Click here to Download MyLang App

ಸಂಯುಕ್ತಾ ಪುಲಿಗಲ್,  ಆಪರೇಷನ್ ಬೆಳಕಿನ ಕಿಡಿಗಳು (ಆಡಿಯೋ ಬುಕ್),  Samyukta Puligal,  Operation Belakina Kidigalu (Audio Book),

ಆಪರೇಷನ್ ಬೆಳಕಿನ ಕಿಡಿಗಳು (ಆಡಿಯೋ ಬುಕ್)

audio book

ಪಬ್ಲಿಶರ್
ಸಂಯುಕ್ತಾ ಪುಲಿಗಲ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE


 

ಕಳೆದ ದಶಕದಲ್ಲಿ ನಮ್ಮ ಯುವಕ, ಯುವತಿಯರ ಬದುಕಿನ ಶೈಲಿ ತುಂಬ ಬದಲಾಗಿದೆ. ಎಷ್ಟೆಂದರೆ ಮಧ್ಯ ವಯಸ್ಕರಿಗೂ ಅರ್ಥವೇ ಆಗದಷ್ಟು! ಅದರಲ್ಲೂ ನಗರದ ಕಾಲೇಜು ವಿದ್ಯಾರ್ಥಿಗಳ ಬದುಕು, ಅವರ ಆದ್ಯತೆಗಳು, ಅವರ ತವಕ/ತಲ್ಲಣಗಳು ಮತ್ತು ಅವರ ಸಂಭ್ರಮಗಳೂ ತೀರ ಹೊಸರೂಪಗಳನ್ನು ಪಡೆದಿವೆ. ಈ ಬದಲಾವಣೆಗಳ ಬಗ್ಗೆ ಮೂಗು ಮುರಿಯುವುದು ವಯಸ್ಕರ ಸಾಮಾನ್ಯ ಪ್ರತಿಕ್ರಿಯೆಯಾದರೂ ಅದು ಅಷ್ಟು ಸಮರ್ಪಕವಾದದ್ದೆಂದು ನನಗನ್ನಿಸುವುದಿಲ್ಲ. ಉದಾಹರಣೆಗೆ, ಈಗಿನ ಯುವಕರಲ್ಲಿ ಪರಿಸರದ ಬಗೆಗಿನ ಕಾಳಜಿ, ಸಾಮಾಜಿಕ ಸಮಾನತೆಯ ಬಗೆಗಿನ ನಂಬಿಕೆ, ಲಿಂಗ ಸಮಾನತೆಯ ಬಗ್ಗೆ ಸಂವೇದನೆ ಇವೆಲ್ಲವೂ ಹಿಂದಿನ ಪೀಳಿಗೆಗಿಂತ ತುಂಬ ಹೆಚ್ಚಿದೆ ಎಂದು ಗುರುತಿಸಬೇಕು. ಹಾಗಾಗಿ ಅವರ ಹೊಸ ಕಾಲದ ಮೌಲ್ಯಗಳ ಬಗ್ಗೆ ಅಪನಂಬಿಕೆಯನ್ನು ಬಿಟ್ಟು ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯ ಖಂಡಿತ ಇದೆ. 

ಇಂಥ ಇಪ್ಪತ್ತೊಂದನೇ ಶತಮಾನದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿಕೊಂಡು ಒಂದು ಒಳ್ಳೆಯ ಥ್ರಿಲ್ಲರ್ ಕಾದಂಬರಿಯನ್ನು ಹೊರತರಬೇಕೆನ್ನಿಸಿದಾಗ ನಾವು ಸಂಪರ್ಕಿಸಿದ್ದು ಕನ್ನಡದ ಹೊಸಗಾಲದ ಬರಹಗಾರ್ತಿಯಾದ ಸಂಯುಕ್ತಾ ಪುಲಿಗಲ್ ಅವರನ್ನು. ಅವರು ಈಗಾಗಲೇ ಒಬ್ಬ ಸಶಕ್ತ ಅನುವಾದಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಅನುವಾದಗಳು ಸಪ್ಪೆಯಾದ ಭಾಷಾಂತರವಾಗದೆ ತಾವೇ ತಾವಾಗಿ ಸೃಷ್ಟಿಶೀಲ ಕೃತಿಗಳಾಗಿವೆ. ಓದುಗರ ಮನಸ್ಸನ್ನು ಮುಟ್ಟಿವೆ, ಗೆದ್ದಿವೆ. ನಾವು ಅವರೊಡನೆ ಹೊಸ ಪುಸ್ತಕದ ಬಗ್ಗೆ ಮಾತು ತೆಗೆದಾಗ, ಆಶ್ಚರ್ಯವೆನಿಸುವಂತೆ ಅವರೂ ಕೂಡ ಇಂಥ ಯಂಗ್ ರೀಡರ್ಸ್ ಗಾಗಿ ಇಂಗ್ಲಿಷಿನ ಎನಿಡ್ ಬ್ಲೈಟನ್ ಅವರ ಫೇಮಸ್ ಫೈವ್ ರೀತಿಯ ಪುಸ್ತಕಗಳನ್ನು ಕನ್ನಡದಲ್ಲಿ ನಮ್ಮದೇ ಸೊಗಡಿನಲ್ಲಿ ತರಬೇಕು ಎಂದುಕೊಂಡಿದ್ದಾಗಿ ಹೇಳಿದರು. ಅಲ್ಲಿಗೆ ನಮ್ಮ ಗುರಿಗಳು ಒಂದುಗೂಡಿದವು. ಹೀಗೆ ಹುಟ್ಟಿದ ಕಾದಂಬರಿಯೇ 'ಆಪರೇಶನ್ ಬೆಳಕಿನ ಕಿಡಿಗಳು'. 

'ಬೆಳಕಿನ ಕಿಡಿಗಳು' ಒಂದು ಹೊಸ ರೀತಿಯ ಕತೆಯನ್ನೊಳಗೊಂಡಿದೆ. ಮತ್ತು ಪಾತ್ರಗಳೆಲ್ಲವೂ ಹೊಚ್ಚ ಹೊಸ ಶೈಲಿ, ಕ್ಯಾರೆಕ್ಟರುಗಳನ್ನು ಮೆರೆಯುತ್ತ ಹಚ್ಚ ಹಸಿರಾಗಿ ಕಂಗೊಳಿಸಿವೆ. ಕಾಲೇಜು ವಿದ್ಯಾರ್ಥಿಗಳ ಸಂಭಾಷಣೆಗಳೆಲ್ಲ ತೀರ ಅಪ್ಯಾಯಮಾನವಾಗಿ ಹೊಸಗಾಲದ ಛಾಪನ್ನು ಹೊಂದಿವೆ. ಅವರಿಗೆ ಎದುರಾದ ಸಮಸ್ಯೆ ಎಂತಹುದು? ಅದು ಕೂಡ ತೀರ ಆಧುನಿಕ ಆಯಾಮಗಳನ್ನು ಒಳಗೊಂಡದ್ದು! ಅದನ್ನು ಅವರು ಎದುರಿಸುವ ಬಗೆ, ಮೆರೆಯುವ ಸಾಹಸ, ಅದಲ್ಲೆದರ ಜೊತೆ ಎಂದೂ ಕಳೆದುಕೊಳ್ಳದ ಸಹಾನುಭೂತಿ ಎಲ್ಲವನ್ನೂ ನೀವು ಅಸ್ವಾದಿಸಿ ನಲಿಯಬೇಕು! ನಲಿಯುತ್ತೀರಿ ಎನ್ನುವ ನಂಬಿಕೆ ನಮಗಿದೆ. ನೀವು ಕೂಡ ಕಾಲೇಜು ವಿದ್ಯಾರ್ಥಿಗಳಾಗಿದ್ದರಂತೂ ಇದರಲ್ಲಿ ನಿಮ್ಮನ್ನೇ ನೀವು ಕಂಡುಕೊಳ್ಳುತ್ತೀರಿ.

ಕೇಳಿ, ಆನಂದಿಸಿ! ಅಷ್ಟೇ ಅಲ್ಲ ಯುವಕ,ಯುವತಿಯರನ್ನು ಅರ್ಥ ಮಾಡಿಕೊಳ್ಳಿ!

 

-ಪವಮಾನ್ ಅಥಣಿ
ಮೈಲ್ಯಾಂಗ್ ಬುಕ್ಸ್

 

 ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 4 reviews
25%
(1)
25%
(1)
0%
(0)
0%
(0)
50%
(2)
N
Nishant Bhat
Boring

I felt boring and nothing intresting to listen.

P
Puneeth s
Too slow

Felt bored because of slow narration

K
K.H.
ಮತ್ತೊಮ್ಮೆ ಕಾಲೇಜು ದಿನಗಳು ನವಿರಾಗಿ ನೆನಪಿಸಿತು...

ಸಂಯುಕ್ತಾ ಪುಲಿಗಲ್ ಅವರ "ಆಪರೇಶನ್ ಬೆಳಕಿನ ಕಿಡಿಗಳು" ಆಡಿಯೋ ಪುಸ್ತಕ ರೂಪದಲ್ಲಿ ಕೇಳಿದೆ. ನಾನು ಕೇಳಿದ ಮೊದಲ ಕನ್ನಡ ಆಡಿಯೋ ಪುಸ್ತಕ ಇದು. ಈ ಹಿಂದೆ ಪುಲಿಗಲ್ ಮೇಡಂ ಅವರ ಅನುವಾದಿತ ಪುಸ್ತಕ ಪರ್ವತದಲ್ಲಿ ಪವಾಡ ಓದಿದ್ದೆ. ಆಪರೇಶನ್ ಬೆಳಕಿನ ಕಿಡಿಗಳು ಕಲಾ ವಿಭಾಗದಲ್ಲಿ ಓದಿದ ನನ್ನಂತಹ ಹಲವರಿಗೆ ಮತ್ತೆ ಕಾಲೇಜು ದಿನಗಳಲ್ಲಿ ಒಯ್ದು ನಿಲ್ಲಿಸುವ ಪುಸ್ತಕ. ಧ್ವನಿ ಏರಿಳಿತ, ಸಂಯೋಜನೆ ಅದ್ಭುತವಾಗಿ ಮೂಡಿ ಬಂದಿದೆ. ಇದೊಂದು ವಿಶಿಷ್ಟ ಅನುಭವ ನೀಡಿತು. ಮಾಧುರಿಯ ಆದರ್ಶಗಳು ಮತ್ತು ಧೈರ್ಯ, ಆದಿತ್ಯ, ಕಬೀರನ ಸಂಕಷ್ಟದ ಬದುಕು ಅವನ ಪದ್ಯ, ವಿವೇಕನ ತರಲೆಗಳು, ಹಲವು ಚಿಗುರು ಮನಸುಗಳ ಬಿಸಿ ಉಸಿರು ಹೀಗೆ ಹಲವು ಸಂಗತಿಗಳು ಕಾಡುತ್ತವೆ. ಕೊನೆಗೆ ಕರಾಳ ಜಗತ್ತಿನ ಬಗ್ಗೆ ತಂತ್ರಜ್ಞಾನದ ಹುಡುಕಾಟ ಕೂತೂಹಲ ಮೂಡಿಸುತ್ತದೆ. ಸಮಾಜದ ಹಲವು ಕಂಟಕಗಳು ಹಿಡನ್ ಫೈಲ್ ಆಗಿ ಕೂತು ಒಳ್ಳೆಯದು ಕೆಟ್ಟದ್ದು ಯಾವುದು ಎಂಬುವುದು ಗುರುತಿಸುವುದೇ ಯುವಕರಿಗೆ ದೊಡ್ಡ ತಲೆನೋವಾಗುತ್ತದೆ.
ಮತ್ತೊಮ್ಮೆ ಕಾಲೇಜಿನ ಬದುಕು ಬಹಳ ಸಹಜವಾಗಿ, ಸರಳವಾಗಿ, ಸೂಕ್ಷ್ಮ ಎಳೆಗಳಿಂದ ಹಿಡಿದು ದಟ್ಟ ಅನುಭವ ಮಾಡಿಸುವ ಕಾದಂಬರಿ ಇಷ್ಟವಾಯ್ತು. ಮಾಧುರಿ ಸದಾ ಕಾಡುವ ಪಾತ್ರ. ಬೆಳಕಿನ ಕಿಡಿಗಳು ಪುಸ್ತಕದ ಗೆಳೆಯರ ಬಳಗ ಪುಸ್ತಕ ಮುಗಿದ ಮೇಲೂ ನಮ್ಮ ಪ್ರಮಾಣದಲ್ಲಿ ಜೊತೆಗಿದಂತೆ ಭಾಸವಾಗುತ್ತದೆ. ಅವರ ಧೈರ್ಯ, ಪದ್ಯ ಓದು, ಹ್ಯಾಕಿಂಗ್, ಸಮಾಜ ಸೇವೆ, ಸಮಾನತೆ, ವಿಕ್ರಮರ ಸಪೋರ್ಟ್, ಮಾಧುರಿಯ ತಂದೆಯವರ ಸಮಯ ಪ್ರಜ್ಞೆ ಕಾಡುತ್ತವೆ.
ಮತ್ತೊಮ್ಮೆ ಕಾಲೇಜಿನ ಬದುಕು ಬಹಳ ಸಹಜವಾಗಿ, ಸರಳವಾಗಿ, ಸೂಕ್ಷ್ಮ ಎಳೆಗಳಿಂದ ಹಿಡಿದು ದಟ್ಟ ಅನುಭವ ಮಾಡಿಸುವ ಕಾದಂಬರಿ ಇಷ್ಟವಾಯ್ತು. ಮಾಧುರಿ ಸದಾ ಕಾಡುವ ಪಾತ್ರ. ಬೆಳಕಿನ ಕಿಡಿಗಳು ಪುಸ್ತಕದ ಗೆಳೆಯರ ಬಳಗ ಪುಸ್ತಕ ಮುಗಿದ ಮೇಲೂ ನಮ್ಮ ಪ್ರಯಾಣದಲ್ಲಿ ಜೊತೆಗಿದಂತೆ ಭಾಸವಾಗುತ್ತದೆ.
ಹಲವು ಹೊಸ ಹೊಸ ತಾಂತ್ರಿಕ ಶಬ್ದಗಳು ಪರಿಚಯವಾದವು, ತಂತ್ರಜ್ಞಾನದ ಮೂಲಕ ಖದೀಮರ ಹುಡುಕಾಟ ಕೂತೂಹಲ ಮೂಡಿಸುತ್ತದೆ. ಧ್ವನಿಯ ಮೂಲಕ ಪುಸ್ತಕದ ಸಾಲುಗಳಿಗೆ ಜೀವ ತುಂಬಿದ ಎಲ್ಲರಿಗೂ ಧನ್ಯವಾದಗಳು. ಜೊತೆಗೆ Mylang ತಂಡಕ್ಕೂ, ಸಂಯುಕ್ತಾ ಪುಲಿಗಲ್ ಮೇಡಂ ಅವರಿಗೂ ಅಭಿನಂದನೆಗಳು.

ಕಪಿಲ ಪಿ ಹುಮನಾಬಾದೆ.

S
S.K.
Good story and narration!!!

Good story and narration!!!