Click here to Download MyLang App

ನಿಮ್ಮ ನಾಯಕತ್ವಕ್ಕೆ ನೀವೇ ಶಿಲ್ಪಿ

ನಿಮ್ಮ ನಾಯಕತ್ವಕ್ಕೆ ನೀವೇ ಶಿಲ್ಪಿ

e-book

ಪಬ್ಲಿಶರ್
ಕರ್ನಲ್ ಡಾ. ಎಸ್.ಎನ್. ಶ್ರೀಧರ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 85.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಲೇಖಕರ ಪರಿಚಯ: ಕರ್ನಲ್ ಡಾ. ಎಸ್.ಎನ್. ಶ್ರೀಧರ್‌ರವರು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿAದ ಏರೋಸ್ಪೇಸ್ ವಿಭಾಗದಲ್ಲಿ ಸ್ನಾತಕೋತ್ತರ ಮತ್ತು ಪಿ.ಎಚ್.ಡಿ. ಪದವಿ ಪಡೆದಿದ್ದು ಪ್ರಸ್ತುತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ನಾಯಕತ್ವದಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿದ್ದು, ಪ್ರೊಫೆಸರ್, ಡೀನ್, ಪ್ರಿನ್ಸಿಪಾಲ್, ಡೈರೆಕ್ಟರ್ ಹಾಗೂ ಕುಲಪತಿ (ವೈಸ್ ಚಾನ್ಸಲರ್) ಸೇರಿದಂತೆ ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪುಸ್ತಕದ ರೂಪುರೇಷೆ: ಪ್ರತಿಯೊಬ್ಬರಲ್ಲೂ ಅವರದೇ ಆದ ಅಂತರ್ನಿಮಿತ ಮತ್ತು ಅಂತರ್ಗತವಾದ ನಾಯಕತ್ತ್ವ ಗುಣಗಳು ಇವೆ. ತನ್ನಲ್ಲಿರುವ ಆ ವಿಶೇಷ ನಾಯಕತ್ವ ಗುಣಗಳನ್ನು ಉತ್ತೇಜಿಸಿ ಪ್ರಕಾಶಿಸುವಂತೆ ಮಾಡುವುದೇ ಈಗಿನ ಜರೂರು. ಹಾಗೆಯೇ, ತನ್ನಲ್ಲಿರುವ ಲೋಪದೋಷಗಳನ್ನೂ ಗುರುತಿಸುವ ಮತ್ತು ಅವುಗಳನ್ನು ಮೀರಬೇಕೆನ್ನುವ ಮನೋಭಾವನೆಯನ್ನೂ ನಾಯಕನಾಗಿ ಬೆಳೆಯಬೇಕೆನ್ನುವರು ಬೆಳೆಸಿಕೊಳ್ಳಬೇಕಿದೆ. ನನ್ನ ಈ ಪುಸ್ತಕದಲ್ಲಿ, ಸಾಮಾನ್ಯ ಮಾನವನು ಹೇಗೆ ಧನಾತ್ಮಕ ಮನೋಭಾವವನ್ನು ಹೊಂದಬೇಕು, ಮತ್ತು ತಾನೊಬ್ಬ ಯಶಸ್ವಿ ನಾಯಕನಾಗಬೇಕು ಎಂದು ಚಿಂತಿಸಿ ಆ ನಿಟ್ಟಿನಲ್ಲಿ ಹೇಗೆ ಪ್ರಯತ್ನಿಸಬೇಕೆಂದು ವಿವರವಾಗಿ ಚರ್ಚಿಸಿದ್ದೇನೆ. ನಾಯಕತ್ವದ ಗುಣವಿಶೇಷಗಳನ್ನು ಚರ್ಚಿಸುವಾಗ ಓದುಗರಿಗೆ ಬೇಸರ ತರದಂತೆ ಸಣ್ಣ-ಸಣ್ಣ ಮನರಂಜನೀಯ ಕಥೆಗಳನ್ನು ಹೆಣೆದು ಜೋಡಿಸಿದ್ದೇನೆ. ಈ ಕಥೆಗಳನ್ನು ರಾಜ ಮಹಾರಾಜರ ಪುರಾತನಕಾಲದ ಘಟನೆಗಳಂತೆ ಮತ್ತು ಕಾಡಿನಲ್ಲಿ ನಡೆವ ಪ್ರಾಣಿಲೋಕದ ಕಾಲ್ಪನಿಕ ನೀತಿಕಥೆಗಳಂತೆ ನಿರೂಪಿಸಿದ್ದೇನೆ. ಇದೇ ರೀತಿಯ ನಾಯಕತ್ವಕ್ಕೆ ಸಂಬAಧಪಟ್ಟ ಇತರ ಪುಸ್ತಕಗಳು ಈ ವಿಷಯಗಳನ್ನು ಗಂಬೀರವಾಗಿ, ಶುಷ್ಕವಾಗಿ ಆಧುನಿಕ ಮ್ಯಾನೇಜ್‌ಮೆಂಟ್ ತಂತ್ರಗಳ ಉದಾಹರಣೆಗಳ ಮೂಲಕ ವಿವರಿಸುತ್ತವೆ. ಈ ರೀತಿಯ ಏಕತಾನತೆಯನ್ನು ದೂರವಿಟ್ಟು ರಂಜನೀಯ ಓದನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಹೀಗೆ ಕಥೆಗಳ ಮೂಲಕ ಕಟ್ಟಿಕೊಳ್ಳುವ ನಾಯಕತ್ವದ ಗುಣವಿಶೇಷಗಳನ್ನು ಓದುಗರು ತಮ್ಮ ಜೀವನದಲ್ಲಿ ನಡೆದಿರಬಹುದಾದ ಘಟನೆಗೆ ಹೋಲಿಸಿಕೊಂಡು ಆಪ್ತತೆಯನ್ನು ಅನುಭವಿಸುತ್ತಾ ತಮ್ಮನ್ನೇ ನಾಯಕರನ್ನಾಗಿ ರೂಪಿಸಿಕೊಳ್ಳಬಹುದು. ನನ್ನ ನಲವತ್ತು ವರ್ಷಗಳಿಗೂ ಹೆಚ್ಚಿನ ವೃತ್ತಿ ಜೀವನದ ಅನುಭವದಲ್ಲಿ ಅನೇಕ ವಿದ್ಯಾಸಂಸ್ಥೆಗಳಲ್ಲಿ ವಿವಿಧ ಹಂತಗಳಲ್ಲಿ ನಾಯಕಸ್ಥಾನದಲ್ಲಿದ್ದುಕೊಂಡು ರೂಪಿಸಿಕೊಂಡ ಹಾಗೂ ಇದೇ ಸಂಧರ್ಭಗಳಲ್ಲಿ ಅನೇಕ ಕಾರ್ಪೋರೇಟ್‌ಗಳಲ್ಲಿ ಕಂಡು ತಿಳಿದುಕೊಂಡ ಅನೇಕ ಮ್ಯಾನೇಜ್ ಮೆಂಟ್ ತಂತ್ರಗಾರಿಕೆಯನ್ನು ಈ ಪುಸ್ತಕದಲ್ಲಿ ಎರಕ ಹೊಯ್ದಿದ್ದೇನೆ. ನನ್ನ ವೃತ್ತಿ ಜೀವನದ ಅನೇಕ ಸೋಲುಗಳು ನನಗೆ ಮರೆಯಲಾರದ ಪಾಠಗಳನ್ನು ಕಲಿಸಿವೆ. ಹಾಗೆಯೇ, ನಾನು ಅತಿ ಶ್ರದ್ಧೆಯಿಂದ ಮತ್ತು ಜಾಣ್ಮೆಯಿಂದ ರೂಪಿಸಿಕೊಂಡ ಗೆಲುವುಗಳು ನನ್ನ ಯೋಜಿತ ಗೆಲುವುಗಳ ಸೋಪಾನವನ್ನು ಧೃಢಪಡಿಸಿವೆ. ಈ ಅನುಭವಗಳ ಸಾರದಿಂದ ಹೊರಬಂದ ಅನೇಕ ತತ್ವಗಳನ್ನು ನಾನು ಇತರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿ ನಾಯ್ಕತ್ವಕ್ಕೆ ಬೇಕಾದ ಗುಣವಿಶೇಷಗಳ ಅಡಿಯಲ್ಲಿ ನಿರೂಪಿಸಿದ್ದೇನೆ. ನನ್ನ ಈ ಪುಸ್ತಕ ನಾಯಕತ್ವವನ್ನು ರೂಪಿಸಿಕೊಳ್ಳಬೇಕೆನ್ನುವವರಿಗೆ ಮತ್ತು ಈಗಾಗಲೇ ಅನೇಕ ನಾಯಕತ್ವದ ಹುದ್ದೆಗಳಲ್ಲಿದ್ದು ಅಧಿಕಾರೀ ಆಡಳಿತ ನಡೆಸಿರುವವರು ಇನ್ನೂ ಮುಂದೆ ಶ್ರೇಷ್ಟ ನಾಯಕತ್ವವನ್ನು ರೂಪಿಸಿಕೊಳ್ಳಲು ಬಯಸುವವರಿಗೆ ಸಹಾಯಕವಾಗಬಹುದೆಂಬ ನಂಬಿಕೆ ಇದೆ. ಅನೇಕರಿಗೆ ಈ ಪುಸ್ತಕ ಅವರ ವೃತ್ತಿ ಜೀವನದಲ್ಲಿರಬಹುದಾದ ಅನೇಕ ಗೊಂದಲಗಳಿಗೆ ಉತ್ತರ ನೀಡಿ ಪರಿಹರಿಸಬಹುದು ಎಂದು ನಂಬಿದ್ದೇನೆ. ಅನೇಕ ಸಾಮಾನ್ಯರನ್ನು ಶ್ರೇಷ್ಟ ನಾಯಕರುಗಳನ್ನಾಗಿ ರೂಪಿಸಲು ಈ ಪುಸ್ತಕ ಸಹಾಯ ಮಾಡುವ ಭರವಸೆ ಇದೆ.

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)