ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಭಾಷೆ ಅಂದರೆ ಅದೆಂಥ ವಸ್ತು? ಅದು ಸಂವೇದನೆಯನ್ನೋ ಅನುಭವವನ್ನೋ ಸಂವಹನೆ ಮಾಡುವ ಮಾಧ್ಯಮವೆ? ಅಥವಾ ಸ್ವತಃ ಸಂವೇದನೆ-ಅನುಭವಗಳ ನಿರ್ಮಾತೃವೆ? ಭಾಷೆ ಹುಟ್ಟಿದ್ದು ಹೇಗೆ? ಅರ್ಥ ಅಂದರೇನು? ಅರ್ಥ ಇರುವುದು ಪದಗಳಲ್ಲೋ ಅಥವಾ ವಾಕ್ಯಗಳಲ್ಲೋ? ಅರ್ಥಪ್ರತೀತಿ ಉಂಟಾಗುವುದು ಹೇಗೆ? ಪದಕ್ಕೂ ಮತ್ತು ಪದಾರ್ಥಕ್ಕೂ ನಡುವಿನ ಸಂಬಂಧ ಎಂಥದು? ಪದಗಳು ಮತ್ತು ವಾಕ್ಯಗಳು ನಿರ್ದಿಷ್ಟ ಅರ್ಥಗಳನ್ನು ನಿರೂಪಿಸುವ ವಿಧಾನ ಯಾವುದು? ಭಾರತದ ದರ್ಶನ ಪರಂಪರೆಗಳಲ್ಲಿ ಈ ಎಲ್ಲ ಬಗೆಯ ಪ್ರಶ್ನೆಗಳನ್ನು ಕೇಂದ್ರವಾಗಿಟ್ಟುಕೊಂಡು ತುಂಬ ಗಹನವಾದ ಮತ್ತು ಸೂಕ್ಷ್ಮವಾದ ಚರ್ಚೆಗಳು ನಡೆದಿವೆ. ಅಂಥ ಜಿಜ್ಞಾಸೆಗಳನ್ನು ಅವುಗಳ ದಾರ್ಶನಿಕ ಹಿನ್ನೆಲೆಯ ಸಮೇತ ಗುರುತಿಸುತ್ತ, ಇವತ್ತಿನ ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಬದುಕು-ಭಾಷೆ ಕುರಿತ ಆ ಚರ್ಚೆ ಉಪಯುಕ್ತವಾಗುವಂತೆ ಸರಳವಾಗಿ ಪುನರ್ ನಿರೂಪಿಸುವ ಅನನ್ಯ ಪುಸ್ತಕ ಇದು.
ಪುಟಗಳು: 204
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !