ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ಅಂಬರೀಶ್‌

ಅಂಬರೀಶ್‌

e-book
ಪಬ್ಲಿಶರ್
ಡಾ.ಶರಣು ಹುಲ್ಲೂರು
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

1. ಪಡುವಾರಹಳ್ಳಿ‌ ಪಾಂಡವರು ಚಿತ್ರದ ಶೂಟಿಂಗಿನಲ್ಲಿದ್ದಾಗ ಅಂಬಿ ಅವರ ತಂದೆ ಈ ಲೋಕ ಬಿಟ್ಟು ಹೊರಟರು.‌ ಮೂರು ದಿನ ನಿದ್ದೆಯಿಲ್ಲದೇ ತಂದೆಯನ್ನು ಕೊನೆಯ ಬಾರಿ ನೋಡಲು ಬಂದ ಅಂಬಿಗೆ ಅವರ ತಾಯಿ ಹೇಳಿದ್ದೇನು? 
2. ದೇವರ ಕಣ್ಣು ಚಿತ್ರದಲ್ಲಿ ಅಂಬಿ ನಟನೆ ನೋಡಿ ಮನೆಗೆ ಬಂದ ಅವರ ತಂದೆ 'ನೀನು ನನ್ನ ಮಗನಾಗಿ ಹುಟ್ಟಬಾರದಿತ್ತು' ಎಂದು ಯಾಕೆ ಕೋಪದಿಂದ ನುಡಿದರು?
3. ಫೀಸ್ ಕಟ್ಟಿಲ್ಲ ಎಂದು ಕಾಲೇಜಿಗೆ ಸೇರಿಸಿದ ಹುಡುಗಿ ಅಳುತ್ತ ಅಂಬಿ ಮುಂದೆ ಬಂದಾಗ ಆಕೆಗೆ ನೆರವಾಗುವ ಮುನ್ನ ಅಂಬಿ ಕಾಲೇಜು ಪ್ರಿನ್ಸಿಪಾಲರ ಜೊತೆ ಏನು ಮಾತಾಡಿದರು?
4. ಅಮೇರಿಕದಲ್ಲಿ ಹುಶಾರಿಲ್ಲದೇ ತೊಂದರೆಗೀಡಾಗಿದ್ದ ಅಣ್ಣಾವ್ರ ಅಳಿಯ ಗೋವಿಂದರಾಜ್ ಅವರಿಗೆ ಇಲ್ಲಿಂದಲೇ ಅಂಬಿ ಹೇಗೆ ನೆರವಾದರು?
5. ನಟ ಸುಧೀರ್ ಯಾಕೆ ತಮ್ಮ ಮನೆಗೆ 'ಅಂಬಿ ನಿಲಯ' ಅಂತ ಹೆಸರಿಟ್ಟಿದ್ದು?

ನಟ ಅಂಬರೀಶ್ ಅವರ ಕುರಿತು ಕನ್ನಡದಲ್ಲಿ ಬಂದ ಬಹಳ ಆಪ್ತವಾದ ಜೀವನಚರಿತ್ರೆಯಂತಹ ಪುಸ್ತಕ "ಅಂಬರೀಶ್" ಈಗ ಇಬುಕ್ ರೂಪದಲ್ಲಿ ನಿಮ್ಮ ಮುಂದೆ.

ಪುಸ್ತಕದ ಕುರಿತು ಸಾಹಿತಿ ಜೋಗಿಯವರ ಮಾತುಗಳು:

ನಟ ಅಂದರೆ ನಟನಲ್ಲ. ರಾಜಕಾರಣಿ ಅಂದರೆ ರಾಜಕಾರಣಿ ಆಲ್ಲ. ಅಹಂಕಾರಿ ಅಲ್ಲ, ಸ್ಟಾರ್‌ ಅಲ್ಲ, ಸೋಮಾರಿ ಅಲ್ಲ, ಸಮಯ ಪಾಲಕ ಅಲ್ಲ, ಮಹತ್ವಾ ಕಾಂಕ್ಷಿ ಮೊದಲೇ ಅಲ್ಲ. ಗೆಲ್ಲಬೇಕು ಅಂತ ಹೊರಡಲಿಲ್ಲ. ನಿಲ್ಲಬೇಕು ಅಂತ ಹೋರಾಡಲೂ ಇಲ್ಲ. ಅಂಬರೀಶ್‌ ಇದ್ದದ್ದೇ ಹಾಗೆ... Most reluctant actor. More reluctant politician. ಪಾಲಿಗೆ ಬಂದದ್ದು ಪರಮ ಸುಖ ಆಂತ ಇದ್ದುಬಿಟ್ಟ ಸಂತ. ಯಾರ ತಾಳಕ್ಕೂ ಕುಣಿಯದ ನಿಶ್ಚಿಂತ. ಮಾತಿಗೆ ಅಂಕುಶ ಇರಲಿಲ್ಲ. ನಡೆ ನುಡಿಯ ನಡುವೆ ಅಂತರ ಇರಲಿಲ್ಲ. ಸೋತ ಬೇಸರ, ಗೆದ್ದ ಅಹಂಕಾರ ಎರಡೂ ಇರಲಿಲ್ಲ. ಅವರ ಬಗ್ಗೆ ಯಾರೂ ಬರೆಯಲಿಲ್ಲ. ಏನು ಬರೆಯಬೇಕು ಅಂತ ಯಾರಿಗೆ ತಾನೇ ಗೊತ್ತಿತ್ತು. ಅವರು ಹೀಗೆ ಅಂತ ಯಾರಾದರೂ ಬರೆದರೆ ತಾನು ಹಾಗಲ್ಲ ಅಂತ ಮರುಕ್ಷಣವೇ ಸಾಬೀತು ಮಾಡುತ್ತಿದ್ದ ಕ್ಷಣ ಕ್ಷಣದ ಅಮರನಾಥ. ಈಗ ಗೆಳೆಯ ಶರಣು ಹುಲ್ಲೂರು ಅವರ ಕುರಿತು ಕುಂದಿಲ್ಲದೆ ಬರೆದು ಅವರ ನೆನೆದಿದ್ದಾರೆ. ಇದು ಅಂಬರೀಶ್‌ ಕುರಿತ ಮೊದಲ ಪುಸ್ತಕ ಅಲ್ಲದೇ ಇರಬಹುದು. ಆದರೆ ಅಂಬರೀಶ್‌ ಅಂತಸ್ಪೂರ್ತಿಯನ್ನು ಯಥಾವತ್ತು ಹಿಡಿದಿಡಲು ಅಚ್ಚುಕಟ್ಟಾಗಿ ಹವಣಿಸಿದ ಮೊತ್ತ ಮೊದಲ ಕೃತಿ. ಶರಣು ಹುಲ್ಲೂರು ಇದನ್ನು ಬರೆದು ನಮ್ಮೆಲ್ಲರ guilt ಕಮ್ಮಿ ಮಾಡಿದ್ದಾರೆ.

-ಜೋಗಿ 


ಪುಟಗಳು: 164

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !