮನಾರ್ಹ ವಿಚಾರ.
ಮುಜಂಟಿ ಬಗೆಗಿನ ಸಮಗ್ರ ವಿವರ, ಅದರ ವೈಶಿಷ್ಟ್ಯ, ಸಾಕಣಿ ವಿಧಾನ, ಜೇನುತುಪ್ಪ ಬಿಡಿಸಿ, ಸಂಸ್ಕರಿಸುವುದು, ಈ ಜೇನುತುಪ್ಪದ ಔಷಧೀಯ ಗುಣಗಳು ಇತ್ಯಾದಿ ಅಗತ್ಯ ವಿಷಯಗಳ ಬಗ್ಗೆ ಹಾಗೂ ಈ ಜೇನುಹುಳುಗಳನ್ನು ಕೇರಳ, ಕರ್ನಾಟಕ. ರಾಜ್ಯಗಳಲ್ಲಿ, ಈಗಾಗಲೇ ಯಶಸ್ವಿಯಾಗಿ ಸಾಕಣೆ ಮಾಡುತ್ತಿರುವ ಹಲವಾರು ಜೇನುಕೃಷಿಕರ ಬಗ್ಗೆ. ಈ ಪುಸ್ತಕದಲ್ಲಿ ತುಂಬ ಉಪಯುಕ್ತ. ಮಾಹಿತಿಯನ್ನು ಲೇಖಕರು ದಾಖಲಿಸಿದ್ದಾರೆ. ಈಗಾಗಾಲೇ ಮುಜಂಟಿ ಸಾಕಣೆ. ಮಾಡುತ್ತಿರುವ ಹಾಗೂ ಹೊಸದಾಗಿ ಇದಕ್ಕೆ. ಕೈಹಾಕುವವರಿಗೆ ಇದು ತುಂಬ ಉಪಯುಕ್ತವೆನಿಸುವುದರಲ್ಲಿ ಎರಡು ಮಾತಿಲ್ಲ.
ಡಾ. ಎಸ್.ವಿ. ಹಿತ್ತಲಮನಿ
ಪುಟಗಳು: 176
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !