ವೈಜ್ಞಾನಿಕ, ಪತ್ತೇದಾರಿ ಹಾಗೂ ಸಾಮಜಿಕ ಕಥೆಗಳ ಕಥಾ ಸಂಕಲನ “ಮೂವತ್ತು ಸಾವಿರ ವರ್ಷಗಳ ನಂತರ ಮತ್ತು ಇತರ ಕಥೆಗಳು” .
ಮನುಷ್ಯ ಭೂಮಿಯನ್ನು ಬಿಟ್ಟದ್ದು ಏಕೆ? ಅನ್ಯ ಗ್ರಹಗಳಲ್ಲಿ ಬೀಡು ಬಿಟ್ಟು, ಟೆಲಿಪತಿಯ ಸಹಾಯದಿಂದ ತನ್ನ ರಬೋಟಿನ ಜೊತೆ ಮಾತನಾಡುವ ಕಾಲದಲ್ಲಿ ಮನುಷ್ಯ ಭೂಮಿಯನ್ನು ಅರಸುತ್ತ ಏಕೆ ವಾಪಸ್ಸಾದ? ಒಬ್ಬರ ಮೆದುಳನ್ನು ಇನೊಬ್ಬನ ದೇಹಕ್ಕೆ ವರ್ಗಾಯಿಸಿದಾಗ ಸಾಯುವುದು ಯಾರು? ನಮ್ಮ ನೆನಪುಗಳನ್ನು ಕಂಪ್ಯೂಟರಿನಲ್ಲಿ ಸೇವ್ ಮಾಡಿದಾಗ ಅದು ಕಲುಷಿತಗೊಳ್ಳಬಹುದೇ?
ವಾರಂತ್ಯದಲ್ಲೂ ಸಾಫ್ಟವೇರಿಗಳು ಏನು ಕೆಲಸ ಮಾಡುತ್ತಾರೆ? ಗ್ರಾಹಕರಿಂದ ಕರೆ ಬಂದಾಗ ಸಾಫ್ಟವೇರಿನಲ್ಲಿನ ತೋಡಕನ್ನು ಹೇಗೆ ಬಗೆಹರಿಸುತ್ತಾರೆ? ಸಾಪ್ಟವೇರಿನ ಮುಖಾಂತರ ಹಣ ಲಪಟಾಯಿಸುವ ಪರಿಯನ್ನು ಪತ್ತೆ ಮಾಡುವ ಮತ್ತು ಒಂದು ಐಟಿ ಕಂಪನಿಯೊಂದುರಲ್ಲಿ ನಡೆಯುವ ವಿಭಿನ್ನ ಪತ್ತೇದಾರಿ ಕಥೆ “ಡಿಜಿಟಲ್ ಕಳ್ಳನ ಜಾಡು”.
ವೃತ್ತಿಯನ್ನೇ ತಮ್ಮ ಆಧ್ಯತೆ ಮಾಡಿಕೊಳ್ಳುವ ಒಂದು ದಂಪತಿ ಬೇರೆಯಾಗಿ ಮತ್ತೆ ಒಬ್ಬರನ್ನು ಒಬ್ಬರು ಅರಸಿದ್ದು ಏಕೆ? “ಮಿ.ರೈಟ್” ಸಿಕ್ಕದೆ ಏಕಾಂತವಾಗಿದ್ದ ಯಶಸ್ವಿ ಸಾಫ್ಟವೇರಿಗೆ ಜೊತೆಯಾಗಿದ್ದು ಯಾರು? ಮೇಧಾವಿ ಹಾಗೂ ಯಶಸ್ವಿ ದಂಪತಿಗೆ ಹುಟ್ಟಿದ ಮಗಳಿಗೆ ಪಾಠಕ್ಕಿಂತ ಕಲೆಗಳಲ್ಲಿ ಅಭಿರುಚಿ ಹೆಚ್ಚು. ಅವರ ಬಲವಂತ ಅವಳ ಮನಸ್ಸನ್ನು ಕೆರಳಿಸಿ ಎಲ್ಲಿಗೆ ಕರೆದ್ಯೂಯಿತು? ಗಂಡ ಸತ್ತ ವರ್ಷ, ವಿಧವೆ ದೇವಸ್ಥಾನಕ್ಕೆ ಹೋಗಬಾರದೆ? ಶ್ರೀಮತಿ ಮತ್ತು ಶ್ರೀ ಅರ್ಧಂಬರ್ಧ ಅವರ ಜೀವನ ಎತ್ತ ಸಾಗಿದ? ಹೀಗೆ ನೂರಾರು ಸವಾಲುಗಳು. ಹೊಸ ಯುಗದ ಸವಾಲುಗಳು ಹಾಗೂ ಹಳೆಯ ಸಂಪ್ರ್ರದಾಯಗಳು ಎಬ್ಬಿಸುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನ ಈ ಸಂಕಲನದ ಕಥೆಗಳು ಮಾಡುತ್ತವೆ.