
ಯೋಗೇಂದ್ರ :
ಜಾತಿ ಬರುವುದು ಹುಟ್ಟಿನಿಂದಲ್ಲ ಬದಲಿಗೆ ಮನುಷ್ಯ ಮಾಡುವ ವೃತ್ತಿಯಿಂದ ಎಂಬ ತತ್ವವನ್ನು ಬಹಳ ಗಟ್ಟಿಯಾಗಿ ಪ್ರತಿಪಾದಿಸುವ ಕಥೆ 'ಯೋಗೇಂದ್ರ'. ಅನಾಥ ಮಗುವೊಂದು, ಸಂತಾನವಿಲ್ಲದೆ ಕೊರಗುತ್ತಿದ್ದ ಅರ್ಚಕರ ಮನೆ ಸೇರಿ, ಅಲ್ಲೇ ತನ್ನ ಭವಿಷ್ಯ ರೂಪಿಸಿಕೊಂಡು, ಬೆಳೆದು ದೊಡ್ಡವನಾಗಿ, ಧಾರ್ಮಿಕ ಸಂಸ್ಥೆಯ ಗುರುವಾಗುವ ಹೊತ್ತಲ್ಲೇ, ಮಾರಣಾಂತಿಕ ಕೊಲೆ ಪ್ರಯತ್ನಗಳು ನಡೆಯುತ್ತವೆ. ಅವನ ಮೇಲಿನ ಹಲ್ಲೆಯ ತನಿಖೆ ಮೂಲಕ ಹೊರ ಬರುವ ಹೂತಿಟ್ಟ ಬಾಕಿ ರಹಸ್ಯಗಳ ರೋಚಕ ಕಥೆ ಇದು. ಅಂತೂ ಕೊನೆಗೆ ಯೋಗೇಂದ್ರನ ಇಚ್ಛಾಶಕ್ತಿ ಗೆಲ್ಲುತ್ತದೆಯೇ ಅಥವಾ ಜಾತಿ ರಾಜಕೀಯಕ್ಕೆ ಬಲಿಯಾಗುತ್ತದೆಯೇ?