Click here to Download MyLang App

ವಿಶ್ವ ಕುಂದಾಪುರ,  ಭಾರತವನ್ನು ಕುರಿತು ಮಾರ್ಕ್ಸ್,    ಕಾರ್ಲ್ ಮಾರ್ಕ್ಸ್,  Vishwa Kundapura,    Karl Marx,  Bharatavannu Kuritu Marx,

ಭಾರತವನ್ನು ಕುರಿತು ಮಾರ್ಕ್ಸ್ (ಮಾರ್ಕ್ಸ್ ೨೦೦ - ಕ್ಯಾಪಿಟಲ್ ೧೫೦ ಮಾಲಿಕೆ) (ಇಬುಕ್)

e-book

ಪಬ್ಲಿಶರ್
ವಿಶ್ವ ಕುಂದಾಪುರ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:


ಕಾರ್ಲ್ ಮಾರ್ಕ್ಸ್

ಕನ್ನಡಕ್ಕೆ: ವಿಶ್ವ ಕುಂದಾಪುರ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮಾರ್ಕ್ಸ್‌ನ ಭಾರತ ಕುರಿತ ಆಸಕ್ತಿ ಅವನಿಗಿದ್ದದ್ದು ನಮ್ಮ ನಾಡನ್ನು ಕುರಿತು ಭಾವುಕತೆಯ ಅಪಾರ ಪ್ರೇಮಪ್ರೀತಿ ಅಂತ ಏನೂ ಅಲ್ಲ. ಅವನು ಒಬ್ಬ ಆಸಕ್ತ ವಿದ್ವಾಂಸ. ಅವನು ತನ್ನನ್ನು ತೊಡಗಿಸಿಕೊಂಡಿದ್ದ ‘‘ಬಂಡವಾಳ’’ ಕುರಿತ ಸಂಶೋಧನೆಯ ಭಾಗವಾಗಿ ಭಾರತದ ಆರ್ಥಿಕ ಸಾಮಾಜಿಕ ಸಂರಚನೆಯ ಅಭ್ಯಾಸದಲ್ಲಿ ಅವನ ಆಸಕ್ತಿ. ಅದರಿಂದಲೇ ಭಾರತ ಕುರಿತು ಅವನು ಪ್ರಾಸಂಗಿಕವಾಗಿ ವ್ಯಕ್ತಪಡಿಸುವ ವಿಚಾರಗಳೂ ವಸ್ತುನಿಷ್ಠವಾಗಿ ಇಂದಿಗೂ ನಾವು ಗಮನಿಸಬೇಕಾಗುತ್ತದೆ.

ಮಾರ್ಕ್ಸ್ ೧೮೫೩ರಲ್ಲಿ ಭಾರತ ಕುರಿತು ಅಮೆರಿಕದ ಪತ್ರಿಕೆಗೆ ಬರೆಯುತ್ತಿದ್ದಾಗಲೇ ಭಾರತದಿಂದ ಅಂದಿನ ಪ್ರಾದೇಶಿಕ ಅಧಿಕಾರ ಕೇಂದ್ರಗಳಾಗಿದ್ದ ಕಲ್ಕತ್ತ, ಬೊಂಬಾಯಿ ಮತ್ತು ಮದರಾಸು ಪ್ರೆಸಿಡೆನ್ಸಿಯ ಮೂವರು ಮುಂದಾಳುಗಳ ನೇತೃತ್ವದಲ್ಲಿ ಮೂರು ನಿಯೋಗಗಳು ಲಂಡನ್ನಿನಲ್ಲಿ ಬೀಡುಬಿಟ್ಟಿದ್ದವು: ಬ್ರಿಟನ್ನಿನ ನಾಯಕರುಗಳನ್ನು ಸಂಧಿಸಿ ತಮ್ಮ ತಮ್ಮ ಅಹವಾಲುಗಳನ್ನು ಸಮರ್ಪಿಸಲು. ಆಗ ಅಲ್ಲಿಯ ಪಾರ್ಲಿಮೆಂಟಲ್ಲಿ ‘ಇಂಡಿಯಾ ಬಿಲ್’ ಎಂಬ ಹೆಸರಿನ ಮಸೂದೆ ಚರ್ಚಿಸಲ್ಪಡುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯ ಆಧಿಪತ್ಯ ಕೊನೆಗಾಣಿಸಿ ಬ್ರಿಟಿಷ್ ಸರ್ಕಾರ ನೇರ ಆಳುವ ತೀರ್ಮಾನ ಕುರಿತ ಚರ್ಚೆ. ಮಾರ್ಕ್ಸ್ ಬಯಸಿದ್ದರೆ ಈ ಸಮಿತಿಯ ಸದಸ್ಯರನ್ನು ಸಂಧಿಸಿ ಭಾರತ ಕುರಿತಂತೆ ನೇರ ಮಾಹಿತಿಗಳನ್ನು ಸಂಗ್ರಹಿಸಬಹುದಿತ್ತು. ಒಬ್ಬ ಪತ್ರಕರ್ತನಾಗಿ ಅದೇಕೆ ಅವನು ಹಾಗೆ ಮಾಡಲಿಲ್ಲವೋ ತಿಳಿಯದು. ಮೂಲತಃ ಬ್ರಿಟಿಷ್ ಆಳ್ವಿಕೆ ಭಾರತವನ್ನು ಆಧುನಿಕ ಮಾಡುತ್ತದೆ ಎಂಬ ವಿಶ್ವಾಸ ಅವನಿಗೆ ಇತ್ತು. ಸುಧಾರಣೆಗಳನ್ನು ಯಾಚಿಸುವ ಈ ನಿಯೋಗಗಳ ಬಗ್ಗೆ ಅವನಿಗೆ ಆಸಕ್ತಿ ಉಂಟಾಗದಿರಬಹುದು.

ಭಾರತದಂಥ ಹಿಂದುಳಿದ ಅರ್ಥವ್ಯವಸ್ಥೆಯ ಅಂದರೆ ಬಂಡವಾಳ ಪೂರ್ವ ಮಾದರಿಯ ವ್ಯವಸ್ಥೆಗಳು, ಈ ಕೈಗಾರಿಕಾ ಕ್ರಾಂತಿಯ ಮೂಲಕ ಆಧುನಿಕ ಬಂಡವಾಳ ವ್ಯವಸ್ಥೆಯಾಗಿ ಮಾರ್ಪಾಡಾಗದೇ, ತದ್ವಿರುದ್ಧವಾಗಿ, ಸಾಮ್ರಾಜ್ಯಶಾಹಿಗಳ ಸಂಪರ್ಕವು ಅವಕ್ಕೆ ಆಧುನಿಕತೆಯನ್ನು ತರಲಿಲ್ಲ. ಅದು ಆಗಬೇಕಾದರೆ ವಸಾಹತುಶಾಹಿಯನ್ನು ಕಿತ್ತೆಸೆದು ಸ್ವತಂತ್ರ ಸರ್ಕಾರಗಳನ್ನು ರಚಿಸಿಕೊಳ್ಳಬೇಕೆಂಬ ತಿಳಿವು ಈ ಲೇಖನಗಳಲ್ಲಿ ಕಂಡುಬರುವುದು ಅವುಗಳ ವಿಶೇಷ ಕೊಡುಗೆ. ಇನ್ನೇನು ೧೮೫೭ರಲ್ಲಿ ಬರಲಿರುವ ದಂಗೆಯ ಇಣುಕು ಈ ಲೇಖನಗಳಲ್ಲಿ ದೊರೆಯುತ್ತದೆ.

 

ಪುಟಗಳು: 256

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !