Click here to Download MyLang App

ಶಿವಪ್ರಕಾಶ ಎಚ್ ಎಸ್,  ಬತ್ತೀಸ್ ರಾಗ,   Shivaprakash H S,  Battisa Raaga,

ಬತ್ತೀಸರಾಗ : ಎಚ್ ಎಸ್ ಶಿವಪ್ರಕಾಶ್ ಅವರ ಆತ್ಮಚರಿತ್ರೆ (ಇಬುಕ್)

e-book

ಪಬ್ಲಿಶರ್
ಶಿವಪ್ರಕಾಶ ಎಚ್ ಎಸ್
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಸಂಕಥನ

Publisher: Sankathana

 

ಇದು ನನ್ನ ಆತ್ಮಚರಿತೆಯಲ್ಲ. ನನ್ನ ಬದುಕಿನುದ್ದಕೂ ಬಹಳಷ್ಟು ನೋವುಗಳನ್ನ ಉಣ್ಣುತ್ತಾ ಬಂದಿದ್ದರಿಂದ ಆತ್ಮಚರಿತ್ರೆ ಬರೆಯುವ ಪ್ರಯತ್ನ ಮಾಡಲಿಲ್ಲ. ಓದುಗರಿಗೆ ನನ್ನ ಸಂಕಟದ ಬದುಕಿನ ಕತೆಯನ್ನು ಹೇಳಲು ಇಚ್ಚಿಸುವುದಿಲ್ಲ. ನನ್ನ ಕಾವ್ಯ ಮತ್ತು ನಾಟಕಗಳಲ್ಲಿ ನನ್ನ ಬದುಕಿನ ವಿವರಗಳು ಕಾಣದಂತೆ ಮರೆಮಾಡಲು ಸದಾ ಪ್ರಯತ್ನಿಸಿದ್ದೇನೆ, ಅದೂ ಈ ಎಲ್ಲ ಕೃತಿಗಳೊಂದಿಗೆ ಭಾವನಾತ್ಮಕವಾದ ಅನುಭವಗಳನ್ನು ಇಟ್ಟುಕೊಂಡು ಕೂಡ. ಉಳಿದಂತೆ ಸೃಜನಶೀಲ ಬರಹವು ನಮ್ಮ ಬದುಕಿನ ಕಥೆಯಿಂದ ತಪ್ಪಿಸಿಕೊಳ್ಳುವ ದಾರಿಯೆಂದು ಬಗೆದಿದ್ದೇನೆ ಹೊರತು ಅದ್ರ ವಿಸ್ತರಣೆ ಎಂದಲ್ಲ.

ಈ ಪುಸ್ತಕದಲ್ಲಿ ನೀವು ಓದಲಿರುವುದು ನನ್ನ ಆಧ್ಯಾತ್ಮ ವರ್ತುಲದ ಹಲವು ಹಂತಗಳಲ್ಲಿ ಮುಖಾಮುಖಿಗೊಂಡ ಅನುಭವಗಳ ಒಂದು ಮೊತ್ತ. ಇಲ್ಲಿನ ಹಲವು ನೈಜ ಜೀವನಾನುಭವಗಳು ಒಂದು ಸೃಜನಶೀಲ ಬರಹದಂತೆ ಕಂಡವು. ಹಾಗಾಗಿಯೇ ಈ ಕುರಿತು ಬರೆಯಲು ನಿರ್ಧಿರಿಸಿದೆ. ಹಾಗೆಯೇ ನನ್ನ ಬದುಕಿನಲ್ಲಿ ಕಂಡುಕೊಂಡ ಆಧ್ಯಾತ್ಮಿಕ ಅನುಭವಗಳನ್ನು ಹಂಚಿಕೊಳುವುದು ಕೂಡ ಬರೆಯುವುದರ ಒಂದು ಕಾರಣವಾಗಿತ್ತು.

ಬತ್ತೀಸರಾಗದ ಮೊದಲ ಆವೃತ್ತಿ ಪ್ರಕಟಗೊಂಡಾಗ ತುಂಬಾ ಜನಪ್ರಿಯವಾಗಿತ್ತು. ಪುಸ್ತಕದ ಪ್ರತಿಗಳು ವರುಷದೊಳಗೆ ಸಾವಿರಾರು ಮಾರಾಟಗೊಂಡವು. ಹಾಗೆಯೇ ನನ್ನನ್ನು ವಿಚಾರವಾದಿ ಮತ್ತು ಪ್ರಗತಿಪರತೆಯ ಪ್ರಭೆಯಲ್ಲಿ ಚಿತ್ರಿಸಿಕೊಂಡಿದ್ದ, ನನ್ನ ಬಹುತೇಕ ಕಾವ್ಯ ಮತ್ತು ನಾಟಕದ ಓದುಗರಿಗೆ ಇದು ಆಶ್ಚರ್ಯವನ್ನುಂಟುಮಾಡಿತ್ತು. ಆದರೆ ಈ ಪುಸ್ತಕವು ಸಾವಿರಾರು ಜನ ಓದುಗರಿಗೆ ಮತ್ತೊಂದು ಬಗೆಯ ಜೀವನದ ನಡಿಗೆಯನ್ನು ಕಾಣಿಸಿತ್ತು. ಈ ಕೃತಿಯನ್ನ ಮೆಚ್ಚಿ ಎಣಿಸಲಾರದಷ್ಟು ಸಂಖ್ಯೆಯ ಪತ್ರಗಳು ಮತ್ತು ಪ್ರಶ್ನೆಗಳು ಹೊಸ ಓದುಗರಿಂದ ಬರತೊಡಗಿದವು. ಅದರಲ್ಲಿ ಹಲವು ಜನರಂತೂ ವೈಯುಕ್ತಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳ ಕುರಿತಾಗಿ ಸಲಹೆ ಪಡೆಯಲು ಬಯಸಿದ್ದರು. ನನ್ನಷ್ಟಕ್ಕೆ ನಾನೇ ‘ಗುರು’ ಎಂದುಕೊಳ್ಳುವ ಅಹಮ್ಮಿನ ಪಾತ್ರವಹಿಸದೇ, ಅವರಿಗೆಲ್ಲಾ ನನ್ನಿಂದಾಗುವ ಸಲಹೆ-ಸಹಾಯಗಳನ್ನು ಮಾಡಿದೆ.

ಈ ಪುಸ್ತಕವು ಯಾವುದೇ ಸಾಧಕರ ಬದುಕು ಮತ್ತು ನಡೆಗಳ ಕುರಿತ ಸಂಪೂರ್ಣ ಅಥವಾ ವಿವರಣಾತ್ಮಕವಾದ ಶೋಧನೆಯಲ್ಲ. ಹಾಗೆಯೆ ಒಬ್ಬನೇ ಗುರುವಿನದೂ ಕಥೆಯೂ ಅಲ್ಲ. ಕೆಲವರ ಅದೃಷ್ಟ ಒಬ್ಬನೇ ಗುರುವಿನಲ್ಲಿ ಎಲ್ಲವನ್ನೂ ಕಂಡುಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಈ ಒಬ್ಬನೇ ಗುರುವಿನ ಥಿಯರಿ ಫಲಿಸದು. ಶ್ರೀರಾಮಕೃಷ್ಣ ಮತ್ತು ರಾಮ್ ಸೂರತ್ ಕುಮಾರ್ ಅವರಿಗೆ ಒಬ್ಬರಿಗಿಂತ ಹೆಚ್ಚು ಗುರುಗಳು ಇದ್ದರು. ಹಾಗೆಯೆ ಅಭಿನವ ಗುಪ್ತನಿಗೂ. ಕೆಲವು ಮಹಾಗುರುಗಳಿಗೆ ಅಂದರೆ ಅಮ್ಮ (ಮಾತಾ ಅಮೃತಾನಂದಮಯಿ) ಅಂತಹವರಿಗೆ ಮಾನುಷ ರೂಪದ ಗುರುವಿನ ಅಗತ್ಯವೇ ಕಂಡುಬರುವುದಿಲ್ಲ. ನನ್ನ ಬದುಕಿನಲ್ಲಿ ಹಲವು ಗುರುಗಳಿದ್ದರು. ನಾನು ದಡ್ಡನಾಗಿದ್ದುದರಿಂದಲೋ, ಸರಿಯಾಗಿ ಒಬ್ಬರಲ್ಲಿ ಕಲಿಯಲು ಸಾಧ್ಯವಾಗದೇ ಇದ್ದುದರಿಂದಲೋ ಏನೋ ಬಹುಶಃ ನನಗೆ ಹಲವು ಗುರುವರ್ಯರು ಬೇಕಾಯಿತು.

ಹಲವು ಸಾಧಕರ ಬಗ್ಗೆ ನಾನು ಬೇರೆ ಬೇರೆಯಾಗಿ ಮಾತಾಡುತ್ತಿರುವುದನ್ನು ಬಿಟ್ಟು ನೋಡಿದರೆ, ಈ ಎಲ್ಲಾ ಗುರುಗಳ ಮತ್ತು ದಾರಿಗಳ ಹಿಂದೆ ಅಡಗಿಕೊಂಡ ಒಂದು ಏಕತೆ ಇದೆ. ಅದೇ ಈ ಪುಸ್ತಕ ತಿರುಳು.

 

-ಎಚ್ ಎಸ್ ಶಿವಪ್ರಕಾಶ್

 

 

ಪುಟಗಳು: 134

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)