Click here to Download MyLang App

ರಾಮಕೃಷ್ಣ ಜಿ,  ಭಗವದ್ಗೀತೆ : ಒಂದು ಅವಲೋಕನ,    Ramakrishna G,    Bhagavadgeete Ondu Avalokana,  Bhagavadgeete,

ಭಗವದ್ಗೀತೆ : ಒಂದು ಅವಲೋಕನ (ಇಬುಕ್)

e-book

ಪಬ್ಲಿಶರ್
ರಾಮಕೃಷ್ಣ ಜಿ
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಭಗವದ್ಗೀತೆಯ ಕರ್ತೃವು ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತ್ಯೇಕತೆಯನ್ನು ಸಮರ್ಥಿಸಲು
ಪ್ರತ್ಯೇಕತೆಯ ತಾತ್ವಿಕ ನೆಲೆಯನ್ನು ಸಿದ್ಧಪಡಿಸಿಕೊಂಡಿದ್ದಾನೆ. ಸಮಾಜದಲ್ಲಿ ಶ್ರೇಣಿಗಳನ್ನು ಪ್ರಬಲವಾಗಿ ಸುಭದ್ರಗೊಳಿಸಲು ಪರಮಾತ್ಮ ಶ್ರೀಭಗವಾನನೇ ಮುದ್ರೆಯೊತ್ತಿದ್ದಾನೆಂದರೆ ಜನತೆಯು ಮೂಕವಿಸ್ಮಿತರಾಗಿ ಅದನ್ನು ಸ್ವೀಕರಿಸಬೇಕು. ಅದು ಶ್ರೀಮದ್ಭಗವದ್ಗೀತೆಯ ಅಂತಿಮ ಸಂದೇಶ. ಜ್ಞಾನಾದಿಗಳನ್ನು ಪ್ರತ್ಯೇಕಿಸಿದಂತೆ ಬ್ರಾಹ್ಮಣಾದಿಗಳನ್ನು ಪ್ರತ್ಯೇಕಿಸುವುದು ಗೀತೆಯ ಇನ್ನುಳಿದ ಕೈಂಕರ್ಯ. ಗೀತೆಯು ದಾರ್ಶನಿಕ ಗ್ರಂಥವೋ, ಧರ್ಮ ಗ್ರಂಥವೋ, ಸಾಮಾಜಿಕ ಕೈಪಿಡಿಯೋ ಎಂಬುದು ಇದರಿಂದಲೇ ತೀರ್ಮಾನವಾಗಬೇಕು. ಸ್ಥಿತಪ್ರಜ್ಞತ್ವ , ಭಕ್ತಿ, ಧ್ಯಾನ, ವಿಭೂತಿ, ವಿಶ್ವರೂಪ ದರ್ಶನ, ಇತ್ಯಾದಿಗಳೆಲ್ಲಾ ಸಾಮಾಜಿಕ ಶ್ರೇಣೀಕರಣವನ್ನು ಒಂದು ಅದ್ಭುತ ಪರಮಾತ್ಮ ಸೃಷ್ಟಿ ಎಂದು ಭ್ರಮಿಸುವಂತೆ ಮಾಡುವುದರಲ್ಲಿ ಸಾಧನಗಳು. ಶ್ರೇಣೀಕರಣಕ್ಕೆ ಗೀತೆಯ ಅನಿಷ್ಟ ಕಾಣಿಕೆಯು ಮಹತ್ತರವಾದುದು.


ಇಲ್ಲಿಯವರೆಗೆ ಗೀತೆಯನ್ನು ಕುರಿತು ಸಾವಿರಾರು ವಿದ್ವಾಂಸರು ನೂರಾರು ವ್ಯಾಖ್ಯಾನಗಳನ್ನು ನೀಡಿದ್ದಾರೆ. ಆದರೆ ಜಿ.ರಾಮಕೃಷ್ಣ ಅವರ ಈ ಹೊತ್ತಿಗೆಯು ಅವುಗಳನ್ನು ವಿಮರ್ಶಿಸುವ ಕಾರ್ಯ ಮಾಡದೆ, ಅದಕ್ಕಿಂತ ಭಿನ್ನವಾಗಿ ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆಯೇನು ಎಂಬುದರತ್ತ ಓದುಗರ ಗಮನ ಸೆಳೆಯುತ್ತದೆ. ಭಗವದ್ಗೀತೆಯು ಹುಟ್ಟಿಕೊಂಡ ಕಾಲದ ಚಾರಿತ್ರಿಕ ಸಂದರ್ಭ ಮತ್ತು ಒಲವು-ನಿಲುವುಗಳನ್ನು ಗೌಣವಾಗಿಸಕೂಡದು ಮತ್ತು ಅವುಗಳಿಂದ ಪ್ರತ್ಯೇಕಿಸಿ ನೋಡಬಾರದು ಎಂಬ ಸಂದೇಶವನ್ನು ಈ ಕೃತಿಯಲ್ಲಿ ಲೇಖಕರು ಸಾದ್ಯಂತವಾಗಿ ಕಟ್ಟಿಕೊಡುತ್ತಾರೆ. “ಗೀತೆಯು ಸಂಕೀರ್ಣ ತತ್ವಶಾಸ್ತ್ರ ಪ್ರಮೇಯಗಳ ಆಗರ” ಎನ್ನುವ ವಿದ್ವಾಂಸರ ಹೇಳಿಕೆಯನ್ನು ವಿಸ್ತರಿಸುತ್ತಲೇ, ಬುದ್ಧೋತ್ತರ ಕಾಲದಲ್ಲಿ ರಚಿತವಾದ ಭಗವದ್ಗೀತೆಯಲ್ಲಿ ಅದು ರಚನೆಗೊಂಡ
ಕಾಲಕ್ಕೆ ಮುನ್ನ ಇದ್ದ ವಿಚಾರಗಳು ಗೀತೆಗೆ ಆಕರವಾಗಿರುವುದನ್ನು ಇಲ್ಲಿ ಸೋದಾಹರಣವಾಗಿ ವಿವರಿಸಿದ್ದಾರೆ. ಜೊತೆಗೆ, ಅಂಬೇಡ್ಕರ್ ಗೀತೆಯಲ್ಲಿ ಗುರುತಿಸಿರುವ ವಿರೋಧಗಳನ್ನು ಮಂಡಿಸುತ್ತಲೇ “ ನಿಷ್ಕಾಮ ಕರ್ಮ ಅಥವಾ ಕರ್ಮಫಲ ತ್ಯಾಗವನ್ನು ಶ್ರೇಷ್ಠ ಮೌಲ್ಯವೆಂದು ವ್ಯಾಖ್ಯಾನಿಸುತ್ತದೆಂದು ಹೇಳಲಾದ ಶ್ರೀಮದ್ಭಗವದ್ಗೀತೆಯು ಗೀತಾಪಠಣದಿಂದ ದೊರೆಯುತ್ತದೆನ್ನಲಾದ ಫಲವನ್ನು ವಿಜೃಂಭಿಸಿ ಹೇಳಿದೆ” ಎಂಬುದನ್ನು ತಾರ್ಕಿಕವಾಗಿ ಮಂಡಿಸುತ್ತಾರೆ.

 

ಪುಟಗಳು: 260

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !