
ಬೆಸ್ಟ್ ಆಫ್ ಲವ್ ಲವಿಕೆ (Audio Book) - ಬದುಕಿನ ಅವಶ್ಯಕತೆಗಳಲ್ಲಿ ಬಹುಮುಖ್ಯವಾದದ್ದು ಪ್ರೀತಿ. ಆ ಪ್ರೀತಿಯ ಬಣ್ಣ ಒಬ್ಬೊಬ್ಬರ ಪಾಲಿಗೆ ಒಂದೊಂದು ರೀತಿಯದ್ದಾಗಿರುತ್ತದೆ. ಕೆಂಪಾಗಿ ಅರಳಿ ನಿಂತ ಗುಲಾಬಿಯಾಗಿ ಕೆಲವರ ಪಾಲಿಗೆ, ಪರಿಶುದ್ಧ ಬಿಳುಪಾಗಿ ಹಲವರ ಪಾಲಿಗೆ, ಗ್ರೀನ್ ಸಿಗ್ನಲ್ ಆಗಿ ಖುಷಿಪಡೆವ ಭಾಗ್ಯ ಕೆಲವರಿಗಿದ್ದರೆ, ಇದಾಗಬಾರದಿತ್ತು ಅನ್ನಿಸುವ ಬೂದು ಬಣ್ಣವಾಗಿ ಮತ್ತೆ ಕೆಲವರಿಗೆ, ಹೀಗೆ ನಿಮ್ಮೊಳಗೆ ಚಿಗುರಿದ ಕನಸುಗಳ ಪತ್ರಗಳ ಗುಚ್ಛವೇ ಬೆಸ್ಟ್ ಆಫ್ ಲವ್ ಲವಿಕೆ. ಇದನ್ನು ಕೇಳಿ ನೀವು ಮರೆತ ಬದುಕಿನ ಕವಿತೆಯೊಂದು ಮತ್ತೆ ಪಲ್ಲವಿಸಿದರೆ ನಿಮ್ಮ ಮನದಲ್ಲೊಂದು ನವಿರು ಭಾವ ಮತ್ತೆ ಮಿಡಿದೀತು. ಯಾರೋ ನೆನಪಾದಾರು, ಎಲ್ಲೋ ಮರೆತ ಕವನ ಹೃದಯ ಹೊಕ್ಕೀತು, ನಾಲ್ಕಾರು ನೆನಪಿನ ನವಿಲುಗರಿಗಳು ಕಣ್ಣ ಮುಂದೆ ನಲಿದಾದೀತು.