Click here to Download MyLang App

ಸಾಧನೆ (ಮಕ್ಕಳ ಕಥೆಗಳು),    ಗಣೇಶ ಪಿ. ನಾಡೋರ,  Saadhane,    Ganesh P. Nadora,

ಸಾಧನೆ (ಮಕ್ಕಳ ಕಥೆಗಳು) (ಇಬುಕ್)

e-book

ಪಬ್ಲಿಶರ್
ಗಣೇಶ ಪಿ. ನಾಡೋರ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications


‘ಗಣೇಶ ಪಿ. ನಾಡೋರ’ ಕನ್ನಡ ಸಾಂಸ್ಕೃತಿಕ ರಂಗದ ಯಾರಿಗೆ ಗೊತ್ತಿಲ್ಲ? ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗಣೇಶ ಮಕ್ಕಳ ಸಾಹಿತ್ಯಕ್ಕೆ ಮೀಸಲಾದ ಹತ್ತಾರು ಮುಖ್ಯ ಗ್ರಂಥಗಳ ಮೂಲಕ ಈಗಾಗಲೇ ನಾಡಿನ ಉದ್ದಗಲ ಪರಿಚಿತರಾಗಿರುವವರು. ಕತೆ, ಕವನ, ಕಾದಂಬರಿ, ಪ್ರಾಣಿ-ಪಕ್ಷಿಗಳ ಪರಿಚಯವೂ ಸೇರಿದಂತೆ ಮಕ್ಕಳಿಗೆ ಮೀಸಲಾದ ಹಲವು ಕೃತಿಗಳನ್ನು ಕನ್ನಡಕ್ಕೆ ಕೊಟ್ಟವರು.

‘ಸಾಧನೆ’ ಎಂಬ ಈ ಸಂಕಲನದಲ್ಲಿ ಒಟ್ಟಿಗೆ ಏಳು ಕತೆಗಳಿವೆ. ಇವುಗಳ ನಡಿಗೆ, ಆರಂಭದ ‘ಆಟ’ ಒಂದನ್ನುಳಿದು ಉಳಿದೆಲ್ಲವೂ- ನಾನಂದುಕೊಂಡಂತೆ ಹದಿಹರಯದ ಮಕ್ಕಳ ವಯೋಮಾನಕ್ಕೆ ಹೇಳಿಮಾಡಿಸಿದಂತಿದೆ. ಒಂದೆರಡು ಕಡೆ ಕತೆಯ ಭಾಗವೇ ಆಗಿರುವ ಪಾತ್ರದ ವಯಸ್ಸೂ (16 ಎಂದು) ದಾಖಲಾಗಿದೆ.

ಈ ಕಥಾ ಸಂಕಲನದ ಶೀರ್ಷಿಕೆ ಕತೆಯಾದ ‘ಸಾಧನೆ’ಯ ಬಗ್ಗೆ ಮೊದಲು ಪ್ರಸ್ತಾಪಿಸಬೇಕೆನಿಸಿದೆ. ಈ ಕತೆಯ ಆರಂಭ ಒಂದರ್ಥದಲ್ಲಿ ನಕಾರಾತ್ಮಕ (Negative) ನೆಲೆಯಿಂದಲೇ ಆರಂಭ ವಾಗುತ್ತದೆ. ನಮ್ಮಲ್ಲಿ ಇತ್ತೀಚಿನ ವರ್ಷಗಳಲ್ಲಂತೂ ಮತ್ತೆ ಮತ್ತೆ ನಮ್ಮ ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಶೈಕ್ಷಣಿಕ ಪ್ರಗತಿಯಲ್ಲಿ ಮುಂದಿರುವುದು ನಮಗೆಲ್ಲ ತಿಳಿದಿದೆ. ಆದರೆ ಗಣೇಶ ನಾಡೋರ ಅವರ ಈ ಕತೆಯಲ್ಲಿ ಪ್ರಜ್ಞಾಪೂರ್ವಕವಾಗಿ, ಆ ತರಗತಿಯಲ್ಲಿ ಐದು ಗಂಡುಮಕ್ಕಳ ನಂತರವೇ ಹೆಣ್ಣುಮಕ್ಕಳು ಸಾಧನೆ ತೋರಿಸುತ್ತಾರೆ. ಹಾಗೆ ತೋರಿಸುತ್ತಲೇ, ನಮ್ಮ ಹೆಣ್ಣುಮಕ್ಕಳ ಸಾಧನೆಯ ಹಿಂದಿನ ರಹಸ್ಯವನ್ನು ಬಿಚ್ಚಿಡುತ್ತಾರೆ.

ಶಕುಂತಲ ಎಂಬ ಹುಡುಗಿಯ ಒಳದುಗುಡದ ಪ್ರಸ್ತಾಪ ದೊಂದಿಗೆ ಈ ಕತೆ ಪ್ರಾರಂಭವಾಗುತ್ತದೆ. ಕ್ಲಾಸ್ ಮಕ್ಕಳಿಗೆ ಬಹು ಪ್ರಿಯರಾದ ಭಂಡಾರಿ ಸರ್ ಒಂದು ವಾರ ರಜೆಯ ಮೇಲೆ ಹೋಗಿರುವ ಹಿನ್ನೆಲೆಯಲ್ಲಿ ಏಳನೆಯ ತರಗತಿಯ ಕ್ಲಾಸ್ ಮಾಸ್ತರ ಇವಳಿರುವ ಆರನೆಯ ತರಗತಿಗೆ ಒಂದು ಹೊತ್ತು ಕಲಿಸಲು ನಿತ್ಯವೂ ಬರುತ್ತಾರೆಂಬ ಸುದ್ದಿಯ ಬೆನ್ನೇರಿ, ಅವರು ಬಂದೇ ಬಿಡುತ್ತಾರೆ.

ಕ್ಲಾಸಿಗೆ ಬಂದವರೇ, ‘ಬ್ಯೂಟಿಫುಲ್’ ಎಂಬ ಶಬ್ದದ ಇಂಗ್ಲಿಷ್ ಸ್ಪೆಲ್ಲಿಂಗ್ ಬೋರ್ಡಿನಲ್ಲಿ ಬರೆಯಲು ಒಬ್ಬೊಬ್ಬರನ್ನಾಗಿ ಕರೆಯುತ್ತಾರೆ. ಪ್ರಥಮ ಐದು ಸ್ಥಾನ ಕಾದುಕೊಂಡು ಬಂದ ಐದು ಹುಡುಗರು ಸೇರಿದಂತೆ ಎಲ್ಲರೂ ತಪ್ಪಾಗಿ ಬರೆಯುತ್ತಾರೆ. ಕೊನೆಯವಳು ಶಕುಂತಲ. ಅವಳು ಸತ್ಯವಲ್ಲದಿದ್ದರೂ ಸತ್ಯದ ಸಮೀಪ ಬರೆದು ತೋರಿಸುತ್ತಾಳೆ. ‘beautiful’ ಎಂದು ಬರೆಯುವ ಬದಲಿಗೆ ‘a’ ಇರಬೇಕಾದಲ್ಲಿ ‘e’ನ್ನು ‘e’ ಇರಬೇಕಾದಲ್ಲಿ ‘a’ನ್ನು ತಂದದ್ದು ಬಿಟ್ಟರೆ, ಉಳಿದಂತೆ ಸರಿಯಾಗಿಯೇ ಬರೆದಿದ್ದಳು. ಉಳಿದವರೆಲ್ಲ ಸಂಪೂರ್ಣ ದೂರ ಉಳಿದುಬಿಟ್ಟಿದ್ದರು. ಯಾವ ವಿನಾಯಕ ಮಾಸ್ತರರ ಬಗ್ಗೆ - ಇವರು ‘ಸ್ಟ್ರಿಕ್ಟ್’ ಎಂಬ ಆತಂಕ ಶಕುಂತಲಳಲ್ಲಿತ್ತೋ ಅವರೇ, ಈ ಹುಡುಗಿಯ ಪ್ರಾಮಾಣಿಕ ಪ್ರಯತ್ನಕ್ಕೆ ‘Very Good’ ಎಂದು ಹೇಳಿ, ಎಲ್ಲ ಮಕ್ಕಳು ಚಪ್ಪಾಳೆ ಹೊಡೆದು ಅವಳನ್ನು ಅಭಿನಂದಿಸುವಂತೆ ಮಾಡುತ್ತಾರೆ.

ಇಲ್ಲಿಂದ ಶಕುಂತಲಳ ಭವಿಷ್ಯವೇ ಬದಲಾಗಿ ಅವಳು ವಾರ್ಷಿಕ ಪರೀಕ್ಷೆಯಲ್ಲೂ ಸರ್ವ ಪ್ರಥಮಳಾಗುವಂತೆ ಮಾಡಿದ್ದು ಈ ‘Very Good’ ಎಂಬ ಈ ಪ್ರೋತ್ಸಾಹದ ಮಾತುಗಳೇ. ಹೆಣ್ಣಾಗಿ ಮನೆಯಲ್ಲಿ ನಿಭಾಯಿಸಬೇಕಾದ ಎಲ್ಲ ಕೆಲಸಗಳನ್ನು ಪೂರೈಸಿ, ಇತ್ತ ತನ್ನ ಅಭ್ಯಾಸದ ಬಗ್ಗೂ, ಶಾಲೆಯ ತರಗತಿಯ ಬಗ್ಗೂ ಗಂಭೀರ ಗಮನ ಹರಿಸಿ ತೋರಿದ ಅವಳ ಸಾಧನೆ ಅನ್ಯಾದೃಶವಾದು ದಾಗಿತ್ತು ಎಂಬ ಸಂದೇಶ ಈ ಕತೆ ಕಟ್ಟಿಕೊಡುತ್ತದೆ.

ಒಟ್ಟಾರೆಯಾಗಿ ಹೇಳುವುದಾದಲ್ಲಿ ಇದೊಂದು ಹೊಸ ಹೊಸ ಸಂದೇಶಗಳನ್ನು ಎದೆತುಂಬಿಕೊಂಡ ಕತೆಗಳ ಗುಚ್ಛ. ಸುಂದರ ನೇಯ್ಗೆ ಇಲ್ಲಿಯ ವಿಶೇಷ ಅಂಶ. ಗಣೇಶ ನಾಡೋರ ಅವರದು ಕತೆ ಹೇಳುವಲ್ಲಿ ಪಳಗಿದ ಕೈ ಮತ್ತು ಮನಸು. ಅವರ ನಾಳೆಗಳ ಬೆಳೆಗಳಿಗೆ ಇನ್ನಷ್ಟು ಪುಷ್ಟಿ ಇರಲಿ ಎಂದು ಹಾರೈಸುತ್ತೇನೆ.



- ವಿಷ್ಣು ನಾಯ್ಕ 

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)