ಬರಹಗಾರ: ಕುವೆಂಪು
ಆಡಿಯೋ ಪುಸ್ತಕದ ಅವಧಿ : 45 ನಿಮಿಷ
ಸಹಯೋಗ:
ನಾವು ಸ್ಟುಡಿಯೋ, ಮೈಸೂರು
ಜರ್ಮನಿಯ ಆ ಕಾವ್ಯ ಕನ್ನಡದ ಕುವೆಂಪು ಅವರಿಗೆ ಪ್ರೇರಣೆ ನೀಡುತ್ತದೆ. ಹ್ಯಾಮ್ಲಿನ್ನ ಪೈಡ್ ಪೈಪರ್ ಇಲ್ಲಿ ಬೊಮ್ಮನಹಳ್ಳಿಯ ಕಿಂದರಿಜೋಗಿಯಾಗುತ್ತಾನೆ. ಕನ್ನಡದ ಈ ಕವಿತೆಯಲ್ಲಿ ಎಲ್ಲೂ ಇದು ಬೇರೆ ದೇಶದ್ದು ಎನಿಸುವುದೇ ಇಲ್ಲ. ತುಂಗಾತೀರದ ಬೊಮ್ಮನಹಳ್ಳಿಯ ಅಪ್ಪಟ ಜಾನಪದ ಕವಿತೆಯಾಗಿ ಇದು ಮರುಹುಟ್ಟು ಪಡೆದಿದೆ. ಅದು ಮಕ್ಕಳಿಗಾಗಿ ಬರೆದ ನೀಳ್ಗವಿತೆ. ಓದುತ್ತ ಹೋದಾಗ ಅದು ಮುಗಿದದ್ದೇ ಗೊತ್ತಾಗುವುದಿಲ್ಲ. ಕುವೆಂಪು ಕಣ್ಣಿಗೆ ಅದೆಷ್ಟು ಬಗೆಯ ಇಲಿಗಳು ಕಾಣುತ್ತವೆ ನೋಡಿ:
ಜೋಗಿಯು ಬಾರಿಸೆ ಕಿಂದರಿಯ
ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸೊಂಡಿಲಿ,
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ,
ಮಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ,
ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ,
ಎಲ್ಲಾ ಬಂದವು ಓಡೋಡಿ...
ಇಡೀ ಕಾವ್ಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ರಸಾನುಭೂತಿಯನ್ನು ನೀಡುತ್ತದೆ. ಅದಕ್ಕೇ ಇರಬೇಕು, ಅದು ಹುಟ್ಟಿ 93 ವರ್ಷ ಕಳೆದರೂ ಹಳೆಯದಾಗಿಲ್ಲ.
ಸುಭಾಸ ಯಾದವಾಡ
ಮೂಲ: ವಿಜಯವಾಣಿ ಪತ್ರಿಕೆಯ ಬರಹ ( https://www.vijayavani.net/
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.