Click here to Download MyLang App

ಮ. ಸು. ಕೃಷ್ಣಮೂರ್ತಿ,    ಅನಾಮದಾಸನ ಕಡತ: ಅಥ ರೈಕ್ವ ಆಖ್ಯಾನ (ಇಬುಕ್),  Krishnamurthy,  Anamadasana Kadata,

ಅನಾಮದಾಸನ ಕಡತ: ಅಥ ರೈಕ್ವ ಆಖ್ಯಾನ (ಇಬುಕ್)

e-book

ಪಬ್ಲಿಶರ್
ಮ. ಸು. ಕೃಷ್ಣಮೂರ್ತಿ
ಮಾಮೂಲು ಬೆಲೆ
Rs. 360.00
ಸೇಲ್ ಬೆಲೆ
Rs. 360.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana


ಮನುಷ್ಯನಿಗೆ ಇಂಥ ಕಣ್ಣುಗಳಿರಲಾರವು! ಇದಂತೂ ಚಿಗರೆಯ ಕಣ್ಣುಗಳು! ನಿಜಕ್ಕೂ ಈ ಪ್ರಾಣಿ ಎಲ್ಲೋ ಚಿಗರೆಯ ಕಣ್ಣುಗಳನ್ನು ಕಿತ್ತು ತಂದು ತನ್ನ ಮುಖದ ಮೇಲೆ ಅಂಟಿಸಿಕೊAಡಿರಬೇಕು. ಆತ ಮೆಲ್ಲಗೆ ಆ ಕಣ್ಣಿನ ಸುತ್ತ ಬೆರಳಾಡಿಸಿ ಅದನ್ನು ಅಂಟಿಸಿದ ಗುರುತೇನಾದರೂ ಇದೆಯೋ ಎಂದು ನೋಡತೊಡಗಿದ. ಇರಲಿಲ್ಲ. ಋಷಿಕುಮಾರ ಆ ಮುಖದ ಮೇಲೆ ಬಗ್ಗಿದ. ಖಂಡಿತ ಏನೋ ಗುಟ್ಟಿರಬೇಕು. ಆಗಲೇ ಅದರ ಕಣ್ಣು ತೆರೆಯಿತು. ಅದು ಕಕ್ಕಾಬಿಕ್ಕಿಯಾಗಿ ಎದ್ದು ಕುಳಿತುಕೊಂಡಿತು. ಕ್ರೋಧ ತುಂಬಿದ ಧ್ವನಿಯಲ್ಲಿ ಅದು ಕೇಳಿತು, ‘ಯಾರು ನೀನು! ಏನು ಮಾಡುತ್ತಿದ್ದೀಯೆ?' ರೈಕ್ವ ಇಂಥ ಇನಿದನಿಯನ್ನು ಎಂದೂ ಕೇಳಿರಲಿಲ್ಲ. ಆತ ಅಂದುಕೊAಡ - ಇದು ನಿಜಕ್ಕೂ ಯಾವುದೋ ದೇವಲೋಕದ ಮನುಷ್ಯನಿರಬೇಕು. 

(ಅನಾಮದಾಸನ ಕಡತ)

***

ಆಧುನಿಕ ಹಿಂದೀ ಸಾಹಿತ್ಯದ ಕೀರ್ತಿಕಲಶಗಳಲ್ಲಿ ಒಬ್ಬರಾದ, ಎಂಟು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಡಾ. ಹಜಾರೀಪ್ರಸಾದ ದ್ವಿವೇದಿಯವರು ಬಹುಮುಖಿ ಪ್ರತಿಭಾಸಂಪನ್ನರು. ಹಿಂದಿಯ ರಸವಾದಿ ವಿಮರ್ಶಕರಾಗಿ, ರಮ್ಯೋಜ್ವಲ ಕಾದಂಬರಿಕಾರರಾಗಿ, ಸರ್ವಶ್ರೇಷ್ಠ ಪ್ರಬಂಧಕಾರರಾಗಿ, ಗಂಭೀರ ಸಂಶೋಧಕರಾಗಿ, ಮಾನವತಾವಾದೀ ಇತಿಹಾಸಕಾರರಾಗಿ, ಎಲ್ಲಕ್ಕೂ ಮಿಗಿಲಾಗಿ ಸ್ವಾಧೀನ ಚಿಂತಕರಾಗಿ ಹಿಂದೀ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ನೀಡಿದರು. ಉಪನಿಷತ್ಕಾಲೀನ ಭಾರತದ ಹಿನ್ನೆಲೆಯಲ್ಲಿ ನಿರೂಪಿತವಾದ ಅವರ ಸುಪ್ರಸಿದ್ಧ ಕಾದಂಬರಿ ‘ಅನಾಮದಾಸ ಕಾ ಪೋಥಾ'ದ ಉತ್ಕೃಷ್ಟ ಕನ್ನಡಾನುವಾದ ಇಲ್ಲಿದೆ. ಇಲ್ಲಿ ಮ.ಸು. ಕೃಷ್ಣಮೂರ್ತಿಯವರು ಬಳಸಿದ ಕನ್ನಡವು ಕಾದಂಬರಿಯ ಕಾಲದೇಶವನ್ನು ಸಮರ್ಥವಾಗಿ ಹಿಡಿದಿದೆ.

 

ABOUT THE AUTHOR

 

ಮೈಸೂರು ವಿಶ್ವವಿದ್ಯಾನಿಲಯದ ಹಿಂದೀ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ನಿವೃತ್ತರಾದ ಡಾ. ಮಂದಗೆರೆ ಸುಬ್ಬರಾವ್ ಕೃಷ್ಣಮೂರ್ತಿಯವರು (೧೯೩೧-೨೦೦೯) ಕನ್ನಡ ಮತ್ತು ಹಿಂದೀ ಭಾಷೆಗಳ ವಿರಳ ವಿದ್ವಾಂಸರಲ್ಲಿ ಒಬ್ಬರು. ಈ ಎರಡೂ ಭಾಷೆಗಳಲ್ಲಿ ಸೃಜನಶೀಲ ಮತ್ತು ವೈಚಾರಿಕ ಲೇಖನಗಳನ್ನು ಬರೆದು ಕ್ರಿಯಾಶೀಲರಾಗಿದ್ದ ಮಸಕೃ ರವರು ಕನ್ನಡದಿಂದ ಹಿಂದೀಗೂ, ಹಿಂದೀಯಿಂದ ಕನ್ನಡಕ್ಕೂ ಯಶಸ್ವಿಯಾಗಿ ಅನುವಾದಗಳನ್ನು ಮಾಡಿದ್ದಾರೆ. ಹಿಂದೀಯಲ್ಲಿ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ತಮ್ಮ ಅನುವಾದಗಳ ಮೂಲಕ ಈ ಎರಡು ಭಾಷಾ ಸಾಹಿತ್ಯಗಳ ನಡುವೆ ಸ್ನೇಹ ಸೌಹಾರ್ದಗಳ ಬೆಸುಗೆ ಹಾಕಿದ ಕೃಷ್ಣಮೂರ್ತಿಯವರು ಕವಿತೆ, ಕಿರುಗತೆ, ಲಲಿತಪ್ರಬಂಧ, ರೇಖಾಚಿತ್ರ, ಕಾದಂಬರಿ ಹಾಗೂ ನಾಟಕ ಕ್ಷೇತ್ರಗಳಿಗೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. 

ವಿದ್ಯಾರ್ಥಿ ಜೀವನದಿಂದಲೇ ಗಾಢವಾದ ಅಧ್ಯಯನದಲ್ಲಿ ತೊಡಗಿಕೊಂಡು ಕೃತಿರಚನೆಗೆ ಪಾದಾರ್ಪಣೆ ಮಾಡಿದ ಕೃಷ್ಣಮೂರ್ತಿಯವರು ೯೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ನಾಲ್ಕು ಹಿಂದೀ ಕಾದಂಬರಿಗಳು, ಒಂದು ಕಥಾಸಂಗ್ರಹ ಹಾಗೂ ನಾಲ್ಕು ಸೃಜನೇತರ ಪುಸ್ತಕಗಳು ಪ್ರಕಟವಾಗಿವೆ. ಕರ್ನಾಟಕದಲ್ಲಿ ಹಿಂದೀಯಲ್ಲಿ ಸ್ವತಂತ್ರ ಕಾದಂಬರಿ ಮತ್ತು ಕಥಾ ಸಂಗ್ರಹವನ್ನು ಬರೆದವರು ಕೃಷ್ಣಮೂರ್ತಿಯವರು ಒಬ್ಬರೇ ಎಂದು ಕಾಣುತ್ತದೆ. ನಮ್ಮ ಮಹತ್ವದ ಅನುವಾದಕರಲ್ಲೊಬರಾದ ಕೃಷ್ಣಮೂರ್ತಿಯವರು ಹಿಂದೀಯಿಂದ ಕನ್ನಡಕ್ಕೆ ಏಳು ಮಹತ್ವದ ಗ್ರಂಥಗಳನ್ನು ಅನುವಾದಿಸಿದ್ದಾರೆ. ಇವುಗಳಲ್ಲಿ ಹಜಾರೀಪ್ರಸಾದ ದ್ವಿವೇದಿಯವರ ಎರಡು ಕಾದಂಬರಿಗಳೂ ಸೇರಿವೆ. ಇದಲ್ಲದೇ, ಕನ್ನಡದಲ್ಲಿ ೧೪ ಕಾದಂಬರಿಗಳು, ಏಳು ನಾಟಕಗಳು, ೧೧ ಕವಿತಾ ಸಂಗ್ರಹಗಳು ಮತ್ತು ಜೀವನ ಚರಿತ್ರೆಯೊಂದನ್ನು ಪ್ರಕಟಿಸಿದ ಈ ಅಪರೂಪದ ವಿದ್ವಾಂಸರು ಇಂಗ್ಲಿಷಿನಿಂದ ಕನ್ನಡಕ್ಕೂ ಅನುವಾದಿಸಿದ್ದಾರೆ.

ಡಾ| ಮ.ಸು. ಕೃಷ್ಣಮೂರ್ತಿಯವರ ವೈಶಿಷ್ಟ್ಯ ಅವರ ಸರಳ ಜೀವನ ಮತ್ತು ಉದಾತ್ತ ಚಿಂತನೆ. ಎಂದೂ ಅವರು ಆಡಂಬರಕ್ಕೆ ಮನಸೋತವರಲ್ಲ. ಅವರು ಸೌಜನ್ಯ ಹಾಗೂ ಸಜ್ಜನಿಕೆಯ ಸಾಕಾರಮೂರ್ತಿ, ಅವರ ಔದಾರ್ಯ ಹಾಗೂ ಅವರ ಶಿಷ್ಯ ವಾತ್ಸಲ್ಯ ಅಪರಿಮಿತ. ಅವರನ್ನು ಅನೇಕ ಪ್ರಶಸ್ತಿಗಳು ಅರಸಿ ಬಂದವು. ಹಿಂದೀ ಭಾಷೆಗೆ ಅವರು ಸಲ್ಲಿಸಿದ ಸೇವೆಗೆ ಅವರು ರಾಷ್ಟ್ರಪತಿಗಳಿಂದ ತಾಮ್ರ ಪತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.

ಹಜಾರಿಪ್ರಸಾದ್ ದ್ವಿವೇದಿ (೧೯೦೭-೧೯೭೯) ಅವರು ಹಿಂದೀ ಮಾತ್ರವಲ್ಲದೇ ಬಹುಭಾಷಾ ಪಂಡಿತರು. ಕಾದಂಬರಿಕಾರರು, ವಿಮರ್ಶಕರು ಆಗಿದ್ದ ಇವರು ಭಕ್ತಿ ಪಂಥದ ಬಗ್ಗೆ ಅಪಾರ ಅಧ್ಯಯನ ನಡೆಸಿ – ಕಬೀರ್ ಹಾಗು ನಾಥ ಪಂಥದ ಬಗ್ಗೆ ಸುಧೀರ್ಘವಾಗಿ ಬರೆದಿದ್ದಾರೆ. ಇವರು ಶಾಂತಿನಿಕೇತನದಲ್ಲಿ ಬಹಳ ಕಾಲವಿದ್ದು ರಬೀಂದ್ರನಾಥ ಟಾಗೋರರಿಂದ ಪ್ರಭಾವಿತರಾಗಿದ್ದರು. ೧೯೫೭ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ಹಾಗು ೧೯೭೩ರಲ್ಲಿ ಸಾಹಿತ್ಯ ಅಕಾಡೆಮಿಯ ಗೌರವ ಸಂದಿತು.

 

ಪುಟಗಳು: 310

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)