ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಪುಸ್ತಕದ ಮೊದಲ ಭಾಗ ಸ್ವತಂತ್ರಪೂರ್ವ ಭಾರತದ ವಿವಿಧ ಭಾಗಗಳಲ್ಲಿ (ಹಲವು ರಾಜಸಂಸ್ಥಾನಗಳಲ್ಲಿ) ನಡೆದ ಸಮಾನತೆಯ ಮತ್ತು ಘನತೆಯ ಚಳವಳಿಗಳ ಅವಲೋಕನ ಇದೆ. ಮಹಾತ್ಮ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ, ಸಾಹು ಮಹಾರಾಜ್, ನಾರಾಯಣ ಗುರು, ಜಸ್ಟೀಸ್ ಪಾರ್ಟಿ ಮತ್ತು ಪೆರಿಯಾರ್ ಅವರುಗಳು ಕೈಗೊಂಡ ಸುಧಾರಣೆಗಳನ್ನು ಸಂಕ್ಷಿಪ್ತ ಅಧ್ಯಾಯಗಳಲ್ಲಿ ಕಟ್ಟಿಕೊಡಲಾಗಿದೆ. ಇತಿಹಾಸದಲ್ಲಿ ಬೇಕೆಂತಲೇ ಉಪೇಕ್ಷಿಸಲಾಗಿರುವ, ಜನರ ನಡುವೆ ಜನಪ್ರಿಯರಾಗಿರುವ ಹಲವು ವ್ಯಕ್ತಿಗಳ ಧೋರಣೆಗಳ ಪ್ರಶ್ನೆಯನ್ನು ಈ ಭಾಗದಲ್ಲಿ ಚಂದ್ರಶೇಖರ್ ಅವರು ಎತ್ತಿಕೊಂಡಿದ್ದಾರೆ.
ಕಾಲಪ್ರವಾಹದಲ್ಲಿ ಮಹಾಪುರುಷರನ್ನು ನಿರ್ಮಿಸುವುದರಲ್ಲಿ ಇತಿಹಾಸ ಕೆಲಸ ಮಾಡಿರುವ ರೀತಿ ವಿಚಿತ್ರ. ಎಷ್ಟೋ ನಿಜ ಸುಧಾರಕರ ವ್ಯಕ್ತಿತ್ವಗಳು ಇತ್ತೀಚೆಗಷ್ಟೇ ಮುನ್ನಲೆಗೆ ಬರುತ್ತಿವೆ. ಇಂದು ಕಲಿಯುವ ಮಕ್ಕಳಿಗೆ ನಾರಾಯಣ ಗುರು, ಸಾಹು ಮಹಾರಾಜ್ ಅವರ ಪಾಠಗಳು ಎಷ್ಟು ದಕ್ಕಿವೆ? ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿರುವ ಇನ್ನೊಂದು ಸಂಗತಿಯ ಹಿನ್ನೆಲೆಯಲ್ಲೂ ಇದನ್ನು ಗಮನಿಸಬೇಕು. ಮೈಸೂರು ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಸಾಧನೆಗಳನ್ನು ವೈಭವೀಕರಿಸಿ, ಅವರ ದಿವಾನಗಿರಿಯಲ್ಲದೇ ಅದರ ಆಚೆಗಿನ ಸುದೀರ್ಘ ಅವಧಿಯಲ್ಲೂ ಹಲವಾರು ಸುಧಾರಣೆಗಳಿಗೆ ಕಾರಣವಾಗಿದ್ದ ನಾಲ್ವಡಿ ಅವರ ಹೆಸರು ಹಿಂದಕ್ಕೆ ಬಿದ್ದಿರುವುದು ಹೇಗೆ? ಇಂತಹ ಪ್ರಶ್ನೆಗಳಿಗೆ ಇತಿಹಾಸದ ಸಂಗತಿಗಳನ್ನು ಇನ್ನಷ್ಟು ನಿಖರ ಅಂಕಿಅಂಶಗಳಿಂದ ಮರುಕಟ್ಟುವ ಕೆಲಸಗಳಿಂದ, ಅವುಗಳನ್ನು ಜನಪ್ರಿಯಗೊಳಿಸುವುದರಿಂದ ಉತ್ತರ ಕಂಡುಕೊಳ್ಳಬೇಕಿದೆ. ಅಂತಹ ಪ್ರಯತ್ನ ಸದರಿ ಪುಸ್ತಕದಲ್ಲಿ ಆಗಿದೆ.
- ಆಕೃತಿ ಗುರುಪ್ರಸಾದ್, ಕಾರ್ಯಕಾರಿ ಸಂಪಾದಕರು, ನ್ಯಾಯಪಥ ವಾರಪತ್ರಿಕೆ
ಪುಟಗಳು: 88
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !