Click here to Download MyLang App

ಬಾಹ್ಯಾಕಾಶದ ಅದ್ಭುತಗಳು (ಇಬುಕ್)

ಬಾಹ್ಯಾಕಾಶದ ಅದ್ಭುತಗಳು (ಇಬುಕ್)

e-book

ಪಬ್ಲಿಶರ್
ಎಸ್ ವಿ ಶ್ರೀನಿವಾಸಮೂರ್ತಿ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ನೀಲಮೇಘ ಪ್ರಕಾಶನ

Publisher: Neelamegha Prakashana

 

ಪರಮಾಣುವಿನಿಂದ ಬಹ್ಮಾಂಡದವರೆಗೆ: ವಿಶ್ವಸೃಷ್ಟಿಯ ವಿಸ್ಕಯಗಳು ವಿಶ್ವವು ವಿಶಾಲವಾದದ್ದು. ಇದರ ವಿಸ್ತಾರ ಎಷ್ಟೆ೦ಬುದು ನಮಗ್ಯಾರಿಗೂ ಗೊತ್ತಿಲ್ಲ. ಇದು ಅನ೦ತವೋ ಅಥವಾ ಇದಕ್ಕೊಂದು ಸೀಮೆ ಇದೆಯೋ.. ಅದೇನೇ ಆಗಿದ್ದರೂ ನಮ್ಮ ಸೀಮಿತ ದೃಷ್ಟಿಕೋನದ ಪರಿಮಿತಿಯಲ್ಲಿ ಇದನ್ನು ಅನ೦ತವೆಂದೇ ಪರಿಗಣಿಸಲು ಯಾವ ಅಡ್ಡಿಯೂ ಇಲ್ಲ. ಆದರೆ ಈ ಅನ೦ತ ವಿಶ್ವವೂ ಕೂಡ ಸೃಷ್ಟಿಯಾಗಿರುವುದು ಬರಿಗಣ್ಣಿಗೆ, ಅಷ್ಟೇ ಏಕೆ ನಮ್ಮ ಅತ್ಯ೦ತ ಪ್ರಬಲವಾದ ಸೂಕ್ಷ್ಮದರ್ಶಕಗಳ ದೃಷ್ಟಿಗೂ ನೇರವಾಗಿ ಗೋಚರವೇ ಅಗದ ಸೂಕ್ಷ್ಮಾತಿಸೂಕ್ಷ್ಮ ಕಣಗಳಿ೦ದ. ಹಾಗಾಗಿ ಈ ಅತಿಸೂಕ್ಷ್ಮ ಕಣಗಳೇ ವಿಶ್ವದ ಜೀವಾಳ. ನಾವು ವಿಶ್ವವನ್ನು ತಿಳಿದಿರುವುದೇ ಒಂದಾದರೆ ನಿಜವಾದ ವಿಶ್ವ ಇರುವುದೇ ಇನ್ನೊ೦ದು. ಆಳವಾಗಿ ನೋಡುತ್ತ ಹೋದರೆ ವಿಶ್ವವು ವಿಸ್ಮಯಗಳ ಖಜಾನೆ. ಎಂದೆಂದಿಗೂ ಬರಿದಾಗದ ಅಕ್ಷಯಪಾತ್ರೆ. ಹಾಗೆಯೇ ಮನುಷ್ಯನ ಅಹ೦ಕಾರಕ್ಕೂ ವಿಶ್ವದ ವಿಸ್ತಾರವೇ ಬಹುದೊಡ್ಡ ಸವಾಲು. ಎಲ್ಲವನ್ನೂ ತಿಳದವರಿಲ್ಲ ಎ೦ದು ನಮಗೆ ಪಡೇಪದೇ ನೆನಪಿಸುವುದು ಈ ವಿಶ್ವ. ಕಾಲ ಎಂದರೇನು? ಆಕಾಶ ಎಂದರೇನು? ಕಾಲ ಮತ್ತು ಆಕಾಶ ಒಂದೇ ಆಗಿದೆಯೇ ಅಥವಾ ಬೇರೆಬೇರೆ ಆಗಿದೆಯೇ? ಬೇರೆಬೇರೆ ಆಗಿದ್ದರೆ ಅವುಗಳಗಿರುವ ವ್ಯತ್ಯಾಸಗಳೇನು? ಇತ್ಯಾದಿ ವಿಷಯಗಳ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನಮಾಲೆ.

-ಎಸ್ ವಿ ಶ್ರೀನಿವಾಸಮೂರ್ತಿ

 

ಕೋಟಿ ಕೋಟಿ ವರ್ಷಗಳಿಂದ ಇಂಚಿಂಚಾಗಿ ತೆವಳುತ್ತಾ ಸಾಗಿ ಬಂದ ನಾವು ಇತ್ತೀಚಿನ ಎರಡು ಶತಮಾನಗಳಲ್ಲಿ ಆವಿಷ್ಕಾರವಾದ ತಂತ್ರಜ್ಞಾನದಿಂದ ದಾಪುಗಾಲಿಕ್ಕಿ ಹಾರುತ್ತಿದ್ದೇವೆ. ಕಂಡು ಕೇಳರಿಯದ ತಂತ್ರಜ್ಞಾನದ ಲಾಭ ಪಡೆಯುತ್ತಿದ್ದೇವೆ. ಅಂದಿನ ಜನ ಕನಸಲ್ಲೂ ಊಹಿಸದಲ್ಲಿಗೆ ಹೋಗಿ ಬರುತ್ತಿದ್ದೇವೆ. ಈಗಿನ ಅಂತರ್ಜಾಲ ವ್ಯವಸ್ಥೆಯಂತೂ ಎಲ್ಲವನ್ನೂ ಮೀರಿ ನಿಂತಿದೆ. ಚಂದ್ರನ ಮೇಲಾಡಿ ಮಂಗಳನ ಅಂಗಳಕ್ಕಿಳಿದು ಅಲ್ಲಿಂದಲೂ ಮುಂದೆ ಏನಿದೆ ಎಂದು ತಡಕಾಡುತ್ತಿದ್ದೇವೆ. ಏನಿರಬಹುದು ಎಂದು ಹುಡುಕುತ್ತಿದ್ದೇವೆ. ಆಯಾ ಕ್ಷೇತ್ರದಲ್ಲಿ ಮುಂದುವರಿದವರ ಹೊರತಾಗಿ ಅದರ ಲಾಭ ಪಡೆಯುವುದಲ್ಲದೆ ಉಳಿದವರಿಗೆ ಅದರ ಬಗ್ಗೆ ತಿಳಿದಿರುವುದು ತೀರ ಕಮ್ಮಿ.

ಊಹಿಸುವ, ಯೋಚಿಸುವ, ಸಾಹಸ ಪ್ರವೃತ್ತಿಯ ಮನುಷ್ಯನಿಗೆ ಅನ್ವೇಷಣೆ ಮುಂದುವರಿಯುವ ದಾರಿ.

ನೋಡಲು ಸಿಗುವ ಆಗಸದ ಹೊರನೋಟ ಬೇರೆ. ಹೊರನೋಟಕ್ಕೆ ಗೋಚರವಾಗದ ಅಲ್ಲಿರುವ ಅತ್ಯದ್ಭುತವಾದ ವೈಜ್ಞಾನಿಕ ವಿಷಯಗಳೇ ಬೇರೆ. ಒಂದೊಂದರ ಹಿಂದೆಯೂ ರೋಚಕ ಸಂಗತಿಗಳಿವೆ. ಒಂದಕ್ಕೊಂದು ಪೂರಕವಾಗಿ ಸಾಗುವ ಅಗೋಚರ ವ್ಯವಸ್ಥೆ ಇದೆ. ಬದುಕೆಲ್ಲಾ ಅದರ ಅನ್ವೇಷಣೆಯಲ್ಲಿ ಕಳೆದ ಮಹಾ ವಿಜ್ಞಾನಿಗಳ ಚಿಂತನೆ, ಮಾಡಿದ ಪ್ರಯೋಗಗಳಿಂದ ದೊರೆತ ಫಲಗಳ ಲಾಭ ನಮಗಿದೆ.

ನಿಜಕ್ಕೂ ಈ ಆಕಾಶ, ಸೂರ್ಯ, ಭೂಮಿ, ಗ್ರಹ, ನಕ್ಷತ್ರ ಇವುಗಳ ಲೋಕ ಅತ್ಯದ್ಭುತ. ಎಂದಿಗೂ ಪೂರ್ತಿ ತಿಳಿಯಲು ಸಾಧ್ಯವಿಲ್ಲದಷ್ಟು! ಆದರೂ ಇಂಚಿಂಚಾಗಿ ಅದರೊಳಗನ್ನು ತಿಳಿಯುತ್ತಿದ್ದಾನೆ ಮನುಷ್ಯ. ಭೂಜಗತ್ತಿನ ಜೀವೋತ್ಪತ್ತಿಯ ರಹಸ್ಯಗಳೇ ಅರಿಯಲಾರದಷ್ಟಿವೆ. ಅದರೊಳಗಿನ ಬಗೆಗಳನ್ನೇ ಇನ್ನೂ ಸರಿಯಾಗಿ ತಿಳಿದಿಲ್ಲ ನಾವು. ಆದರೂ ಆಕಾಶದ ಅದ್ಭುತಗಳ ಕಡೆಗೂ ಕಣ್ಣು ಹಾಯಿಸಿದ್ದೇವೆ. ಕಣ್ಣು ಹಾಯಿಸಿದ್ದು ಮಾತ್ರವಲ್ಲ; ಅಲ್ಲೆಲ್ಲಾ ತಿರುಗಾಡಿ, ಸಾಧ್ಯವಾದಷ್ಟೂ ಮಾಹಿತಿ ಸಂಗ್ರಹಿಸಿ ಅದರ ಬಗ್ಗೆ ಒಂದಿಷ್ಟು ವಿಚಾರವನ್ನೂ ತಿಳಿದಿದ್ದೇವೆ. ಇಂದಿನ ತಂತ್ರಜ್ಞಾನ ಎಷ್ಟು ಮುಂದುವರಿದಿದೆ; ಆದರೂ ನಾವೆಷ್ಟು ಹಿಂದುಳಿದಿದ್ದೇವೆ ಎನ್ನುವುದನ್ನು ಕೂಡ ಈ ಲೇಖನ ಮಾಲೆ ತಿಳಿಸಿಕೊಡುತ್ತದೆ.

ಹೊಸ ಹೊಸ ಆವಿಷ್ಕಾರಗಳ ಹೊಸ ಹೊಸ ಪದಗಳು ಎಲ್ಲರಿಗೂ ಅರ್ಥವಾಗುವುದಿಲ್ಲ. ಅದನ್ನು ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ವಿವರಿಸುವುದೇನೂ ಸುಲಭದ ಕೆಲಸವಲ್ಲ. ಆದರೂ ಶ್ರಮವಹಿಸಿ ಆಸಕ್ತರಿಗೆ ಸರಳವಾಗಿ ಅರ್ಥವಾಗುವಂತೆ ಅವುಗಳ ಬಗ್ಗೆ ವಿಚಾರಗಳನ್ನು ಶ್ರೀಯುತ ಶ್ರೀನಿವಾಸಮೂರ್ತಿಯವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ವೈಜ್ಞಾನಿಕ ಬರಹಗಳನ್ನು ಸಮಾಜ ಸದಾ ಸ್ವಾಗತಿಸುತ್ತದೆ. ಬರಹ ಪ್ರಬುದ್ಧವಾಗಿದೆ. ಬರಹದಲ್ಲಿ ಸತ್ಯ, ಸತ್ವ ಎರಡೂ ಇದೆ. ನಮ್ಮಲ್ಲಿ ಸರಳವಾಗಿ ವೈಜ್ಞಾನಿಕ ವಿಷಯಗಳನ್ನು ತಿಳಿಸುವ ಲೇಖಕರ ಕೊರತೆಯೂ ಇದೆ. ಹಾಗಾಗಿ ಈ ಕೃತಿ ಜನಪ್ರಿಯವಾಗಲಿ; ಇನ್ನೂ ಅವರಿಂದ ಇಂತಹಾ ಕೃತಿಗಳು ಮೂಡಿ ಬರಲಿ ಎಂದು ಹಾರೈಸುವೆ.

-ಗಿರಿಮನೆ ಶ್ಯಾಮರಾವ್.

 

ಪುಟಗಳು: 154

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !