
ಅಮೆರಿಕಾದಲ್ಲಿ ನೆಲಸಿ ಉದ್ಯಮ ಸ್ಥಾಪಿಸಿದ ಇಂಜಿನಿಯರನನ್ನು ಮದುವೆಗೆ ತಾಯಿ ಒತ್ತಾಯಿಸುತ್ತಾಳೆ. ಮದುವೆಯಿಂದ ಗುರಿ ಸಾಧಿಸಲಾಗದು ಎಂದು ಮದುವೆ ಮುಂದೂಡುತ್ತಾ ಬಂದಿದ್ದ ಇಂಜಿನಿಯರ್ ಕೊನೆಗೊಮ್ಮೆ ಒಪ್ಪಿ, ಪತ್ನಿಯ ಜಾಗದಲ್ಲಿ ಆರನೆ ಜನರೇಶನ್ ಹೆಣ್ಣು ರೋಬೋ ತಂದು ತಾಯಿಯನ್ನು ಭಾರತದಿಂದ ಕರೆಸಿಕ್ಕೊಳ್ಳುತ್ತಾನೆ. ತನ್ನ ಸೊಸೆ ರೋಬೋ ಎಂದು ಗುರುತಿಸಲಾರದೆ ತಾಯಿ ಸಂತೋಷಪಡುತ್ತಾಳೆ. ಅನುಮಾನಕ್ಕೆ ಆಸ್ಪದ ಕೊಡದಂತೆ ಅತ್ತೆಯ ಮನ ಮೆಚ್ಚುಸುತ್ತದೆ ಹೆಣ್ಣು ರೋಬೋ ವೆರೋನಿಕಾ. ತಾಯಿ ಮೊಮ್ಮಗನ ಬೇಡಿಕೆ ಮುಂದಿಟ್ಟಾಗ ಇಂಜಿನಿಯರ್ ಗಾಬರಿಗೊಳ್ಳುತ್ತಾನೆ. ಅನೇಕ ಸಂದರ್ಭಗಳು ಒದಗುತ್ತವೆ. ಕೊನೆಯಲ್ಲಿ ತನ್ನಸೊಸೆ ರೋಬೋ ಎನ್ನುವುದು ತಿಳಿಯದಿರಲು ಮಗ ಹರ ಸಾಹಸ ಪಡುತ್ತಾನೆ. ಕೊನೆಗೊಮ್ಮೆ ರೋಬೋ ತಾಯಿಯ ಅಚಾತುರ್ಯದಿಂದ ಕೆಟ್ಟು ಹೋಗುತ್ತದೆ. ಆ ಜಾಗದಲ್ಲಿ ನಿಜವಾದ ಪತ್ನಿಯನ್ನು ತರುವ ಮನಸ್ಸು ಮಾಡುತ್ತಾನೆ ಮಗ. ತಾನು ಹಿಂದೆ ಪ್ರೀತಿಸಿದ್ದ ಯುವತಿಯ ಮನ ಒಲಿಸಿ ಮದುವೆಯಾಗುತ್ತಾನೆ. ಮತ್ತೊಬ್ಬಳನ್ನು ಮದುವೆಯಾಗುತ್ತಿರುವ ಮಗನನ್ನು ಕಂಡು ತಾಯಿ ಕೋಪಗೊಳ್ಳುತ್ತಾನೆ. ಆಕೆಯ ಕೋಪವನ್ನು ಹೇಗೆ ತಣಿಸುತ್ತಾನೆ ಎನ್ನುವುದೇ ಕುತೂಹಲ ಕೊನೆಯವರೆಗೂ ಉಳಿಯುತ್ತದೆ.