ಕನ್ನಡ ಪುಸ್ತಕ ಪ್ರಾಧಿಕಾರವು 2004ರಲ್ಲಿ ಡಾ. ಇಂದಿರಾ ಹೆಗ್ಗಡೆಯವರ 'ಬಂಟರು ಒಂದು ಸಮಾಜೋ - ಸಾಂಸ್ಕೃತಿಕ ಅಧ್ಯಯನ' ಕೃತಿಯನ್ನು ಪ್ರಕಟಿಸಿತ್ತು. ಬಂಟ ಸಮಾಜದ ಬಗ್ಗೆ ಹಲವಾರು ವರ್ಷ ಕ್ಷೇತ್ರಕಾರ್ಯ, ಅಧ್ಯಯನ ಮಾಡಿ ರಚಿಸಿದ ಮಹತ್ವದ ಕೃತಿ ಇದು. ಇಂತಹ ಗಂಭೀರ ಕೃತಿಗಳ ಮಾರಾಟ ಕಷ್ಟಕರವಾಗಿರುವ ಈ ಸಂದರ್ಭದಲ್ಲಿಯೂ ಈ ಕೃತಿಯ ಪ್ರತಿಗಳು ಸಂಪೂರ್ಣ ಮಾರಾಟವಾಗಿರುವುದು ಕನ್ನಡ ವಾಚಕಲೋಕದ ಬಗ್ಗೆ ಅಭಿಮಾನ ಪಡುವಂತೆ ಮಾಡಿದೆ. ಈ ಕೃತಿಯಲ್ಲಿ ಬಂಟ ಜನಾಂಗದ ಬಗ್ಗೆ ಬಹಳ ವಿಸ್ತಾರವಾಗಿ ಪರಿಪೂರ್ಣ ಎನಿಸುವಷ್ಟರ ಮಟ್ಟಿಗೆ - ಲೇಖಕಿ ಮಾಹಿತಿಯನ್ನು ಒದಗಿಸಿದ್ದಾರೆ. ಬಂಟ ಪದದ ವ್ಯುತ್ಪತ್ತಿಯಿಂದ ಹಿಡಿದು ಆ ಸಮಾಜದಲ್ಲಿನ ಪ್ರಭೇದಗಳು, ಕುಟುಂಬ ವ್ಯವಸ್ಥೆ, ಕೃಷಿ ಆಚರಣೆಗಳು, ಆರಾಧನಾ ಪದ್ದತಿ - ಹೀಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ.
- ಡಾ. ಸಿದ್ಧಲಿಂಗಯ್ಯ
ಅಧ್ಯಕ್ಷರು
ಪುಟಗಳು: 480