ಬರಹಗಾರರು : ಜೋಗಿ
ದನಿ : ದಿವ್ಯ ಭಾರದ್ವಾಜ್
ಪುಸ್ತಕ ಪ್ರಕಾರ : ಕಾದಂಬರಿ
ಈ ಇಡೀ ಬೆಂಗಳೂರನ್ನೇ ಒಂದು ವ್ಯಕ್ತಿಯನ್ನಾಗಿ ನೋಡಿದರೆ, ಅದು ಹೇಗಿರುತ್ತದೆ ಎಂಬುದನ್ನು ಯೋಚಿಸುತ್ತಿದ್ದಾಗ ಹುಟ್ಟಿದ್ದು ಈ ಕಾದಂಬರಿ.
ಬೇರೆ ಬೇರೆ ಊರುಗಳಿಂದ ಬಂದು ನೆಲೆಸಿದವರನ್ನು ಕೂಡ ನಾನು ನೋಡುತ್ತಾ ಬಂದಿದ್ದೇನೆ. ರಾತ್ರಿ ತಮ್ಮೂರಿನ ಬಸ್ಸು ಹತ್ತಲು ಬರುವವರ ಮುಖದಲ್ಲಿ ಸಂಭ್ರಮದ ಕಳೆಯಿರುತ್ತದೆ. ತಮ್ಮೂರಿನಿಂದ ವಾಪಸ್ಸು ಬೆಂಗಳೂರಿಗೆ ಬಂದು ಬೆಳ್ಳಂಬೆಳಗ್ಗೆ ಬಸ್ಸಿನಿಂದ ಇಳಿಯುವವರ ಮುಖದಲ್ಲಿ ರೇಜಿಗೆ, ಆತಂಕ ಮತ್ತು ಅಸಹನೆಯಿರುತ್ತದೆ. ಬೆಂಗಳೂರಲ್ಲೇ ಹುಟ್ಟಿ ಇಲ್ಲೇ ಬಾಲ್ಯ ಕಳೆದು ಬೆಳೆದವರ ದೃಷ್ಟಿಯಲ್ಲಿ ಬೆಂಗಳೂರು ಹುಟ್ಟೂರಿನಂತಿರಬಹುದು. ಆದರೆ ಹೊರಗಿನಿಂದ ಬಂದವರಿಗೆ? ಈ ಕಾದಂಬರಿಯಲ್ಲಿ ಆ ದೃಷ್ಟಿಕೋನವಿದೆ.
ಬೆಂಗಳೂರು ಎಂಬುದು ನರಸಿಂಹಾವತಾರ. ಒಳಗೂ ಹೊರಗೂ ಮೇಲೂ ಕೆಳಗೂ ಹಗಲಲ್ಲೂ ರಾತ್ರಿಯಲ್ಲೂ ಆಯುಧಗಳಿಂದಲೂ ಮನುಷ್ಯನಿಂದಲೂ ಮೃಗದಿಂದಲೂ ಸಾವು ಬರಬಾರದು ಎಂಬ ವರ ಪಡೆದಿದ್ದೇನೆಂದು ಬೀಗುತ್ತಿದ್ದರೆ, ಮುಸ್ಸಂಜೆಯಲ್ಲಿ ಹೊಸಿಲಲ್ಲಿ ಕೂತು ತೊಡೆಯಲ್ಲಿ ಮಲಗಿಸಿಕೊಂಡು ಉಗುರಿಂದ ಕರುಳ ಬಗೆಯುವ ಮನುಷ್ಯನೂ ಅಲ್ಲದ ಮೃಗವೂ ಅಲ್ಲದ ನರಸಿಂಹ.