Click here to Download MyLang App

ಮೊಬೈಲ್‌ ಮೈಥಿಲಿ (ಇಬುಕ್)

ಮೊಬೈಲ್‌ ಮೈಥಿಲಿ (ಇಬುಕ್)

e-book

ಪಬ್ಲಿಶರ್
ಸುರಭಿ ಕೊಡವೂರು
ಮಾಮೂಲು ಬೆಲೆ
Rs. 79.00
ಸೇಲ್ ಬೆಲೆ
Rs. 79.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅನುಗ್ರಹ ಪ್ರಕಾಶನ

Publisher: Anugraha Prakashana

 

ಲೇಖಕರ ಕುರಿತು

ಕೆ.ಸುರಭಿ ಕೊಡವೂರು ಉಡುಪಿಯ ಸೈಂಟ್ ಮೇರೀಸ್ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದು, ಭರತನಾಟ್ಯ, ಸಂಗೀತ, ನಾಟಕ, ಕೊಳಲುವಾದನ ಮತ್ತು ಸಂಸ್ಕೃತ ಪಾಠ ಕಲಿಯುತ್ತಿದ್ದು, ಖ್ಯಾತ ಭರತನಾಟ್ಯ ಕಲಾವಿದರಾದ ಸುಧೀರ್ ರಾವ್ ಮತ್ತು ಮಾನಸಿ ಸುಧೀರ್ ಅವರ ಹೆಮ್ಮೆಯ ಪುತ್ರಿ.

ಸುರಭಿಯ ಪ್ರಕಟಗೊಳ್ಳುತ್ತಿರುವ ಮೊದಲ ಬರಹಗಳ ಸಂಗ್ರಹ ಇದು. ಈ ಸಂಕಲನದಲ್ಲಿ ಕತೆ ಹೇಳುವ ಹುಡುಗಿಯ ಜತೆ ಹೇನುಗಳಿವೆ, ಮೀನುಗಳಿವೆ, ಹಕ್ಕಿಗಳಿವೆ, ನಾಯಿ, ಮೊಲ, ಜಿಂಕೆಗಳಿವೆ, ಡೈನೋಸಾರ್‌ಗಳಿವೆ, ಚಂದ್ರನಿದ್ದಾನೆ, ಗಾಂಧಿಯಿದ್ದಾನೆ, ಕಿಂಡಿಕೊರೆದ ಕನಕ ಇದ್ದಾನೆ, ಕೃಷ್ಣನಿದ್ದಾನೆ, ಪ್ರೀತಿಯ ರುಕ್ಮಿಣಿ ಇದ್ದಾಳೆ, ಬೀಚ್‌ ಇದೆ, ರೋಡಿದೆ, ರಾಕೆಟ್‌ ಇದೆ, ಗಾದೆಗಳಿವೆ, ಕೇಳಿದ ಘಟನೆಗಳಿವೆ, ಹೇಳಿದ ಕತೆಗಳಿವೆ, ಟ್ಯಾಗೋರ್, ಎಕ್ಕುಂಡಿಯವರ ಕವನಗಳಿವೆ.

-------

ಪುಟ್ಟ ಹುಡುಗಿ ಸುರಭಿ ಬರೆದ ಕತೆಗಳು ಇಲ್ಲಿವೆ. ಸ್ವಂತ ಕತೆ, ಕೇಳಿದ ಕತೆ, ಊಹಿಸಿದ ಕತೆ, ಕನಸಲ್ಲಿ ಕಂಡ ಕತೆ, ಅಜ್ಜ ಹೇಳಿದ ಕತೆ ಅಂತ ಸುಮಾರು ಇಪ್ಪತ್ತೈದು ಕತೆಗಳನ್ನು ಬರಹಕ್ಕಿಳಿಸಿ ಆಕೆ ಇಲ್ಲಿ ಈ ಗೊಂಚಲಿನಲ್ಲಿ ಇರಿಸಿದ್ದಾಳೆ. ಈ ಎಲ್ಲ ಕತೆಗಳಲ್ಲಿಯೂ
ಕಾಣುವುದು ಅವಳ ಲವಲವಿಕೆ, ಕತೆ ಹೇಳುವ ಉತ್ಸಾಹ ಮತ್ತು ಚಂದವಾದ ಭಾಷೆ. ಇವುಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಸಂತೋಷ ಕೊಟ್ಟ ಒಂದು ಕತೆಯನ್ನು ಹೆಸರಿಸಿರೆಂದರೆ ನನಗೆ ಹೊಳೆಯುವುದು ‘ಹೇನುಗಳಿಗೆ ನನ್ನ ತಲೆ ಯಾಕೆ ಇಷ್ಟ?’ ಎಂಬ ಕತೆ. ಇಲ್ಲೊಂದು ಎಳೆಯ ಮುಗ್ಧ ಮನಸ್ಸು ಎಷ್ಟು ಚೆನ್ನಾಗಿ ಎದ್ದು ಕಾಣುತ್ತಿದೆ! ಅಪರೂಪದ ಕಲ್ಪನೆ ಇಲ್ಲಿ ಅತ್ಯಂತ ಸಹಜವಾಗಿ ಅರಳಿದೆ. ಇಂಥದೊಂದು ಸುಂದರ ಕತೆಯನ್ನು ಬರೆಯಬಲ್ಲ ಈ ಪುಟಾಣಿಗೆ ಉತ್ತಮ ಭವಿಷ್ಯವಿದೆ. ಪುಟಾಣಿ ಸುರಭಿಗೆ ಅಭಿಮಾನ ಮತ್ತು
ಕೊಂಡಾಟದಿಂದ ಶುಭ ಹಾರೈಸುತಿದ್ದೇನೆ. 

-ವೈದೇಹಿ, ಕನ್ನಡದ ಹಿರಿಯ ಕತೆಗಾರ್ತಿ

 

ಪುಟಗಳು: 80

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

ಮೊಬೈಲ್‌ ಮೈಥಿಲಿ ಪುಸ್ತಕ ಬಿಡುಗಡೆಯ ವಿಡಿಯೋಗಳು: