ಕಥಾ ನಾಯಕನಿಗೆ ತನ್ನ ಪತ್ನಿ ಬೆಳಗಿನ ಜಾವ ಒಂದು ಗಂಟೆ ಮಾಯವಾಗಿ ಮತ್ತೆ ಏನೂ ತಿಳಿಯದಂತೆ ಬಂದು ಮಲಗುವುದು ಹಲವಾರು ಅನುಮಾನಕ್ಕೆ ಎಡೆ ಮಾಡುತ್ತದೆ. ಅದನ್ನು ಪರೀಕ್ಷಿಸಲು ಹೋದವನಿಗೆ ಎದೆ ಒಡೆಯುವಂತೆ ವಿದ್ಯಮಾನಗಳು ಕಾಣಿಸುತ್ತವೆ. ಹಂತಹಂತವಾಗಿ ಅನುಮಾನಗಳನ್ನು ಪರಿಹರಿಸಿಕ್ಕೊಳ್ಳುತ್ತಾನೆ. ತನ್ನ ನಿಜವಾದ ಪತ್ನಿಯ ಕ್ಲೋನ್ ಜೊತೆ ತಾನಿರುವುದು ಅರ್ಥವಾಗುತ್ತದೆ. ಆತನ ಪತ್ನಿ ಒಂದು ಜೈವಿಕ ಅನ್ವೇಶಣೆಯ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಕೊನೆ ತನ್ನ ಪತ್ನಿಯನ್ನು ಹುಡುಕಿ ಅವಳನ್ನು ರಕ್ಷಿಸುವಲ್ಲಿ ಸಫಲನಾಗುತ್ತಾನೆ.