‘ಅನಂತ’ ನಾ. ಮೊಗಸಾಲೆಯವರ ಎರಡನೆಯ ಕಾದಂಬರಿ. ಒಂದುನೂರಾ ಎಂಟು ಪುಟ (ಕ್ರೌನ್ ಅಳತೆಯಲ್ಲಿ) ಗಳ ಪುಟ್ಟ ಗಾತ್ರದ್ದು. ಇನ್ನೂ ಆಯುರ್ವೇದ ಡಿಪ್ಲೋಮಾ ಕೋರ್ಸಿನ (ಬಹುಶಃ ಕೊನೆಯ ವರ್ಷದ) ವಿದ್ಯಾರ್ಥಿಯಾಗಿದ್ದಾಗ ಬರೆದದ್ದು. ಬಹುಶಃ ೧೯೬೪ ರ ವೇಳೆಗಾಗಲೇ ಇದರ ರಚನೆಯಾಗಿರಬೇಕು.
ಅಷ್ಟು ಎಳೆಯ ವಯಸ್ಸಿನಲ್ಲಿ ಬರೆದ ಕೃತಿಯಾದರೂ ಇದೊಂದು ಎಳಸು ಕೃತಿ ಎನ್ನಲಾಗದು. ‘ತೀರಾ ಸರಳ ಕೃತಿ’ ಎನ್ನಬಹುದು. ಹಾಗೆನ್ನಲು ಕಾರಣ - ಇಲ್ಲಿ ಇಟ್ಟುಕೊಂಡಿರುವ ಕಥಾಹಂದರವೇ ಸರಳವಾದದ್ದು. ಒಬ್ಬ ಯುವಕ ತನ್ನ ಅಕ್ಕನ ಮಗಳನ್ನು ಯಾಕೆ ಮದುವೆಯಾಗಬಾರದು ಎಂದು ಬಯಸಿ, ಅವರಿಬ್ಬರಲ್ಲೂ ಪ್ರೇಮಾಂಕುರವಾಗಿದ್ದಾಗ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಮುದಾಯಗಳಲ್ಲೂ ಅದು ರೂಢಿಗೆ ವಿರುದ್ಧವಾಗಿದ್ದರೂ ಅದರ ವಿರುದ್ಧ ಸೆಡ್ಡುಹೊಡೆದು ‘ಹಿರಿಯರನ್ನು ಕೇಳೋಣ’ ಎನ್ನುವ ಹಂತಕ್ಕೆ ಬಂದಿದ್ದಾಗ ಆ ಹುಡುಗಿಗೆ ಬೇರೊಂದೆಡೆ ಎರಡನೇ ಸಂಬಂಧಕ್ಕೆ ಮದುವೆಯನ್ನು ಹಿರಿಯರು ಗೊತ್ತು ಮಾಡುವುದು, ತನ್ನ ಬೇಗುದಿಯನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಆಕೆ ಕೆರೆಗೆ ಬಿದ್ದು ಸಾಯುವುದು ಇಲ್ಲಿನ ವಸ್ತು. ‘ಅಕ್ಕನ ಮಗಳನ್ನು ಯಾಕೆ ಮದುವೆಯಾಗಬಾರದು?’ ಎಂದು ಪ್ರಶ್ನಿಸುವುದೇ ಇಲ್ಲಿನ ಉದ್ದೇಶ. ಆದ್ದರಿಂದ ಇದೊಂದು ‘ಏಕಾಂಶ ವಸ್ತುವಿನ ಕಾದಂಬರಿ’.
ಪುಟಗಳು: 110
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !