
ಈ ಪುಸ್ತಕದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ವಾಸಿಸುವ ಅನೇಕ ಜೀವಿಗಳ ಜೊತೆಗಿನ ನನ್ನ ಒಡನಾಟದ ಬಗ್ಗೆ ಬರೆದಿದ್ದೇನೆ. ಅದರೊಟ್ಟಿಗೇ ಆ ಜೀವಿಗಳ ಸಂಬಂಧಿಗಳಾದ ಬೇರೆ ಜೀವಿಗಳ ಬಗೆಗೂ ಇದರಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ. ಒಟ್ಟಿನಲ್ಲಿ ಇದು ಕಥೆ ಪುಸ್ತಕವಾಗಿ ಮಾತ್ರವಲ್ಲ, ಮಾಹಿತಿಪೂರ್ಣ ವಿಷಯಗಳನ್ನೂ ಹೊಂದಿದ ಪುಸ್ತಕವಾಗಿ ಮೂಡಿಬರಲಿ ಎಂಬ ಆಶಯದಿಂದ ಈ ಅಂಶಗಳನ್ನು ಸೇರಿಸಿದ್ದೇನೆ.