Click here for MyLang Android and iOS app links

ಬೆಂಗಳೂರು ಪರಂಪರೆ

ಬೆಂಗಳೂರು ಪರಂಪರೆ

e-book
ಪಬ್ಲಿಶರ್
ಎಸ್. ಕೆ. ಅರುಣಿ
ಮಾಮೂಲು ಬೆಲೆ
Rs. 249.00
ಸೇಲ್ ಬೆಲೆ
Rs. 249.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

 

ಪ್ರಕಾಶಕರು: ಇತಿಹಾಸ ದರ್ಪಣ ಪ್ರಕಾಶನ

Publisher: Itihasa Darpana Prakashana

 

ಬೆಂಗಳೂರು ಪರಂಪರೆ : ಇತಿಹಾಸ ಸಂಶೋಧನೆಯ ಹೊಸ ನೋಟಗಳು ಶೀರ್ಷಿಕೆಯಲ್ಲಿ ಈ ಕೃತಿಯನ್ನು ಹೊರತರಲಾಗಿದೆ. ಇಲ್ಲಿ ಒಟ್ಟು ಇಪ್ಪತ್ತೇಳು ಲೇಖನಗಳಿವೆ. ಇವುಗಳಲ್ಲಿ ಸಿಂಹಪಾಲು ಬೆಂಗಳೂರು ನಗರದ ಐತಿಹಾಸಿಕ ಸ್ಥಳ ಅಥವಾ ಸ್ಮಾರಕಗಳಿಗೆ ಸಂಬಂಧಿಸಿವೆ. ಇನ್ನುಳಿದ ಬರಹಗಳು ನಗರದ ಕರಗ ಉತ್ಸವ, ದಸರಾ ಆಚರಣೆ, ನಗರದ ರಕ್ಷಣೆಗೆ ತನ್ನ ಜೀವವನ್ನು ಕೊಟ್ಟ ಟಿಪ್ಪು ಸೇನಾನಿ ಬಹದ್ದೂರ್ ಖಾನನ ಸಾಹಸ ಮತ್ತು ನಗರದ ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾದ ಮೂರು ಐತಿಹಾಸಿಕ ಯುದ್ಧಗಳು, ಬ್ರಿಟಿಷರ ಕಂಟೋನ್ಮೆಂಟ್, ಬೆಟ್ಟದಾಸಪುರದ ಕೋಟೆ, ಬೇಗೂರಿನ ಐತಿಹಾಸಿಕ ಸ್ಮಾರಕಗಳು, ನಾಡಪ್ರಭುಗಳ ಮೊದಲ ರಾಜಧಾನಿ ನಗರ ಯಲಹಂಕ, ಮುಂತಾದವುಗಳನ್ನು ಕುರಿತಾದ ಸಂಶೋಧನಾ ಲೇಖನಗಳಾಗಿವೆ. ಇವಷ್ಟೇ ಅಲ್ಲದೆ ವಸಾಹತು ಕಾಲದಲ್ಲಿ ಅನೇಕ ಐರೋಪ್ಯ ಪ್ರವಾಸಿಗರು ಬೆಂಗಳೂರಿಗೆ ವಿವಿಧ ಕಾರಣಗಳಿಂದ ಭೇಟಿ ನೀಡಿದ್ದರು. ಅವರ ಪ್ರವಾಸ ಕಥನಗಳನ್ನು ಆಧರಿಸಿ, ಪ್ರವಾಸಿಗರು ಕಂಡ ಬೆಂಗಳೂರನ್ನು ಲೇಖನದ ಮೂಲಕ ಕಟ್ಟಿಕೊಡಲಾಗಿದೆ.

ಬೆಂಗಳೂರು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿರುವುದಲ್ಲದೆ, ತೀವ್ರಗತಿಯ ನಗರೀಕರಣ, ಕೈಗಾರೀಕರಣ, ಬೆಳೆಯುತ್ತಿರುವ ಜನಸಂಖ್ಯೆಯೊಂದಿಗೆ ಮಾಹಿತಿ ತಂತ್ರಜ್ಞಾನ ನಗರವಾಗಿ ರೂಪುಗೊಂಡಿದೆ. ಈ ನಗರದ ಇತಿಹಾಸವೂ ಸಹ ಶ್ರೀಮಂತ ಮತ್ತು ವೈವಿಧ್ಯಮಯವಾಗಿದೆ.

ಬೆಂಗಳೂರು’ ಎಂದೊಡನೆ ಇಂದು ನಮ್ಮ ಮುಂದೆ ಹಲವು ಚಿತ್ರಣಗಳು ತೆರೆದುಕೊಳ್ಳುತ್ತವೆ. ಸುಂದರ ಉದ್ಯಾನಗಳು, ಬಹುಸಂಸ್ಕೃತಿಯ ಜನರು, ಆಧುನಿಕ ಜೀವನ ಶೈಲಿ ಭಾಗವಾದ ಮಾಲ್‍ಗಳು, ಬಹು ಅಂತಸ್ತಿನ ಕಟ್ಟಡಗಳು, ಮೇಲ್ಸೇತುವೆಗಳು, ಮೆಟ್ರೊ ರೈಲ್ವೆ ಮಾರ್ಗಗಳು, ಸಂಚಾರ ದಟ್ಟಣೆಯ ರಸ್ತೆಗಳು ಮುಂತಾದವುಗಳು ಕಣ್ಮುಂದೆ ಬರುತ್ತವೆ. ಮಧ್ಯಕಾಲೀನ ವಾಣಿಜ್ಯೋದ್ಯಮ ನಗರದ ಸ್ವರೂಪದಲ್ಲಿ ನಾಡಪ್ರಭು ಕೆಂಪೇಗೌಡರಿಂದ 1537ರಲ್ಲಿ ಜನ್ಮತಳೆದ ‘ಆಧುನಿಕ ಬೆಂಗಳೂರು’ ಇಂದು ಜಗತ್ತಿನ ಮುಂಚೂಣಿ ನಗರಗಳಲ್ಲಿ ಒಂದಾಗಿದೆ. ಅಂದು ದಕ್ಷಿಣ ಭಾರತದ ಸಾಂಸ್ಕೃತಿಕ ಲಕ್ಷಣಗಳನ್ನು ಮೈಗೂಡಿಸಿ ಕೊಂಡು ಬೆಳೆದ ನಗರ, ಇಂದು ಅನೇಕ ಐತಿಹಾಸಿಕ ಘಟನೆಗಳಿಗೆ ಮತ್ತು ಸಾಂಸ್ಕೃತಿಕ ಪಲ್ಲಟಗಳಿಗೆ ಸಾಕ್ಷಿಯಾಗಿದೆ. ಆಧುನಿಕ ನಗರವೆಂದು ಇದನ್ನು ಗುರುತಿಸಿದರೂ ಹಲವು ಶತಮಾನಗಳ ಸುದೀರ್ಘ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ತನ್ನ ಒಡಲಿನಲ್ಲಿ ಅಡಗಿಸಿಕೊಂಡಿದೆ. ಅಸಂಖ್ಯಾತ ವೀರಗಲ್ಲುಗಳು, ಶಿಲಾಶಾಸನಗಳು, ದೇಗುಲಗಳು, ಮಂಟಪಗಳು, ದರ್ಗಾಗಳು, ಇಗರ್ಜಿಗಳು, ಉದ್ಯಾನಗಳು, ಕೋಟೆ ಮತ್ತು ಅರಮನೆಗಳು, ಪರಿಷೆ ಹಾಗೂ ಉತ್ಸವಗಳು ಮುಂತಾದವು ನಗರದ ಇತಿಹಾಸ ಮತ್ತು ಪರಂಪರೆಗೆ ಸಾಕ್ಷಿಗಳಾಗಿವೆ.

ಈ ಕೃತಿಯು ವಸಾಹತುಪೂರ್ವ ಬೆಂಗಳೂರಿನ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಪ್ರಾಚ್ಯಶಾಸ್ತ್ರ, ಮಾನವಶಾಸ್ತ್ರ ಮತ್ತು ಐತಿಹಾಸಿಕ ದಾಖಲೆಗಳ ಆಧಾರಿತ ಲೇಖನಗಳ ಸಂಗ್ರಹವಾಗಿದೆ.

ಈ ಕೃತಿಯು ವಿವಿಧ ಸಮುದಾಯಗಳನ್ನು ನಗರವು ಹೇಗೆ ಒಳಗೊಂಡಿತು ಮತ್ತು ಇದರ ಪರಿಣಾಮವಾಗಿ ನಗರದ ಸ್ವರೂಪವು ಹೇಗೆ ಬದಲಾಯಿತು ಎಂಬುದನ್ನು ವಿವರಿಸುತ್ತದೆ. ಸೌಂದರ್ಯದ ಹೊರತಾಗಿಯೂ ನಗರದ ಸಂಪ್ರದಾಯಗಳು, ಆಚರಣೆಗಳು, ಉತ್ಸವಗಳು, ಇಲ್ಲಿನ ಜೀವಂತ ಪರಂಪರೆಗೆ ಸಾಕ್ಷಿಯಾಗಿವೆ.

ಬೆಂಗಳೂರು ನಗರದ ಪೇಟೆಗಳ ವಿಸ್ತೃತ ಅಧ್ಯಯನ ಆಧಾರಿತ ಸಾಂಸ್ಕೃತಿಕ ಅಂಶಗಳ ಈ ಕೃತಿಯು ಅದ್ಭುತವಾಗಿದ್ದು ಪರಂಪರೆಯನ್ನು ಸಂರಕ್ಷಿಸಿ ಮುಂದುವರೆಸಿಕೊಂಡು ಹೋಗುವತ್ತ ಪ್ರೇರೇಪಿಸುತ್ತದೆ. ಮಹಾತ್ಮ ಗಾಂಧೀಜಿಯವರ ಹೇಳಿಕೆಯಂತೆ “ಒಂದು ದೇಶದ ಸಂಸ್ಕೃತಿಯು ಅಲ್ಲಿಯ ಜನರ ಹೃದಯ ಮತ್ತು ಆತ್ಮದಲ್ಲಿರುತ್ತದೆ” ಎಂಬುದು ಈ ಕೃತಿಗೆ ಸೂಕ್ತವಾಗಿ ಅನ್ವಯಿಸುತ್ತದೆ.


ಪುಟಗಳು: 350

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !