Android app FAQs
ಮೈಲ್ಯಾಂಗ್ ಆಂಡ್ರಾಯ್ಡ್ ಆ್ಯಪ್ ಬಳಸಿ ಇ-ಪುಸ್ತಕಗಳನ್ನು ಮತ್ತು ಆಡಿಯೋ ಪುಸ್ತಕಗಳನ್ನು ಕೊಳ್ಳುವುದು ಹೇಗೆ? ಖರೀದಿಸಿದ ನಂತರ ಅವನ್ನು ಓದುವುದು/ಕೇಳುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಈ ಕೆಳಗಿನ ಎರಡು ನಿಮಿಷದ ವಿಡಿಯೋ ನೋಡಿ.
ಆಂಡ್ರಾಯ್ಡ್ ಆ್ಯಪ್ ಎಲ್ಲರೂ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು:
ಪ್ರಶ್ನೆ: ನನ್ನ ಬಳಿ ಆಂಡ್ರಾಯ್ಡ್ ಫೋನ್/ಟ್ಯಾಬ್ ಇದೆ. ಮೈಲ್ಯಾಂಗ್ ಪುಸ್ತಕಗಳನ್ನು ಹೇಗೆ ಕೊಳ್ಳುವುದು, ಓದುವುದು?
ಉತ್ತರ: ನೀವು ಆಂಡ್ರಾಯ್ಡ್ ಫೋನ್/ಟ್ಯಾಬ್ ಹೊಂದಿದ್ದಲ್ಲಿ, ಎರಡು ವಿಧಗಳಲ್ಲಿ ಮೈಲ್ಯಾಂಗ್ ಪುಸ್ತಕಗಳನ್ನು ಕೊಂಡು, ಓದಬಹುದು:
ವಿಧಾನ 1:
- ಗೂಗಲ್ ಪ್ಲೇ ಸ್ಟೋರ್ ಕೊಂಡಿ: https://play.google.com/store/apps/details?id=com.mylang.in ಗೆ ಹೋಗಿ ಮೈಲ್ಯಾಂಗ್ ಆ್ಯಪ್ ಹಾಕಿಕೊಳ್ಳಿ.
- ನಿಮ್ಮ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ. ನಿಮಗೆ ಬೇಕಾದ ಪುಸ್ತಕಗಳನ್ನು ಆ್ಯಪ್ ಒಳಗೇ ಕೊಳ್ಳಿರಿ. ಖರೀದಿಸುವಾಗ ನೀವು ಲಾಗಿನ್ ಆಗಲು ಬಳಸಿದ ಮೊಬೈಲ್ ಸಂಖ್ಯೆಯನ್ನೇ ಕೊಡಿ.
- ನಿಮ್ಮ ಆ್ಯಪ್ ಅಲ್ಲಿರುವ “ನನ್ನ ಪುಸ್ತಕಗಳು” ವಿಭಾಗದಲ್ಲಿ ನಿಮ್ಮ ಪುಸ್ತಕಗಳು ಓದಲು, ಕೇಳಲು ರೆಡಿ!
ವಿಧಾನ 2:
- ಗೂಗಲ್ ಪ್ಲೇ ಸ್ಟೋರ್ ಕೊಂಡಿ: https://play.google.com/store/apps/details?id=com.mylang.in ಗೆ ಹೋಗಿ ಮೈಲ್ಯಾಂಗ್ ಆ್ಯಪ್ ಹಾಕಿಕೊಂಡು, ನಿಮ್ಮ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ.
- ಮೊಬೈಲ್ ಇಲ್ಲವೇ ಡೆಸ್ಕ್ ಟಾಪ್ ಬ್ರೌಸರ್ ಬಳಸಿ ಭಾರತದಲ್ಲಿದ್ದರೆ www.mylang.in, ಹೊರದೇಶದಲ್ಲಿದ್ದರೆ www.mylangbooks.com ತಾಣಕ್ಕೆ ಹೋಗಿ, ನಿಮ್ಮ ಇಷ್ಟದ ಇಬುಕ್/ಆಡಿಯೋ ಬುಕ್ ಅನ್ನು ಕೊಂಡುಕೊಳ್ಳಿ. ಖರೀದಿಸುವಾಗ ನೀವು ಲಾಗಿನ್ ಆಗಲು ಬಳಸಿದ ಮೊಬೈಲ್ ಸಂಖ್ಯೆಯನ್ನೇ ಕೊಡಿ.
- ನಿಮ್ಮ ಆ್ಯಪ್ ಅಲ್ಲಿರುವ “ನನ್ನ ಪುಸ್ತಕಗಳು” ವಿಭಾಗದಲ್ಲಿ ನಿಮ್ಮ ಪುಸ್ತಕಗಳು ಓದಲು, ಕೇಳಲು ರೆಡಿ!
ನೆನಪಿಡಿ: ನೀವು ಯಾವ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿದ್ದಿರೋ, ಅದೇ ನಂಬರ್ ಅನ್ನು ಪುಸ್ತಕ ಕೊಳ್ಳುವಾಗ ತಪ್ಪಿಲ್ಲದಂತೆ ನಮೂದಿಸಿ.
ಪ್ರಶ್ನೆ: ನಾನು ಹೊರದೇಶದಲ್ಲಿದ್ದೇನೆ, ಆದರೆ ನನ್ನ ಬಳಿ ಭಾರತೀಯ ರೂಪಾಯಿಗಳಲ್ಲಿ ಪಾವತಿಸುವ ವ್ಯವಸ್ಥೆ ಇದೆ. ನಾನು www.mylang.in ಬಳಸಿ ಪುಸ್ತಕ ಕೊಳ್ಳಬಹುದೇ?
ಉತ್ತರ: ನಿಮ್ಮ ಬಳಿ ಭಾರತೀಯ ರೂಪಾಯಿಗಳಲ್ಲಿ ಪಾವತಿಸುವ ವ್ಯವಸ್ಥೆ ಇದ್ದಲ್ಲಿ, ನೀವು ವಿದೇಶದಲ್ಲಿದ್ದರೂ www.mylang.in ತಾಣದ ಮೂಲಕ ಪುಸ್ತಕ ಕೊಳ್ಳಬಹುದು.
ಪ್ರಶ್ನೆ: ನಾನು ಕೊಂಡ ಪುಸ್ತಕವನ್ನು ಎಷ್ಟು ಸಾಧನಗಳಲ್ಲಿ ಓದಬಹುದು?
ಉತ್ತರ: ನೀವು ಕೊಂಡ ಪುಸ್ತಕವನ್ನು ನೀವು ಮೂರು ಫೋನ್/ಟ್ಯಾಬ್ ಅಲ್ಲಿ ಓದಬಹುದು. ನೀವು ಯಾವ ಮೊಬೈಲ್ ನಂಬರ್ ಬಳಸಿ ಕೊಂಡುಕೊಂಡಿದ್ದಿರೋ ಅದೇ ನಂಬರ್ ಬಳಸಿ ಲಾಗಿನ್ ಮಾಡಿದರೆ ಆಯ್ತು. ನಿಮ್ಮ ಪುಸ್ತಕಗಳು ಮೂರು ಸಾಧನಗಳಲ್ಲಿ ಓದಬಹುದು, ಕೇಳಬಹುದು.
ಪ್ರಶ್ನೆ: ನಾನು ಕೊಂಡ ಪುಸ್ತಕವನ್ನು ಪಿ.ಡಿ.ಎಫ್ ರೂಪದಲ್ಲಿ ಡೌನ್ ಲೋಡ್ ಮಾಡಿ ನನ್ನ ಲ್ಯಾಪ್-ಟಾಪ್ ಇಲ್ಲವೇ ಡೆಸ್ಕ್-ಟಾಪ್ ಅಲ್ಲಿ ಓದಬಹುದೇ?
ಉತ್ತರ: ಇಲ್ಲ. ನೀವು ಕೊಂಡ ಪುಸ್ತಕಗಳನ್ನು ನಿಮ್ಮ ಆಂಡ್ರಾಯ್ಡ್ ಫೋನ್/ ಟ್ಯಾಬ್ ಅಲ್ಲಿ ಹಾಕಲಾಗಿರುವ ಮೈಲ್ಯಾಂಗ್ ಆ್ಯಪ್ ಅಲ್ಲಿ ಮಾತ್ರವೇ ಓದಲು ಸಾಧ್ಯ.
Frequently Asked Questions about MyLang Android App
Q: I have an Android phone/tablet, how can I buy and read books on MyLang?
A: If you have an android phone/tablet, you can buy and read books on MyLang in two ways:
Way 1:
- Download Android App from Google Playstore link: https://play.google.com/store/apps/details?id=com.mylang.in and login using your mobile number.
- Choose ebooks/audiobooks of your choice and buy. Enter your MyLang login mobile number while placing the order and complete the purchase.
- Your books will appear under “Nanna PustakagaLu” section of the app.
Way 2:
- Download Android App from Google Playstore link: https://play.google.com/store/apps/details?id=com.mylang.in and login using your mobile number.
- Go to www.mylang.in (from India) or www.mylangbooks.com (from overseas) on your mobile or desktop browser and buy ebook/audiobook of your choice. Enter your MyLang login mobile number while placing the order and complete the purchase.
- Your books will appear under “Nanna PustakagaLu” section of the app.
Q: I live outside India and have a payment mechanism that supports paying in Indian rupees. Can I buy books from the India store: www.mylang.in ?
A: Yes. You can buy books from our India store even if you stay outside India as long as you have a payment mechanism that supports paying in Indian rupees.
Q: Do you support reading the same book on more than one device?
A: Yes. MyLang supports up to 3 devices for a single login account. You can login using the same mobile number on all three devices to enjoy reading the books that you purchased with your phone number.
Q: Can I download the book that purchased into a PDF file and read on my laptop/desktop?
A: No. You need to use MyLang app to read/listen to all the books that you purchased on MyLang. We don’t support reading on laptop/desktop as of now.