
ನೀವೇನಂತೀರಿ ?
ಇದು ಒಟ್ಟು ಹನ್ನೆರಡು ಪ್ರಬಂಧಗಳ ಸಂಕಲನ. ನಾನು ನೋಡಿದ , ಕೇಳಿದ , ಕಲಿತ , ಅನುಭವಿಸಿದ , ಚಿಂತಿಸಿದ ಮತ್ತು ಆಶಿಸಿದ ವಿಚಾರಗಳ ಬಗ್ಗೆ ನನ್ನ ಚಿಂತನೆಗಳ ಸಾರ ಇಲ್ಲಿದೆ.
ಇಲ್ಲಿನ ಕೆಲ ಪ್ರಬಂಧಗಳ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡು ಓದುಗರ ಚರ್ಚೆಗೆ ವಸ್ತುವಾಗಿವೆ ಮೆಚ್ಚುಗೆಗೆ ಪಾತ್ರವಾಗಿವೆ. ಆರೋಗ್ಯಕರ ಸಂವಾದದಿಂದ ನಾವು ಪ್ರಬುದ್ಧ ಸಮಾಜವನ್ನು ಕಟ್ಟಬಹುದು ಎಂದು ನಾನು ದೃಢವಾಗಿ ನಂಬಿದ್ದೇನೆ.
ಪುಸ್ತಕದ ಹೆಸರೇ ಸೂಚಿಸುವಂತೆ ನನ್ನ ಬರಹಗಳನ್ನು ಓದಿದ ಮೇಲೆ ನೀವು ಕೊಡುವ ಪ್ರತಿಕ್ರಿಯೆಗೆ ನಾನು ಕಾತರದಿಂದ ಕಾಯುತ್ತಿರುತ್ತೇನೆ.