Click here to Download MyLang App

ಜೋಗವ್ವ (ಇಬುಕ್)

ಜೋಗವ್ವ (ಇಬುಕ್)

e-book

ಪಬ್ಲಿಶರ್
ಕುಮಾರ ಬೇಂದ್ರೆ
ಮಾಮೂಲು ಬೆಲೆ
Rs. 130.00
ಸೇಲ್ ಬೆಲೆ
Rs. 51.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

‘ಜೋಗವ್ವ’ ಜಾನಪದ ಶೈಲಿಯ ವಿಶಿಷ್ಟ ಕಾದಂಬರಿ. ಕಡುಬಡತನದಲ್ಲಿ ಹುಟ್ಟಿ ಶಿಕ್ಷಣ ಪಡೆದ ಹೆಣ್ಣೊಬ್ಬಳು ಬದುಕಿನ ಬಗೆಗೆ ಹಲವು ಕನಸುಗಳನ್ನು ಕಟ್ಟಿಕೊಂಡು, ಯುವಕನೊಬ್ಬನನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಗಂಡನ ಮನೆಗೆ ಹೋಗುತ್ತಾಳೆ. ಆ ಮನೆಯ ಸದಸ್ಯರು ತಲೆಮಾರುಗಳಿಂದ ನಡೆಸಿಕೊಂಡು ಬಂದ ಸಂಪ್ರದಾಯ, ನಂಬಿರುವ ಮೌಢ್ಯ ಅವಳನ್ನು ಜೋಗತಿಯಾಗಲು ಹೇಗೆ ಪ್ರೇರೇಪಿಸಿ ಒತ್ತಡ ಸೃಷ್ಟಿಸುತ್ತದೆ ಎಂಬುದು ಮತ್ತು ಅವಳು ಅದರಿಂದ ಮುಕ್ತವಾಗಲು ಬದುಕಿನೊಂದಿಗೆ ಹೇಗೆ ಹೋರಾಟ ಮಾಡಿದಳು ಎಂಬುದೇ ಕಥಾವಸ್ತು. `ದೇಶೀಯ ಸೊಗಡು, ಆಡುಭಾಷೆಯ ಸೊಗಸು, ಮಾತಿನಲ್ಲಿ ಲವಲವಿಕೆ, ಪಾತ್ರ ಪೋಷಣೆಯಲ್ಲಿ ಬಂಧುರತೆ, ಕತೆಗೆ ಇಂಬನ್ನೀಯುವ ಪ್ರಸಂಗಗಳ ಚಿತ್ರಣದಲ್ಲಿ ಕುಸುರಿಯ ಕೌಶಲ್ಯ ಮತ್ತು ಸಹಜತೆ ಈ ಕಾದಂಬರಿಯ ಮೆರುಗುಗಳು.’ ಎಂದು ಹಿರಿಯ ಲೇಖಕರಾದ ಶಿಕಾರಿಪುರ ಹರಿಹರೇಶ್ವರ ಅವರು ಈ ಕೃತಿಗೆ ಬರೆದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ. ಈ ಕಾದಂಬರಿಗೆ ಅಮೆರಿಕದಲ್ಲಿ ಜರುಗಿದ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ-೨೦೦೬’ದ ಅಂಗವಾಗಿ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯಲ್ಲಿ ತೀರ್ಪುಗಾರರ ಬಹುಮಾನ ಸಂದಿದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)