Click here to Download MyLang App

ಭಗತ್ ಸಿಂಗ್ (ಇಬುಕ್)

ಭಗತ್ ಸಿಂಗ್ (ಇಬುಕ್)

e-book

ಪಬ್ಲಿಶರ್
ಡಾ|| ಜಿ. ರಾಮಕೃಷ್ಣ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಸಾವು ಈತನಿಗೆ ಭಯ ಹುಟ್ಟಿಸಲೇ ಇಲ್ಲ. ನೇಣುಗಂಬಕ್ಕೆ ಏರುವ ಮೊದಲ ದಿನ ಪ್ರಾಣನಾಥ “ನಿನ್ನ ಅಂತಿಮ ಇಚ್ಚೆ ಏನು?” ಎಂದು ಭಗತ್‍ಸಿಂಗ್‍ಗೆ ಕೇಳಿದಾಗ “ಇಷ್ಟೇ: ಮತ್ತೆ ನನಗೆ ಜನ್ಮ ಲಭಿಸಲಿ ಮತ್ತು ಮಾತೃಭೂಮಿಗೆ ಇನ್ನೂ ಅಧಿಕವಾದ ಸೇವೆ ಸಲ್ಲಿಸಲು ಅವಕಾಶ ದೊರೆಯಲಿ” ಎಂದು ಸ್ವಲ್ಪವೂ ವಿಚಲಿತನಾಗದೆ ನುಡಿಯುತ್ತಾನೆ. ಸಾವಿಗೆ ಕೆಲವೇ ದಿನಗಳ ಮೊದಲು ತನ್ನ ಗೆಳೆಯರಿಗೆ ಬರೆದ ಪತ್ರದಲ್ಲಿ “ಬದುಕಿರಬೇಕೆಂಬ ಆಸೆ ನನ್ನಲ್ಲೂ ಇರಬೇಕಾದದ್ದು ಸಹಜವಾಗಿದೆ. ನಾನಿದನ್ನು ಮುಚ್ಚಿಡ ಬಯಸುವುದಿಲ್ಲ. ಆದರೆ ಬದುಕಿರಬೇಕಾದರೆ ನನ್ನದೊಂದು ಶರತ್ತಿದೆ. ನಾನು ಕೈದಿಯಾಗಿ ಜೀವಿಸಲು ಬಯಸುವುದಿಲ್ಲ.

ನನ್ನ ಹೆಸರು ಭಾರತದ ಕ್ರಾಂತಿಯ ಪತಾಕೆಯಾಗಿ ಹೋಗಿದೆ. ಮತ್ತು ನನ್ನ ಕ್ರಾಂತಿಕಾರಿ ಪಕ್ಷದ ಆದರ್ಶ ಹಾಗೂ ಬಲಿದಾನಗಳು ನನ್ನನ್ನು ಬಲು ಎತ್ತರಕ್ಕೇರಿಸಿದೆ. ಎಷ್ಟೊಂದು ಎತ್ತರಕ್ಕೆಂದರೆ ನಾನೇನಾದರೂ ಬದುಕಿದ್ದರೆ ಅಷ್ಟು ಎತ್ತರಕ್ಕೆ ಏರಲಾರದಷ್ಟು ಮಟ್ಟಿಗೆ, ಆದರೆ ನಾನು ಸ್ಥೈರ್ಯದಿಂದ ನಗುನಗುತ್ತಾ ನೇಣುಗಂಬವನ್ನೇರಿದರೆ ಭಾರತದ ಮಾತೆಯರು ತಮ್ಮ ಮಕ್ಕಳನ್ನು ಭಗತ್‍ಸಿಂಗನನ್ನಾಗಿ ಮಾಡಲು ತವಕಿಸಿಯಾರು ಮತ್ತು ದೇಶಕ್ಕಾಗಿ ಬಲಿದಾನ ಮಾಡಲು ತಯಾರಿರುವವರ ಸಂಖ್ಯೆ ಎಷ್ಟು ಹೆಚ್ಚಾಗುತ್ತದೆಯೆಂದರೆ ಕ್ರಾಂತಿಯನ್ನು ತಡೆಗಟ್ಟುವದು ಸಾಮ್ರಾಜ್ಯಶಾಹಿಯ ನಗ್ನ ರಾಕ್ಷಸೀ ಶಕ್ತಿಗೆ ಕೇವಲ ಅಸಾಧ್ಯವಾದ ಮಾತಾಗುತ್ತದೆ." ಎಂದು ಕೊನೆಯ ಪರೀಕ್ಷೆಯಲ್ಲಿಯೂ ಉತ್ತೀರ್ಣನಾಗಲು ಎದುರು ನೋಡುವುದಾಗಿ ಬರೆದಿದ್ದ.

ಸ್ವಾತಂತ್ರ್ಯ ಹೋರಾಟದ ಮರೆಯಲಾಗದ ಹೆಸರು ಭಗತ್ ಸಿಂಗ್. ಅವರ ವ್ಯಕ್ತಿತ್ವ ಮತ್ತು ಜೀವನದ ನಿರೂಪಣೆ ಇಲ್ಲಿದೆ. ಲೇಖಕ ಡಾ|| ಜಿ. ರಾಮಕೃಷ್ಣ ಇದರ ಬರಹಗಾರರು. 

 

ಪುಟಗಳು: 168

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !