ಲೇಖಕರು:
ಮೂಲ ಬಿಪಿನ್ ಚಂದ್ರ
ಅನುವಾದ ಡಾ|| ಎಚ್. ಎಸ್. ಗೋಪಾಲ ರಾವ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಆಧುನಿಕ ಭಾರತದ ಇತಿಹಾಸ ಕೃತಿಯು ಬ್ರಿಟಿಷ್ ಇಂಡಿಯಾ ಎಂದು ತಿಳಿಯಲಾಗಿದ್ದ ಪ್ರದೇಶದ ಅಧಿಕಾರಯುತ ಇತಿಹಾಸವನ್ನು ಸ್ಥೂಲವಾಗಿ ನಿರೂಪಿಸುತ್ತದೆ. ಕೃತಿಯ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಅದೇ ಅವಧಿಯ ಖ್ಯಾತ ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ. ಇತಿಹಾಸದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿಯ ಪರಿಷ್ಕರಣ ಮತ್ತು ವ್ಯಾಖ್ಯಾನವನ್ನು ಪ್ರಶ್ನಿಸುವಲ್ಲಿ ಈ ಕೃತಿಯು ರಾಜಕೀಯ ನಿರೂಪಣೆಯಿಂದ ದೂರ ಸರಿದು, ಆಧುನಿಕ ಭಾರತದ ಸಾಮಾಜಿಕ, ಆರ್ಥಿಕ ಮತು ಧಾರ್ಮಿಕ ಇತಿಹಾಸದತ್ತ ಸರಿದಿದೆ. ಭಾರತದಲ್ಲಿ 18ನೇ ಶತಮಾನದಲ್ಲಿದ್ದ ಪರಿಸ್ಥಿತಿಯು ಹೇಗೆ ಈಸ್ಟ್ ಇಂಡಿಯಾ ಕಂಪೆನಿಯು ಭಾರತದಲ್ಲಿ ಆಳ್ವಿಕೆಯನ್ನು ಸ್ಥಾಪಿಸಲು ನೆರವಾಯಿತು ಎಂಬ ಬಗ್ಗೆ ಈ ಕೃತಿಯು ವಿವರಿಸುತ್ತದೆ. ವ್ಯಾಪಾರ ಮತ್ತು ಬಂಡವಾಳ ಹೂಡಿಕೆಯ ಮೂಲಕ ಭಾರತವನ್ನು ಆರ್ಥಿಕವಾಗಿ ಶೋಷಿಸುವ ವಸಾಹತುಶಾಹಿಯ ಮೂಲ ಉದ್ದೇಶದ ಬಗ್ಗೆಯೂ ಈ ಕೃತಿಯು ಪ್ರಮುಖ ಒಳನೋಟಗಳನ್ನು ನೀಡುತ್ತದೆ. ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ವಿವಿಧ ಶಕ್ತಿಗಳ ಪ್ರಯತ್ನವನ್ನು ತಿಳಿಯಲು ಅನುಕೂಲವಾಗುವಂತೆ ವಿಷಯಗಳನ್ನು ಜೋಡಿಸಲಾಗಿದೆ. ಆದರೂ, ಇಡಿಯಾಗಿ ವಿಷಯಗಳ ಜೋಡಣೆಯು ಉಪಖಂಡದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಸ್ಥಾಪನೆ ಮತ್ತು ಆಳ್ವಿಕೆಗೆ ಪ್ರಭಾವ ಬೀರಿದ ವಿವಿಧ ಶಕ್ತಿಗಳನ್ನು ಅನ್ವೇಷಿಸಲು ಅನುಕೂಲವಾಗುವಂತೆ ಕಾಲಾನುಕ್ರಮಣಿಕೆಯನ್ನು ಗಮನಿಸಲಾಗಿದೆ. ಕೃತಿಯು ರಾಷ್ಟ್ರೀಯ ಚಳವಳಿಯ ಮತ್ತು ರಾಷ್ಟ್ರೀಯ ಚಳವಳಿಯ ಹಿಂದಿದ್ದ ವಿವಿಧ ವ್ಯಕ್ತಿಗಳ ಕೊಡುಗೆಗಳ ಬಗೆಗೂ ವಿವರಗಳನ್ನು ನೀಡುತ್ತದೆ. ಇದು ಇತಿಹಾಸದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಆಸಕ್ತ ಓದುಗರಿಗೂ ಸಹ ಸಂಗ್ರಾಹ್ಯ ಪಠ್ಯವಾಗಿದೆ. ಆಧುನಿಕ ಭಾರತದ ನಿರ್ಮಾಣದ ಬಗ್ಗೆ ತಿಳಿಯಲು ಆಧುನಿಕ ಭಾರತದ ಇತಿಹಾಸ ಕೃತಿಯ ಓದು ಅವಶ್ಯಕ.
ಪುಟಗಳು: 372
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !