ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಸೂರ್ಯಕಾಂತ ಸೊನ್ನದ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಬಸವ (ಸುಮಾರು ೧೧೦೫-೧೧೬೭) ಮನುಕುಲ ಕಂಡ ಮಹಾನ್ ಚೇತನಗಳಲ್ಲಿ ಒಬ್ಬರು. ಬಸವನನ್ನು ‘ಅಣ್ಣ’ನೆಂದು ‘ಬಸವಣ್ಣ’ ಎಂದು ಕರೆಯಲು ಕಾರಣವಿದೆ.
* ೧೨ನೆಯ ಶತಮಾನದಲ್ಲಿ ಚಾತುರ್ವರ್ಣ್ಯ ಪದ್ಧತಿ ಅಸ್ತಿತ್ವದಲ್ಲಿದ್ದು ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಶೂದ್ರರನ್ನು ಶೋಷಿಸುತ್ತಿದ್ದರು.
* ಪಂಚಮ ವರ್ಣವಾಗಿ ಹೊಲೆಯರು ಅತ್ಯಂತ ದುರ್ಭರ, ಹೀನ ಬದುಕನ್ನು ನಡೆಸುತ್ತಿದ್ದರು.
* ದೇವರು ಧರ್ಮ ಇತ್ಯಾದಿ ವಿಚಾರಗಳೆಲ್ಲ ಜನಸಾಮಾನ್ಯರಿಗೆ ತಿಳಿಯದ ಸಂಸ್ಕೃತದಲ್ಲಿತ್ತು. ಪುರೋಹಿತರು ಹೇಳಿದ್ದೇ ಅಂತಿಮವಾಗಿದ್ದ ದಿನಗಳವು.
* ಭಗವಂತನ ಆರಾಧನೆಗೆ ‘ಪುರೋಹಿತ’ ಎಂಬ ಮಧ್ಯವರ್ತಿಯ ಅಗತ್ಯ ಎಂಬ ನಂಬಿಕೆಯಿತ್ತು. ಭಗವಂತನನ್ನು ಸ್ವತಂತ್ರವಾಗಿ ಪೂಜಿಸುವ, ಆರಾಧಿಸುವ, ನಿವೇದಿಸಿ ಕೊಳ್ಳುವ ಮಾರ್ಗ ಅಂದಿನ ಜನಸಾಮಾನ್ಯರಿಗೆ ತಿಳಿಯದ ವಿಚಾರವಾಗಿತ್ತು.
* ಗಂಡು ಶ್ರೇಷ್ಠ-ಹೆಣ್ಣು ಕನಿಷ್ಠ ಎಂಬ ಅವೈಜ್ಞಾನಿಕ ವಿಷಯವನ್ನು ಎಲ್ಲರೂ ನಂಬಿ ಪರಿಪಾಲಿಸುತ್ತಿದ್ದರು. ಇಂತಹ ಪ್ರಕ್ಷುಬ್ಧ ಪರಿಸರದಲ್ಲಿ ಹುಟ್ಟಿದರು ಬಸವಣ್ಣ. ಬಸವಣ್ಣ ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿ ಎಲ್ಲ ವಿಚಾರಗಳಲ್ಲಿ ಕ್ರಾಂತಿಕಾರಕ ವಿಚಾರಗಳನ್ನು ತಂದರು.
* ಬಸವಣ್ಣನವರ ಬಹುದೊಡ್ಡ ಕೊಡುಗೆ ವಚನಸಾಹಿತ್ಯ. ಬಸವಣ್ಣನವರಿಗಿಂತ ಮೊದಲೇ ದೇವರ ದಾಸಿಮಯ್ಯನಂತಹವರು ಕನ್ನಡದಲ್ಲಿ ವಚನಗಳನ್ನು ರಚಿಸಿ ದ್ದರೂ, ವಚನ ಸಾಹಿತ್ಯಕ್ಕೆ ಅಧಿಕೃತ ಸ್ಥಾನವನ್ನು ಬಸವಣ್ಣನವರು ಕಲ್ಪಿಸಿಕೊಟ್ಟರು. ಸಮಾಜದ ಪ್ರತಿಯೊಂದು ಸ್ತರದ ವ್ಯಕ್ತಿಗಳು ವಚನಗಳನ್ನು ರಚಿಸಲಾರಂಭಿಸಿದರು. ಇಂತಹ ಪ್ರಸಂಗ ಜಗತ್ತಿನ ಇತಿಹಾಸದಲ್ಲಿ ಮತ್ತೆಲ್ಲೂ ಕಂಡುಬರುವುದಿಲ್ಲ.
ಇಷ್ಟೆಲ್ಲ ಕ್ರಾಂತಿಕಾರೀ ಬದಲಾವಣೆಗಳನ್ನು ಅತ್ಯಲ್ಪ ಕಾಲದಲ್ಲಿ ತರಬಯಸಿದ ಬಸವಣ್ಣನವರನ್ನು ವಿರೋಧಿಸುವ ಒಂದು ದೊಡ್ಡ ಗುಂಪು ಬೆಳೆಯಿತು. ಕಲ್ಯಾಣದಲ್ಲಿ ಕ್ರಾಂತಿಯಾಯಿತು. ನೊಂದ ಬಸವಣ್ಣ ಕೂಡಲಸಂಗಮದಲ್ಲಿ ಐಕ್ಯರಾದರು!
- ಡಾ|| ನಾ. ಸೋಮೇಶ್ಪರ
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !