Click here to Download MyLang App

ಹಾಂಟೆಡ್‌ ಹೊಸಮನೆ (ಆಡಿಯೋ ಬುಕ್),  ಹಾಂಟೆಡ್‌ ಹೊಸಮನೆ,  ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ,    Ramesh Shettigar Manjeshwar,  Haunted Hosamane(Audio Book),  Haunted Hosamane,

ಹಾಂಟೆಡ್‌ ಹೊಸಮನೆ (ಆಡಿಯೋ ಬುಕ್)

audio book

ಪಬ್ಲಿಶರ್
ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಓದಿದವರು: ಧ್ವನಿಧಾರೆ ಮಿಡಿಯಾ ತಂಡ

ಆಡಿಯೋ ಪುಸ್ತಕದ ಅವಧಿ : 6 ಗಂಟೆ 59 ನಿಮಿಷ

 

ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಹಾಂಟೆಡ್ ಹೊಸಮನೆ ಕಾದಂಬರಿ ಕೈಸೇರಿದ ಎರಡೇ ದಿನಕ್ಕೆ ಓದಿ ಮುಗಿಸಿದ್ದೇನೆ. ಪತ್ತೇದಾರಿ ಚೌಕಟ್ಟಿನ ಒಳಗೆ ಹಾರರ್ ಸ್ಪರ್ಶವನ್ನು ಕೊಟ್ಟು ಅತ್ಯುತ್ತಮವಾಗಿ ಕಥಾಹಂದರವನ್ನು ಕಟ್ಟಿಕೊಟ್ಟಿದ್ದಾರೆ. ರೋಚಕವಾದ ಈ  ಕಥೆ ಓದಿಸಿಕೊಂಡು ಹೋಗುವ ಗುಣ ಹೊಂದಿದೆ. ಹಾರರ್ ಮತ್ತು ಪತ್ತೇದಾರಿ ಎಂಬ ಎರಡು ಆಸಕ್ತಿ ಕೆರಳಿಸುವ ಪ್ರಕಾರಗಳ ಬ್ಲೆಂಡ್ ಇಲ್ಲಿ ಮುದ ನೀಡುತ್ತದೆ. ಗೃಹ ಪ್ರವೇಶಕ್ಕೆ ಸಿದ್ಧವಾದ ಹೊಸ ಮನೆಯಲ್ಲಿ ನಡೆಯುವ ಜೋಡಿ  ಕೊಲೆಗಳ ಸುತ್ತ ಹೆಣೆದ ಕಥೆ ಕ್ಷಣ ಕ್ಷಣಕ್ಕೂ ಆಸಕ್ತಿ ಬಡಿದೆಬ್ಬಿಸುತ್ತ ಮುಂದೆ ಸಾಗುತ್ತದೆ. ಕಥಾ ವಸ್ತು  ಪತ್ತೆ ದಾರಿಯಾಗಿದ್ದರೂ ಹಾರರ್ ಎಳೆ  ಮೈ ಮನ ಬೆಚ್ಚಗಾಗಿಸುತ್ತ ಕೊನೆವರೆಗೂ  ಓದುಗರನ್ನು ಹಿಡಿದಿಡುತ್ತದೆ.  ರಮೇಶ್ ಶೆಟ್ಟಿಗಾರರ ಕಥಾಲೋಕವು  ತಾವು ಹುಟ್ಟಿದ ಮಣ್ಣಿನ ಸುತ್ತ ಮುತ್ತಲೇ ಇರುತ್ತದೆ. ಈ ಮೂಲಕ ಕಥೆಗೆ ತಾವು  ತೀರಾ ಹತ್ತಿರದವರಂತೆ ನಿರೂಪಿಸುತ್ತ ಹೋಗುತ್ತಾರೆ. ಇದು ಓದುಗನ  ಓದಿನ ಅನುಭವವನ್ನು ನೈಜವಾಗಿಸುತ್ತದೆ.  ಬರಹದ ಭಾಷೆ, ಶೈಲಿ, ಪಾತ್ರ ನಿರ್ಮಿತಿ, ಅವುಗಳ ಸ್ವಭಾವ ಎಲ್ಲವೂ ಇವರ ಕಾಲಾಟದೊಳಗಿನ ಸ್ಥಳಗಳಿಂದಲೇ ಹುಟ್ಟಿದವು. ಇದು ಉಂಟು ಮಾಡುವ ಸಹಜತೆ ಈ ಕಥೆಗಾರನ ಸಾಮರ್ಥ್ಯಗಳಲ್ಲೊಂದು. ಇವರು  ಕಥಾವಸ್ತುವನ್ನು ವರ್ತಮಾನದ ಕಾಲ ರೇಖೆಯೊಳಗೆ  ಹೇಳಲು ಪ್ರಯತ್ನಿಸುವ  ಗುಣ ನನಗೆ ಮೆಚ್ಚಿಗೆಯಾಯಿತು. ಇದು ಅಷ್ಟು ಸುಲಭವೂ ಅಲ್ಲ. ಕೊರೋನಾ ಕಾಲಘಟ್ಟ, ಲಾಕ್ ಡೌನ್ ಎಲ್ಲವೂ ಕಥೆಯಲ್ಲಿ ಪ್ರಭಾವ ಬೀರುತ್ತವೆ. ಕಥಾವಸ್ತು ಪತ್ತೇದಾರಿಯಾಗಿದ್ದರೂ ಕೆಲವು ಪ್ರಚಲಿತ ವಿದ್ಯಮಾನಗಳಲ್ಲಿರುವ ದೋಷಗಳನ್ನು ಕಥೆಗಾರ ವಿಡಂಬಿಸುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಅದು ಒಬ್ಬ ಬರಹಗಾರನ ಕರ್ತವ್ಯ ಕೂಡ.   ಒಟ್ಟಿನಲ್ಲಿ ಈ ಕೃತಿಯು ಲೇಖಕರ ಬಗ್ಗೆ ಆಸಕ್ತಿ ಮೂಡಿಸಿ ಇವರ  ಇತರೆ ಬರಹಗಳನ್ನು ಓದುವತ್ತ ಓದುಗನನ್ನು ಪ್ರೇರೇಪಿಸುವುದರಲ್ಲಿ  ಸಂಶಯವಿಲ್ಲ. 

 

ಹಾಂಟೆಡ್ ಹೊಸಮನೆ ಪುಸ್ತಕ ವಿಮರ್ಶೆ
- ಗಣೇಶ್ ಪ್ರಸಾದ್

ಕೃಪೆ - krutisamaya.blogspot.com 

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

Customer Reviews

Based on 6 reviews
83%
(5)
17%
(1)
0%
(0)
0%
(0)
0%
(0)
D
Divya Shivanna
ಇತ್ತೀಚಿನ ದಿನಗಳಲ್ಲಿ ಬಂದಿರುವ ಒಂದು ಒಳ್ಳೆಯ ಥ್ರಿಲ್ಲರ್ ಪುಸ್ತಕ

ಪುಸ್ತಕದ ಕಥೆ ಮತ್ತು Narattion ಎರಡು interesting ಆಗಿದೆ.

N
Naveen Shandilya
ಇತ್ತೀಚಿನ ದಿನಗಳಲ್ಲಿ ನಾನು ಓದಿದ (ಕೇಳಿದ) ಕನ್ನಡ ಹಾರರ್ ಕಥೆಗಳಲ್ಲಿ ಅತ್ಯುತ್ತಮವಾದದ್ದು

ನಿಜವಾಗಿಯೂ.. ಉತ್ಪ್ರೇಕ್ಷೆಯ ಮಾತಲ್ಲ. ನಾನು ಹಾರರ್ ಸಾಹಿತ್ಯವನ್ನು ತುಂಬಾ ಶ್ರದ್ದೆಯಿಂದ ಓದಿದವನು, ನೋಡಿದವನು. ಯಂಡಮೂರಿಯವರಿಂದ ಹಿಡಿದು ರವಿ ಬೆಳೆಗೆರೆ ಯಿಂದ ಹಿಡಿದು ಸ್ಟೀವೆನ್ ಕಿಂಗ್ ನ ತನಕ ನಾನು ಈ ಸಾಹಿತ್ಯ ಪ್ರಾಕಾರದ ಬಹು ದೊಡ್ಡ ಅಭಿಮಾನಿ. ಈ ಪ್ರಾಕಾರದಲ್ಲಿ ಹೊಸತನ್ನು ಕೊಡುವುದು ಬಹಳ ಕಷ್ಟ. ರೋಚಕತೆ ಕೊಡುವುದು ಇನ್ನೂ ಕಷ್ಟ. ಬೊಂಬೆಯ ಮೇಲೆ, ಮನೆಯ ಮೇಲೆ, ಶವಗಳ ಮೇಲೆ, ಮಗುವಿನ ಮೇಲೆ, ಕಾರಿನ ಮೇಲೆ, ಪ್ಲೇನಿನ ಮೇಲೆ ಹೀಗೇ ಕಂಡ ಕಂಡ ವಸ್ತುಗಳ ಮೇಲೆ ಪ್ರೇತವು ಆವಾಹನೆಯಾಗಿ ಕಾಡಿರುವುದನ್ನು ಓದಿಯಾದ ಮೇಲೂ ಇನ್ನು ಹೆಚ್ಚು ಹೆದರಿಸಲು ಏನಿದೆ ಎಂಬತಾಗಿದೆ. ಭಾರತೀಯ ಹಾರರ್ ಸಿನೆಮಾಗಳಂತೂ ಕಾಮಿಡಿ ಸಿನೆಮಾಗಳಂತಾಗಿ ಬಿಟ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ನಾನು ಕೈಗೆತ್ತಿಕೊಂಡ (ಕಿವಿಗಾನಿಸಿ ಕೊಂಡ ಪುಸ್ತಕ) ಎಂದರೆ "ಹಾಂಟೆಡ್ ಹೊಸ್ಮನೆ". ನಿಜವಾಗಿ ಒಂದು ಚೇತೋಹಾರಿ ಅನುಭವ. ಸಾಂದರ್ಭಿಕ ಚಿತ್ರಣಗಳು ಅತ್ಯಂತ ನೈಜವಾಗಿ ಮೂಡಿ ಬಂದಿದ್ದು ಹಲವಾರು ಬಾರಿ ಮೈಯ ರೋಮ ಎದ್ದು ನಿಂತವು. ಹಾರರ್ ಜೊತೆಗೆ ಕೊಲೆಯ ತೆಹಕಿಕಾತ್ ಕೂಡ ಹುಬ್ಬೇರಿಸುವಂತಿದೆ. ಕಡೆಯ ತನಕ ಕೊಲೆ ಮಾಡಿದವರು ಅವರ, ಇವರ, ಇನ್ನ್ಯಾರೋ ಮೂರನೆಯವನ ಹೀಗೆ ಮನಸ್ಸು ಕಂಡ ಪಾತ್ರಗಳನ್ನು ಶಂಕಿಸುತ್ತಾ ಹೋಗುತ್ತದೆ. ಒಮ್ಮೆ, ಇದು ನಿಜವಾಗಿಯೂ ಕೊಲೆಯೇ ಆಗೇ ಇಲ್ಲ ಎಂಬಂತೆಯೂ ಭಾಸವಾಗುತ್ತದೆ. ಅದ್ಭುತವಾದ ಕಲ್ಪನೆ, ನಿರೂಪಣೆ ಶ್ರೀ ರಮೇಶ್ ಶೆಟ್ಟಿಗಾರ್ ರವರದ್ದು. ಮದನಿಕೆ, ಅಪೂರ್ಣ ಸತ್ಯ ದಂತಹ ಪುಸ್ತಕಗಳನ್ನು ಬರೆದಿರುವ ಇವರು ಈ ಜಾನರ್ ಗೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಆಡಿಯೋ ಬಗ್ಗೆ ಹೇಳೋಣ... ಆಡಿಯೋ ಬುಕ್ ಕೇಳಿದೆ... ಕಂಠ ದಾನ ಮಾಡಿರುವ ಮುಕೇಶ್ ಅವರದ್ದು ಅಪರೂಪದ ಪ್ರತಿಭೆ ಒಬ್ಬರೇ ಅಷ್ಟೂ ಪಾತ್ರಗಳನ್ನು ಅತ್ಯಂತ ಶ್ರದ್ಧೆಯಿಂದ ನಿರರ್ಗಳವಾಗಿ ನಿಭಾಯಿಸಿದ್ದಾರೆ. ಅತ್ಯುತ್ತಮ ಧ್ವನಿ. ಇನ್ನು ಸೌಂಡ್ ಎಫೆಕ್ಟ್ಸ್ ಅಂತೂ ಅಬ್ಬಬಾ ರೋಮಾಂಚನ ಉಂಟು ಮಾಡುತ್ತೆ🙏🙏 ರಾತ್ರಿ ಒಂದು ಹೊತ್ನಲ್ಲಿ ಟಾಯ್ಲೆಟ್ ಹೋಗೋದಕ್ಕೂ ಹೆದರಿದ್ದು ಸುಳಲ್ಲ 😳 ಹಾ ಕಥೆ ಕೇಳಿದ ಮೇಲೆ ನಮ್ಮನೆ ಸುತ್ತ ಯಾವ್ದೋ ಕರಿ ಬೆಕ್ಕು ಓಡಾಡ್ತಾ ಇರೋದು ಕಾಕಾತಾಳೀಯವಲ್ಲ ಅನ್ಸುತ್ತೆ 🤒 ಎಲ್ಲರೂ ಕೇಳಲೇ ಬೇಕಾದ ಆಡಿಯೋ ಬುಕ್.. ಹಾಂಟೆಡ್ ಹೊಸ್ಮನೆ 👍👍

D
D R N Vasishta
ಹಾರಾರ್ ಅಂದರೆ ಇದಪ್ಪ

ಹಾರಾರ್ ಅಂದರೆ ಇದಪ್ಪ
ಚಂದೂ .... ಚೇಟ ......ಸೂಪರ್

P
Prashanth M
ಥ್ರಿಲ್ಲರ್ ಅಂದ್ರೆ ಹೀಗಿರಬೇಕು

ಆಡಿಯೋಬುಕ್ ಕೇಳುವಷ್ಟೂ ಹೊತ್ತು ಸಖತ್ ಭಯ, ಕುತೂಹಲ ಕಾಡುತ್ತದೆ. ನಿಜವಾಗಿ ಹೀಗೆಲ್ಲಾ ಆಗುವುದೋ ಎಂದು ಒಮ್ಮೊಮ್ಮೆ ಗಾಬರಿಯೂ ಆಗುತ್ತದೆ. ಥ್ರಿಲ್ಲರ್ ಸಿನಿಮಾ ನೋಡಿದ ಅನುಭವ ಕೊಟ್ಟ ಈ ಆಡಿಯೋಬುಕ್ ಎಲ್ಲರೂ ಕೇಳಬೇಕಾದ ರೋಮಾಂಚಕಾರಿ ಪುಸ್ತಕ.

S
Sudhindra KN
Good narration

Nice audio and narration.