Click here to Download MyLang App

 ಸರಕಾರಿ ನೌಕರಿಯ ಅಂತರಂಗ-ಬಹಿರಂಗ ಮೋಹನದಾಸ ಕಿಣಿ, SARAKARI NOUKARIYA ANTARANGA BAHIRANGA, MOHANDAS KINI.  ಸರಕಾರಿ ನೌಕರಿ- ಅಂತರಂಗ-ಬಹಿರಂಗ (ಇಬುಕ್),ಮೋಹನದಾಸ ಕಿಣಿ,Sarakari novkari antaranga bahiranga,Mohanadasa Kini

ಸರಕಾರಿ ನೌಕರಿ- ಅಂತರಂಗ-ಬಹಿರಂಗ (ಇಬುಕ್)

e-book

ಪಬ್ಲಿಶರ್
ಮೋಹನದಾಸ ಕಿಣಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಸರಕಾರಿ ನೌಕರಿ ಅಂದರೆ ಯಾವುದೇ ಕೆಲಸ ಇರುವುದಿಲ್ಲ, ಕಚೇರಿಗೆ ಹೋಗಲಿ, ಬಿಡಲಿ, ಕೆಲಸ ಮಾಡಿದರೂ ಮಾಡದಿದ್ದರೂ, ಸಂಬಳದ ಜೊತೆ ಗಿಂಬಳಕ್ಕೂ ಸಾಕಷ್ಟು ಅವಕಾಶ ಇರುವ, ಕೂತು ಉಣ್ಣುವ ವೃತ್ತಿ ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಈ ಅಭಿಪ್ರಾಯ ಪೂರ್ತಿ ಸುಳ್ಳಲ್ಲದಿದ್ದರೂ ಹೊರನೋಟಕ್ಕೆ ಕಾಣುವುದೆಲ್ಲಾ ಸತ್ಯವಲ್ಲ. ಅದೇ ವೇಳೆ ಸರ್ಕಾರದ ನೌಕರಿ ಎನ್ನುವುದು ಒತ್ತಡವನ್ನು ಸೃಷ್ಟಿಸುವ ವೃತ್ತಿ ಎನ್ನುವುದು ಜನಸಾಮಾನ್ಯರಿಗೆ ಗೊತ್ತಾಗದು. ಸರಕಾರಿ ನೌಕರರಿಗೆ ಏನು ಒತ್ತಡ? ಯಾವ ಒತ್ತಡ? ಎನ್ನುವುದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಅತೀ ಸಣ್ಣ ಹುದ್ದೆಯಿಂದ ಆರಂಭಿಸಿ, ಮುಖ್ಯ ಕಾರ್ಯದರ್ಶಿಯ ತನಕ ಎಲ್ಲಾ ವರ್ಗದ ಸಿಬ್ಬಂದಿಗೆ ಒಂದಲ್ಲ ಒಂದು ಒತ್ತಡ ಇದ್ದೇ ಇರುತ್ತದೆ. ಅದು ಮೇಲಾಧಿಕಾರಿಗಳಿಂದ ಬರುವ ಒತ್ತಡ ಇರಬಹುದು. ರಾಜಕಾರಣಿಗಳ ಒತ್ತಡಗಳಿರಬಹುದು ಅಥವಾ ಸಾರ್ವಜನಿಕರು ಹೇರುವ ಒತ್ತಡಗಳಿರಬಹುದು. ಸಾರ್ವಜನಿಕರು ಈ ಒತ್ತಡ ಭ್ರಷ್ಟರಿಗೆ ಮಾತ್ರ ಇರಬಹುದೆಂದುಕೊಂಡರೆ ಅದು ಕೂಡಾ ಸುಳ್ಳೂ ಹೌದು ಸತ್ಯವೂ ಹೌದು. ಹಾಗೆ ನೋಡಿದರೆ, ಅಪ್ಪಟ ಪ್ರಾಮಾಣಿಕ ನೌಕರರಿಗೆ ಒತ್ತಡಗಳು ಭ್ರಷ್ಟ ನೌಕರನಿಗಿಂತ ಹೆಚ್ಚೇ ಇರುತ್ತದೆ ಎಂದರೆ ಆಶ್ಚರ್ಯವಾಗಬಹುದು. ಸರ್ಕಾರಿ ಉದ್ಯೋಗಗಳಲ್ಲಿ ಕೆಲಸದ ಒತ್ತಡ, ರಾಜಕೀಯ ಹಸ್ತಕ್ಷೇಪ ಒಂದು ಆಯಾಮವಾದರೆ, ತೀರಾ ಗ್ರಾಮೀಣ ಪ್ರದೇಶಗಳಿಗೆ ನಿಯೋಜಿತರಾಗುವ ಪಂಚಾಯತ್ ಕಾರ್ಯದರ್ಶಿಯಿರಲಿ, ಆರೋಗ್ಯ ಸಹಾಯಕಿಯರಿರಲಿ, ಅಷ್ಟೇಕೆ ಹೊಸದಾಗಿ ಆಯ್ಕೆಯಾಗುವ ವೈದ್ಯಾಧಿಕಾರಿಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಕೆಲಸ ಮಾಡಬೇಕೆಂದರೆ, ಅಂತಹ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ, ಸ್ವಂತ ಮಾನ-ಪ್ರಾಣದ ರಕ್ಷಣೆಯೇ ಸವಾಲಾದ ಸಂದರ್ಭಗಳೂ ಇವೆ. ತಾವೆಷ್ಪೇ ಪ್ರಾಮಾಣಿಕವಾಗಿರಲು ಪ್ರಯತ್ನಿಸಿದರೂ, ಇನ್ಯಾರಿಗಾಗಿಯೋ ಹಣ ಪಡೆದು ತಾನು ಕೆಟ್ಟ ಹೆಸರು ಪಡೆಯುವ ಚಕ್ರವ್ಯೂಹಕ್ಕೆ ಸಿಲುಕಿದಾಗ, ಒಂದೋ ತಾನೂ ಒಂದಿಷ್ಟು ಸಂಪಾದನೆ ಮಾಡುವತ್ತ ಯೋಚಿಸುತ್ತಾರೆ, ಅಥವಾ ಸರಕಾರಿ ಸೇವೆಯನ್ನು ತ್ಯಜಿಸಿ, ತನ್ನ ಯೋಗ್ಯತೆಗೆ ಸೂಕ್ತವಾದ ಉದ್ಯೋಗ/ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೆ. ಅಂತಿಮವಾಗಿ ಉಳಿಯುವುದು ಜೊಳ್ಳು ಮಾತ್ರ. ಹಾಗೆ ಸರ್ಕಾರದ ಉದ್ಯೋಗದಲ್ಲಿ ಉಳಿದವರು ಯಾರದೋ ನೀರಡಿಕೆ ನೀಗಿಸಲು ತಾವು ಉಪ್ಪು ನೀರು ಕುಡಿದು, ಇನ್ನಷ್ಟು-ಮತ್ತಷ್ಟು ಬಾಯಾರಿಕೆ ಹೆಚ್ಚಿಸಿಕೊಂಡು ಕೊನೆಗೊಮ್ಮೆ ವಾಂತಿ ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ. ಇನ್ನು ಸರಕಾರಿ ನೌಕರರು ಮತ್ತು ಸಾರ್ವಜನಿಕರ ನಡುವಿನ ಸಂವಹನದ ಕೊರತೆಗೆ ಕಾರಣಗಳು, ವೃತ್ತಿಗೆ ಹೊರತಾದ ಕರ್ತವ್ಯ ನಿರ್ವಹಣೆಯ ಒತ್ತಡ, ಮೂಲಭೂತ ಸೌಕರ್ಯಗಳ ಕೊರತೆಯ ನಡುವೆ ಸೇವೆ ನೀಡಬೇಕಾದ ಅನಿವಾರ್ಯತೆ, ತನ್ನದಲ್ಲದ ತಪ್ಪಿಗೆ ಬಲಿಪಶುವಾಗುವ ಸಂಧರ್ಭ ವಿಪುಲವಾಗಿ ಇರುತ್ತದೆ. ಸರಕಾರಿ ಉದ್ಯೋಗದಲ್ಲಿ ಸುಮಾರು ನಾಲ್ಕು ದಶಕಗಳ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ಬರೆದ ಅಂಕಣಬರಹಗಳ ಸಂಕಲನ: ಸರಕಾರಿ ನೌಕರಿಯ ಅಂತರಂಗ-ಬಹಿರಂಗ ಮೋಹನದಾಸ ಕಿಣಿ, SARAKARI NOUKARIYA ANTARANGA BAHIRANGA, MOHANDAS KINI.

Customer Reviews

No reviews yet
0%
(0)
0%
(0)
0%
(0)
0%
(0)
0%
(0)