
“ಕಾರಂತರ ನಾಟಕಗಳನ್ನು ಆಧರಿಸಿದ ಯಾವ ಮಹತ್ವದ ರಂಗಪ್ರಯೋಗವೂ ವರದಿಯಾಗಿಲ್ಲ" ಎಂದವರು, ನಾನು ಈ ಗ್ರಂಥದಲ್ಲಿ ಸಂದರ್ಭಾನುಸಾರ ಉದ್ಧರಿಸಿರುವ ವಿಮರ್ಶೆಗಳನ್ನು ಅವಶ್ಯವಾಗಿ ಓದಬೇಕು. ವರದಿಗಳು, ಪ್ರತಿಕ್ರಿಯೆಗಳು, ವಿಮರ್ಶೆಗಳು ಹಳೆಯ ಗ್ರಂಥಗಳ ಒಳಗೆ ತಣ್ಣನೆ ಕುಳಿತಿರುತ್ತವೆ. ಅವನ್ನು ಹುಡುಕುವ ತಾಪತ್ರಯವನ್ನು ಮೈಮೇಲೆ ಎಳೆದುಕೊಂಡರೆ ಮಾತ್ರ ಅವುಗಳು ನಮ್ಮ ಕಣ್ಣಿಗೆ ಬೀಳುತ್ತವೆ; ಗತಕಾಲದ ವೈಭವವನ್ನು, ದುಸ್ಥಿತಿಯನ್ನು ನಮ್ಮ ಕಣ್ಮುಂದೆ ನಿಲ್ಲಿಸುತ್ತವೆ. ಇಂತಹ ಕೆಲವಾರು ಪ್ರಕಟಿತ ಪ್ರತಿಕ್ರಿಯೆಗಳನ್ನು ಶಿವರಾಮ ಕಾರಂತರ ರಂಗಕಲಾಕೃತಿಗಳ ಬಗ್ಗೆ ನಾನು ಸಂಶೋಧಿಸಿದುದನ್ನು ಈ ಗ್ರಂಥದಲ್ಲಿ ಅಲ್ಲಲ್ಲಿ, ಸಂದರ್ಭಾನುಸಾರ ಬಳಸಿಕೊಂಡಿದ್ದೇನೆ. ಯಕ್ಷಗಾನ ನೃತ್ಯ ನಾಟಕಗಳ ಬಗ್ಗೆ ದೊರೆತ ಆಂಗ್ಲ ಭಾಷಾ ಪ್ರತಿಕ್ರಿಯೆಗಳನ್ನು ಅನುವಾದ ಮಾಡಿಸಿ ಹಾಕಿದ್ದೇನೆ. 'ನದೀಯಾತ್ರೆ' ಎಂಬ ವಾದ್ಯ ಪ್ರಬಂಧ ಮತ್ತು 'ಸಾವಿತ್ರಿ ಸತ್ಯವಾನ', ‘ಕೀಚಕ ಸೈರಂಧ್ರಿ' ಎಂಬ ನೃತ್ಯ ನಾಟಕಗಳನ್ನು ಸ್ವರಪ್ರಸ್ತಾರದೊಂದಿಗೆ (ಹಸ್ತಪ್ರತಿ ರೂಪದಲ್ಲಿದ್ದು, ಪ್ರಕಟಗೊಂಡಿರದವುಗಳನ್ನು) ಮಾದರಿಗಾಗಿ ಪ್ರಕಟಿಸುತ್ತಿದ್ದೇನೆ.
ಇತಿ,
ಬಿ. ಮಾಲಿನಿ ಮಲ್ಯ.
ಪುಟಗಳು: 275
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !