ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ಚಿತ್ರಾಂಗದೆಯ ಕಥೆ ವ್ಯಾಸಭಾರತದ ಮಹಾಸಾಗರದಲ್ಲಿ ಬಿಂದು ಮಾತ್ರವಾಗಿ ಕಾಣಿಸಿಕೊಂಡಿದೆ. 'ಕನ್ನಡ ಜೈಮಿನಿ ಭಾರತ' ದಲ್ಲಿ ಅರ್ಜುನ ಬಬ್ರುವಾಹನರ ಕಾಳಗವನ್ನು ವರ್ಣಿಸುವಾಗ ಲಕ್ಷ್ಮೀಶನು ಪ್ರಾಸಂಗಿಕವಾಗಿ ಆಕೆಯ ಪಾತ್ರವನ್ನು ನಮ್ಮ ಮುಂದೆ ತರುತ್ತಾನೆ. ಅಲ್ಲಿ ನಮ್ಮ ಮುಂದೆ ಬರುವವಳು ಬಬ್ರುವಾಹನನ ತಾಯಿ. ಅಲ್ಲಿ ಆಕೆಯ ಚಿತ್ರವನ್ನು 'ಉತ್ತರ ಚಿತ್ರಾಂಗದಾ' ಎಂದು ಕರೆಯಬಹುದು. ವಂಗ ಕವಿ ರವೀಂದ್ರನಾಥ ಠಾಕೂರರ ಇಂಗ್ಲೀಷಿಗೆ ಭಾಷಾಂತರಗೊಂಡಿರುವ 'ಚಿತ್ರಾ' ನಾಟಕದಲ್ಲಿ ಚಿತ್ರಾಂಗದೆಯ ಪೂರ್ವಜೀವನವನ್ನು ಚಿತ್ರಿಸಿದ್ದಾರೆ. ಅಲ್ಲಿ ಆಕೆಯನ್ನು ಶೃಂಗಾರದ ಪರಿಪೂರ್ಣತೆಯಲ್ಲಿ ಚಿರಸ್ಥಾಯಿಯನ್ನಾಗಿ ಮಾಡಿದ್ಧಾರೆ. ಅವರ ಚಿತ್ರವನ್ನು 'ಪೂರ್ವ ಚಿತ್ರಾಂಗದಾ' ಎಂದು ಕರೆಯಬಹುದು. ಈ ಕನ್ನಡ ಕಾವ್ಯದಲ್ಲಿ ಸೃಷ್ಟಿಯಾಗಿರುವ ಚಿತ್ರಾಂಗದೆಯ ಮೈಯ್ಯಲ್ಲಿ ಲಕ್ಷ್ಮೀಶನ ಹಾಗು ಠಾಕೂರರ ಚಿತ್ರಾಂಗದೆಯರ ನೆತ್ತರು ಕೊಂಚಮಟ್ಟಿಗೆ ಹರಿಯುತ್ತಿದೆಯಾದರೂ ವಂಶಪಾರಂಪರ್ಯವೇ ವಿನಾ ಮತ್ತೆ ಬಹು ವಿಷಯಗಳಲ್ಲಿ ಈಕೆ ಬೇರೆಯಾಗಿದ್ದಾಳೆ. ಇಲ್ಲಿ ಲಕ್ಷ್ಮೀಶನ ಕೃತಿಯಲ್ಲಿರುವಂತೆ ಅತಿಮಾನುಷ ಪೌರಾಣಿಕತೆಯಿಂದ ಪಾರಾಗುವ ಅನುಕೂಲವಿಲ್ಲ; ಠಾಕೂರರ ಕೃತಿಯಲ್ಲಿರುವಂತೆ ತಾರುಣ್ಯದ ಸಂಯಮರಹಿತ ವ್ರತಭ್ರಷ್ಟತೆಗೆ ಪ್ರಾಯಶ್ಚಿತ್ತ ವಿಹೀನವಾದ ಭೋಗಕಿರೀಟವನಿಟ್ಟು ಪ್ರೇಮದ ಮಂಗಳಾರತಿಯೆತ್ತುವುದಕ್ಕು ಸಾಧ್ಯವಾಗಿಲ್ಲ.
- ಕುವೆಂಪು
ಪುಟಗಳು: 92
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !