ಸ್ಮೃತಿ ಕಳೆದುಕೊಂಡ ಹರೆಯದ ಹುಡುಗಿ. ವಂಚಕಿಯೋ, ಅಪರಂಜಿಯೋ ತಿಳಿಯದೆ ಒದ್ದಾಡುವ ಮನೆ ಹಿರಿಯಣ್ಣ. ಏನನ್ನೂ ಅಪೇಕ್ಷಿಸದೆ ಇನಿಯನಿಗೆ ಪ್ರೇಮ ಧಾರೆಯೆರೆಯುವ ಪ್ರೌಢ ವೈದ್ಯೆ. ಸ್ಮೃತಿ ಕಳೆದಿದ್ದರೂ ಹುಡುಗಿಗೆ ಬೆಂಗಾವಲಾಗಿ ನಿಲ್ಲೋ ಯುವ ಪ್ರೇಮಿ... ಹೆಜ್ಜೆಹೆಜ್ಜೆಗೂ ಪರೀಕ್ಷೆ, ಅನುಮಾನ ಎದುರಿಸುವ ಈ ವಿಸ್ಮೃತಾ ಬದುಕು, ಯಾವ ಹೂವು ಯಾರ ಮುಡಿಗೋ ಅಥವಾ ಗೂಡು ಸೇರಿದ ಮರಿಯ ಕಥೆಯೋ?