Click here to Download MyLang App

ಬಿಂಬ - ಅರಿಬೊಮ್ಮನ ಸ್ವಗತ

ಬಿಂಬ - ಅರಿಬೊಮ್ಮನ ಸ್ವಗತ

e-book

ಪಬ್ಲಿಶರ್
ಡಾ. ಎಸ್.ಎನ್. ಶ್ರೀಧರ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 37.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಈ ಕೃತಿಯು ಆಧುನಿಕ ವಿಷಯಗಳ ಕುರಿತು ಬರೆದಿರುವ ಚೌಪದಿಯ ಸರಳ ವಚನಗಳು. ಬಾಲ್ಯದಿಂದಲೂ ವಚನ ಸಾಹಿತ್ಯಗಳನ್ನು ಓದುತ್ತಾ ಆನಂದಿಸುತ್ತಾ ಬಂದಿದ್ದೇನೆ. ಶಿವಶರಣರ ಮತ್ತು ಸರ್ವಜ್ಞನ ವಚನಗಳಲ್ಲಿ ತುಂಬಿರುವ ನೀತಿ, ಬದುಕುವ ರೀತಿ, ಸಾಮಾಜಿಕ ಕಳಕಳಿ ಓದಿ ಪ್ರಭಾವಿತನಾಗಿದ್ದೇನೆ. ಈ ವಚನಗಳಲ್ಲಿ ಕಠಿಣ ಪದಗಳಿಲ್ಲದ, ಛಂದಸ್ಸಿನ ಹಂಗಿಲ್ಲದ ಸರಳ, ನೇರ ನುಡಿಗಳಿಂದ ತುಂಬಿದ ನೀತಿಮಾತುಗಳು ಆಪ್ತವಾಗುತ್ತ ಹೋಗುತ್ತವೆ. ನಾವು ಕಾಣದ ಮತ್ತು ಕಾಣುವ ವಿಷಯಗಳನ್ನೇ ಬಳಸಿಕೊಂಡು, ಉಪಮೆಗಳ ಮೂಲಕ, ಕೆಲವೊಮ್ಮೆ ನೇರವಾಗಿ ಮನಸ್ಸಿಗೆ ತಟ್ಟುವಂತೆ ವಿಷದಪಡಿಸುವ ಈ ವಚನಗಳಿಗೆ ಮಾರುಹೋಗದವರಿಲ್ಲ. 'ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ' ಎನ್ನುವ ಜನಪದ ನುಡಿಯಂತೆ, 'ವೇದ ಹೇಳದ್ದನ್ನು ವಚನ ಹಾಡಿತು' ಎಂಬಂತೆ ಬದಲಿಸಬಹುದೇನೋ. ಏಕೆಂದರೆ ಮಹತ್ವದ ವಿಷಯಗಳನ್ನು ಒಳಗೊಂಡ ವೇದಗಳು ಜನಸಮಾನ್ಯರಿಗೆ ತಲುಪಲು, ಅರ್ಥೈಸಲು ತಮ್ಮ ಭಾಷಾ ಸಂಕೀರ್ಣತೆಯಿಂದಾಗಿ ವಿಫಲವಾದಾಗ, ಸರಳ ವಚನಗಳು ಅವರ ಹೃದಯವನ್ನು ತಟ್ಟಿದವು. ವಚನಗಳನ್ನು ಕೆಲವು ಕವಿಗಳು ಛಂದೋಬದ್ಧವಾಗಿ ಕೂಡ ರಚಿಸಿದ್ದಾರೆ. ಅವುಗಳ ಸಾಹಿತ್ಯ ಸೌಂದರ್ಯವು ಅಸದಳ. ಅಂತಹ ವಚನಗಳು ಹಾಡಲೂ ಕೂಡಾ ಅನುವಾಗುವಂತೆ ತಾಳಬದ್ಧವಾಗಿಯೂ ಇವೆ. ಉದಾಹರಣೆಗೆ ಶ್ರೇಷ್ಠ ದಾರ್ಶನಿಕ ಕವಿಗಳಾದ ಡಿ.ವಿ. ಗುಂಡಪ್ಪನವರ 'ಮಂಕುತಿಮ್ಮನ ಕಗ್ಗ'ದ ಮುಕ್ತಕಗಳು. 1943ನೇ ಇಸವಿಯಲ್ಲಿ ರಚಿಸಿದ ಈ ಮುಕ್ತಕಗಳು ದಿನಗಳೆದೆಂತೆಲ್ಲಾ ಇನ್ನೂ ಹೆಚ್ಚು ಹೆಚ್ಚು ಜನಪ್ರಿಯತೆ ಪಡಿಯುತ್ತಾ ಅನೇಕ ವೇದಿಕೆಗಳಲ್ಲಿ ಪ್ರಸ್ತುತಪಡಿಸಲಾಗುತ್ತಿವೆ. ಶರಣರ ವಚನಗಳಂತೆ, ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಕೂಡಾ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ. ಕೇವಲ ಸಾಹಿತ್ಯಕ್ಕಲ್ಲದೆ, ನಿತ್ಯಜೀವನದಲ್ಲೂ ಅನೇಕ ಸಂಧರ್ಭಗಳಲ್ಲಿ ಅವುಗಳನ್ನು ಗುಣುಗುಟ್ಟುತ್ತಾ, ಅವುಗಳ ತಾತ್ಪರ್ಯವನ್ನು ಆಸ್ವಾಸಿದಿಸುತ್ತಾ ಮನಸ್ಸಿಗೆ ಸಾಂತ್ವನ ಮತ್ತು ಮುದ ತಂದುಕೊಳ್ಳುತ್ತೇನೆ. ನನ್ನ ಮನಸ್ಸಿಗೆ ತೋಚಿದ ಅನೇಕ ವಚನಗಳನ್ನು ನಾನೂ ಕೂಡಾ ಬಾಲ್ಯದಲ್ಲಿ ರಚಿಸುತ್ತಾ ಕೆಲವನ್ನು ಶಾಲಾ ಕಾಲೇಜುಗಳ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಿಸುತ್ತಿದ್ದೆ. ಹಾಗೇ, ಇತ್ತೀಚಿಗೆ ಸುಮಾರು ಐದು ವರ್ಷಗಳಿಂದ 'ಅರಿಬೊಮ್ಮನ ಕನವರಿಕೆಗಳು' ಎಂಬ ಶೀರ್ಷಿಕೆಯಡಿಯಲ್ಲಿ ಅನೇಕ ಸರಳ ವಚನಗಳನ್ನು ರಚಿಸುತ್ತಾ ಮನೆಯವರಿಗೆ, ಸ್ನೇಹಿತರಿಗೆ ತೋರಿಸಿ ಅವರ ಪ್ರೋತ್ಸಾಹದ ಮಾತುಗಳಿಂದ ಉತ್ತೇಜಿತನಾಗಿದ್ದೇನೆ. ಆದರೆ ಕವಿಸಮಯದ ಸ್ಫೂರ್ತಿಯ ಒರತೆ ಹಾಗೆ ಉಳಿಸಿಕೊಳ್ಳಲಾಗುತ್ತಿರಲಿಲ್ಲ. ಮನಸ್ಸಿಗೆ ತೋಚಿದಾಗ ಒಂದು, ಎರಡು ವಚನಗಳನ್ನು ರಚಿಸಿ ಬರೆದಿಡುತ್ತಿದ್ದೆ. ಕೆಲವೊಮ್ಮೆ ಸಮಾಜದಲ್ಲಿ, ವೃತ್ತಿಜೀವನದಲ್ಲಿ, ಸಾಂಸಾರಿಕ ಬದುಕಿನಲ್ಲಿ ಕಾಣುವ ವಿಶೇಷ ಸಂಧರ್ಭಗಳಿಗೆ ತಕ್ಕಂತೆ ಅವುಗಳನ್ನು ರಚಿಸುತ್ತಿದ್ದೆ. ಅವುಗಳನ್ನು ಈಗ ಪುಸ್ತಕ ರೂಪದಲ್ಲಿ 'ಬಿಂಬ - ಅರಿಬೊಮ್ಮನ ಸ್ವಗತ' ಎಂಬ ಶೀರ್ಷಿಕೆಯಡಿಯಲ್ಲಿ ಓದುಗರ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. ಅರಿಬೊಮ್ಮನ ವಿಶೇಷತೆ ಏನೆಂದರೆ, ಅರಿ: (1) ತೆನೆ ಗೂಡಿಸಿದ ರಾಶಿ, (2) ಧಾನ್ಯಗಳನ್ನು ನೀರಿನಲ್ಲಿ ಜಾಲಿಸಿ, ಶೋಧಿಸಿ ತೆಗೆಯುವುದು: ಅರ್ಥಾತ್, ಜೀವನ ಸತ್ವಗಳನ್ನು ಶೋಧಿಸಿ, ತೆನೆಗೂಡಿಸಿ ವಚನ ರೂಪದಲ್ಲಿ ’ರಾಶಿ’ ಮಾಡುವುದರ ರೂಪಕ. ಬೊಮ್ಮ: ಬ್ರಹ್ಮ – ಸೃಷ್ಟಿಕರ್ತ, ಅರಿತವ, ಅರ್ಥಾತ್, ಜೀವನ ಸಾರವನ್ನು ತಾ ಅರಿತಂತೆ ಸಾರುವುದರ ಸಂಕೇತ. ಹಾಗಾಗಿ 'ಅರಿಬೊಮ್ಮ' ಕಾವ್ಯನಾಮ ಬಳಸಿದ್ದೇನೆ. ಬಿಂಬವು ನಾವು ನಮ್ಮನ್ನು ಕಂಡಂತೆ ಕಾಣುವ ಮಾಯೆ. ನಾನು ನನ್ನನ್ನು ಈ ಸಮಾಜದಲ್ಲಿ ಕಂಡಂತೆ, ಆಗುಹೋಗುಗಳನ್ನು ಅರಿತಂತೆ ಈ ವಚನಗಳನ್ನು ರಚಿಸಿದ್ದೇನೆ. ಹಾಗಾಗಿ 'ಬಿಂಬ - ಅರಿಬೊಮ್ಮನ ಸ್ವಗತ' ಎಂಬ ಶೀರ್ಷಿಕೆ ನೀಡಿದ್ದೇನೆ. ಮೊದಲೇ ಹೇಳಿದಂತೆ ಇವು ಛಂದಸ್ಸಿನ ಚೌಕಟ್ಟಿಲ್ಲದ, ಗಣ, ಮಾತ್ರೆ ಮತ್ತು ಪ್ರಾಸಗಳ ಏಕರೂಪತೆ ಇಲ್ಲದಂತಹ, ಸರಳವಾಗಿ ನಿರೂಪಣೆ ಮಾಡಿರುವಂತಹವು. ಹಾಗಾಗಿ ಭಾಷೆ ಕೂಡ ಕ್ಲಿಷ್ಟವಾಗಿಲ್ಲ. ಆದರೆ ಭಾವ ತುಂಬಿದ್ದೇನೆ. ಒಟ್ಟು 8 ಅಧ್ಯಾಯಗಳಲ್ಲಿನ ಒಟ್ಟು ವಚನಗಳ ಸಂಖ್ಯೆ 365. ವರ್ಷದಲ್ಲಿ ದಿನಕ್ಕೊಂದು ವಚನದಂತೆ ವಾಚಿಸಬಹುದು ಮತ್ತು ಹಂಚಿಕೊಳ್ಳಬಹುದು ಎನ್ನುವುದೇ ಈ ಸಂಖ್ಯೆಯ ಉದ್ದೇಶ. ಪ್ರತಿ ಅಧ್ಯಾಯದಲ್ಲಿರುವ ವಚನಗಳು ಆಯಾ ಅಧ್ಯಾಯದ ಶೀರ್ಷಿಕೆಗೆ ಅನುಗುಣವಾಗಿ ವರ್ಗೀಕರಿಸಲ್ಪಟ್ಟಿವೆ. ಇದು ನನ್ನ ಮೊದಲ ಕನ್ನಡ ಪ್ರಕಟಿತ ಕೃತಿ. ಸಹೃದಯೀ ಓದುಗರು ನನ್ನ ಈ ಬರವಣಿಗೆಯನ್ನು ಪ್ರೋತ್ಸಾಹಿಸಿ, ಮುಂದಿನ ಕನ್ನಡ ಸಾಹಿತ್ಯ ಕೃಷಿಗೆ ಉತ್ತೇಜನ ನೀಡುತ್ತಾರೆ ಎಂದು ಭಾವಿಸುವೆ. ಎಂದಿನಂತೆ ನನ್ನ ಮನೆಯಲ್ಲಿನ ಎಲ್ಲಾ ಕುಟುಂಬ ಸದಸ್ಯರುಗಳು ನನ್ನ ಸಾಹಿತ್ಯ ಕೃಷಿಗೆ ಮೊದಲ ಓದುಗರಾಗಿ ಟೀಕೆ-ಟಿಪ್ಪಣಿ ನೀಡಿ ಮೌಲ್ಯ ತಂದುಕೊಟ್ಟಿದ್ದಾರೆ. ನನ್ನ ಪತ್ನಿ ಶ್ರೀಮತಿ ಕೆ.ಸಿ. ರತ್ನಶ್ರೀ ಮತ್ತು ಮಗ ಎಸ್. ಅಭಿಲಾಷ್ ಇಬ್ಬರೂ ನನ್ನ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದಾರೆ. ನನ್ನ ಮಗ ಅಭಿಲಾಷ್ ಮದುವೆಯ ಆರತಕ್ಷತೆಯ ದಿನವೇ ನನ್ನ ಈ ಕೃತಿ ಮತ್ತು ನನ್ನ ಪತ್ನಿಯ ಎರಡನೇ ಕನ್ನಡ ಕೃತಿ ' ರಾಷ್ಟ್ರೀಯ ಶಿಕ್ಷಣ ನೀತಿ-2020' ಬಿಡುಗಡೆ ಆಗುತ್ತಿರುವುದು ನಮಗೆಲ್ಲಾ ವಿಶೇಷ. ಮನೆಗೆ ಕಾಲಿಡುತ್ತಿರುವ ಸೊಸೆ ‘ಐಶ್ವರ್ಯಳೊಂದಿಗೆ ನಮ್ಮ ಮನೆಯ ಕನ್ನಡದ ವಾತಾವರಣ ಇನ್ನಷ್ಟು ಹೆಚ್ಚಲಿ ಎಂದು ಆಶಿಸುತ್ತೇವೆ. ತಂದೆ ದಿ| ಎಸ್. ನಾಗಪ್ಪ ಮತ್ತು ತಾಯಿ ದಿ| ಎಸ್. ಬಿ. ಸೀತಮ್ಮ ಇಬ್ಬರೂ ಹಾಕಿಕೊಟ್ಟ ಸಂಸ್ಕಾರ ಇಲ್ಲಿಯವರೆಗೆ ನನ್ನನ್ನು ತಂದಿದೆ. ಅವರಿಗೂ ಮತ್ತು ಮನೆಯ ಎಲ್ಲಾ ಮಾತೃ ಮತ್ತು ಪಿತೃ ಸಮಾನರಿಗೂ ನನ್ನ ಅನಂತಾನಂತ ಪ್ರಣಾಮಗಳು. ನನ್ನ ಸಹೋದರರೂ, ಸಹೋದರಿಯರೂ ಮತ್ತು ಹತ್ತಿರದ ಸಂಬಂಧಿಗಳೆಲ್ಲರೂ ಸತತವಾಗಿ ನನ್ನನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇವರೆಲ್ಲರಿಗೆ ನನ್ನ ಅನಂತಾನಂತ ವಂದನೆಗಳು. ನನ್ನ ಪತ್ನಿ ಶ್ರೀಮತಿ ಕೆ.ಸಿ. ರತ್ನಶ್ರೀ ಈ ಕೃತಿಯ ಕರಡನ್ನು ಕೂಲಂಕುಷವಾಗಿ ಓದಿ ತಿದ್ದಿ ಕೊಟ್ಟಿದ್ದಾರೆ. ಅವರಿಗೆ ನನ್ನ ನಮನಗಳು. ಎಚ್.ಎಸ್.ಆರ್. ಪಬ್ಲಿಕೇಷನ್‌ನ ಶ್ರೀ ಅಜಯ್ ಕುಮಾರ್ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಈ ಕೃತಿಯನ್ನು ಅಂದವಾಗಿ ಮುದ್ರಿಸಿಕೊಟ್ಟಿದ್ದಾರೆ. ಅವರಿಗೆ ನನ್ನ ಹೃದಯಾಳದ ಕೃತಜ್ಞತೆಗಳು. ಡಾ. ಎಸ್.ಎನ್. ಶ್ರೀಧರ 27 August 2023

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)