ಸುಖದಲ್ಲಿ ಯುಗವೂ ಒಂದು ನಿಮಿಷದಂತೆ ಕಳೆದು ಹೋಗುತ್ತದೆ. ಆದರೆ ಕಷ್ಟದಲ್ಲಿ ಒಂದೊಂದು ನಿಮಿಷವೂ ಒಂದೊಂದು ಯುಗದಂತೆ ಭಾರವಾಗುತ್ತದೆ. ಕರೋನಾ ಸಂಕಷ್ಟವು ಜಗತ್ತಿಗೇ ದೊಡ್ಡ ಸವಾಲೆಸೆಯಿತು. ಯಾವುದೇ ಬೇಧಭಾವವಿಲ್ಲದೇ ಬಹುತೇಕರ ಕದ ತಟ್ಟಿತು. ಅನಾಥ ಕೂಗನ್ನ ಉಳಿಸಿ ಮನಸಿಗೆ ಬಂದವರ ಹೊತ್ತೊಯ್ದಿತು. ಜನಸಾಮಾನ್ಯರ ಬದುಕನ್ನ ತಲ್ಲಣಗೊಳಿಸಿತು. ಮನುಕುಲವನ್ನು ಮನುಷ್ಯರೇ ಉಳಿಸಬೇಕಲ್ಲವೇ....! ಈ ಹೋರಾಟದಲ್ಲಿ ಎಲ್ಲರೂ ಯೋಧರೇ.... ಆದರೆ ಮುಂಚೂಣಿಯಲ್ಲಿ ಹೋರಾಡಿದವರು ದೈವಸ್ವರೂಪಿಗಳೇ. ೨೧ ನೇ ಶತಮಾನದ ಈ ಸಂದಿಗ್ಧಪರಿಸ್ಥಿತಿ, ಎದುರಿಸಿದ ರೀತಿ, ಜೀವನದಲ್ಲಿ ಕರೋನಾದ ಪರಿಣಾಮದ ಚಿತ್ರಣ ಈ ಕಾದಂಬರಿಯಲ್ಲಿದೆ.
ಮಹಾಯಾನ,ಶೀಲಾ. ಗೌಡರ,Mahayana,Sheela Gowdara