Click here to Download MyLang App

ಭಗತ್ ಸಿಂಗ್ : ಇಂಕ್ವಿಲಾಬ್ ಜಿಂದಾಬಾದ್ ಆಯ್ದ ಬರಹಗಳು ಮತ್ತು ಭಾಷಣಗಳು,   ಜ್ಯೋತಿ ಎ,  Jyothi A,  Bhagath Singh Inquilab Zindabad,  bagatsing,  bagat singh,  bagat singah,  bagat sing,

ಭಗತ್ ಸಿಂಗ್ : ಇಂಕ್ವಿಲಾಬ್ ಜಿಂದಾಬಾದ್ ಆಯ್ದ ಬರಹಗಳು ಮತ್ತು ಭಾಷಣಗಳು (ಇಬುಕ್)

e-book

ಪಬ್ಲಿಶರ್
ಜ್ಯೋತಿ. ಎ
ಮಾಮೂಲು ಬೆಲೆ
Rs. 95.00
ಸೇಲ್ ಬೆಲೆ
Rs. 95.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

ಭಗತ್ ಸಿಂಗ್‍ನ ಜೀವನ ಮತ್ತು ಚಿಂತನೆ ಕುರಿತಂತೆ ನಮ್ಮಲ್ಲಿ ಹಲವು ಪ್ರಕಟಿತ ಗ್ರಂಥಗಳಿವೆ. ಆದರೆ ಎ. ಜ್ಯೋತಿ ಅವರು ಸಂಗ್ರಹ ಮಾಡಿರುವ ಭಗತ್ ಸಿಂಗ್‍ನ ಬರಹಗಳು ಮೌಲಿಕವಾಗಿವೆ ಮತ್ತು ಅವು ಪರಿಚಿತವೇ ಆಗಿದ್ದರೂ ಅವೆಲ್ಲಾ ಒಂದೆಡೆ ದೊರಕುವಂತಾಗಿರುವುದು ಸ್ವಾಗತಾರ್ಹ. ನೇಣುಗಂಬಕ್ಕೇರುವ ಕೆಲವೇ ದಿನಗಳ ಮುನ್ನ ಭಗತ್ ಸಿಂಗ್ ëëಯುವ ರಾಜಕೀಯ ಕಾರ್ಯಕರ್ತರಿಗೆíí ಆತ್ಮೀಯವಾಗಿ ಸುದೀರ್ಘವಾದ ವಿಶ್ಲೇಷಣಾತ್ಮಕ ಪತ್ರವೊಂದನ್ನು ಬರೆದಿದ್ದ. ಅದನ್ನು ಪದೇ ಪದೇ ನಾವು ಮನನ ಮಾಡಿಕೊಳ್ಳುವ ಅಗತ್ಯವಿದೆ. ಆಗಿನ್ನೂ ಅವನು ತನ್ನ 24ನೇ ವಯಸ್ಸಿಗೆ ಪ್ರವೇಶಿಸಿದ್ದ. ಆ ವಯಸ್ಸಿನಲ್ಲಿ ಗಾಂಧೀಜಿ ಭಾರತದ ಸ್ವಾತಂತ್ರ್ಯದ ಬಗ್ಗೆ ಇನ್ನೂ ಗಂಭೀರವಾದ ಯೋಚನೆಯನ್ನೂ ಮಾಡಿರಲಿಲ್ಲ; ಲೆನಿನ್ ತನ್ನ ಕ್ರಾಂತಿಕಾರಿ ಸಮಾಜವಾದಿ ಪಕ್ಷದ (ಆರ್‍ಎಸ್‍ಡಿಎಲ್‍ಪಿ) ಸಂರಚನೆಯಲ್ಲಿ ತೊಡಗಿದ್ದನು. 1931ರ ಆದಿಭಾಗದಲ್ಲಿ ಭಾರತದ ರಾಜಕೀಯ ರಂಗ ಹೇಗಿದ್ದಿತು, ಎತ್ತ ಸಾಗುತ್ತಿತ್ತು, ಮುಂದೆ ಹೇಗೆ ಸಾಗಬೇಕು, ಇತ್ಯಾದಿಗಳನ್ನು ಕುರಿತಂತೆ ಭಗತ್ ಸಿಂಗ್ ಅನನ್ಯವಾದ ವಿಶ್ಲೇಷಣೆ ನೀಡಿದ್ದಾನೆ, ರಷ್ಯಾದ ಸಂದರ್ಭದೊಡನೆ ತುಲನೆ ಮಾಡಿ ಪರಿಪಕ್ವವಾದ ಸೈದ್ಧಾಂತಿಕ ತತ್ತ್ವಗಳನ್ನು ನಿರೂಪಿಸಿದ್ದಾನೆ. ಭಗತ್ ಸಿಂಗ್‍ನ ರಾಜಕೀಯ ಒಲವುಗಳನ್ನು ಸ್ಪಷ್ಟವಾಗಿ ತಿಳಿಯಲು ಮತ್ತು ಸಮಕಾಲೀನ ಸನ್ನಿವೇಶದಲ್ಲಿ ವಿಶ್ಲೇಷಣೆಗಳನ್ನು ಮಾಡಿಕೊಳ್ಳಲು ಉತ್ಕೃಷ್ಟವಾದ ಸಾಮಗ್ರಿ ಇಲ್ಲಿದೆ. ಕಾಂಗ್ರೆಸ್ ಪಕ್ಷವು ರೈತ-ಕಾರ್ಮಿಕ ವಿಭಾಗಗಳ ಸಂಘಟನೆಗೆ ಏಕೆ ಆದ್ಯತೆ ನೀಡುವುದಿಲ್ಲವೆಂಬುದನ್ನು ಭಗತ್ ಸಿಂಗ್ ಬರ್ಡೋಲಿ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಚರ್ಚಿಸಿರುವುದು ಒಂದು ರೀತಿಯ ಮಾರ್ಗದರ್ಶಿ ಸೂತ್ರವಾಗಿ ಹೊಮ್ಮಿದೆ. ಆಗ್ಗೆ ಕಮ್ಯುನಿಸ್ಟ್ ಪಕ್ಷವು ಪ್ರಬಲವಾಗೇನೂ ಬೆಳೆದಿರಲಿಲ್ಲವಾದರೂ ವಸಾಹತು ಸರ್ಕಾರವು ಇಪ್ಪತ್ತಕ್ಕೂ ಹೆಚ್ಚು ನಾಯಕರನ್ನು ಬಂಧಿಸಿ ಮೀರತ್ ಕಾರಾಗೃಹದಲ್ಲಿ ಇರಿಸಿತ್ತು. ರೈತ-ಕಾರ್ಮಿಕ ಸಂಘಟನೆಯು ವಿಸ್ತರಿಸದಂತೆ ಮಾಡುವ ಹುನ್ನಾರ ಅದರ ಹಿಂದಿತ್ತೆಂದು ಭಗತ್ ಸಿಂಗ್ ಗುರುತಿಸಿದ್ದಾನೆ. ತನ್ನ 18ನೆಯ ವಯಸ್ಸಿನಲ್ಲಿ ಅವನು ಬಂಗಾ ಎಂಬ ಸ್ವಗ್ರಾಮದಲ್ಲಿ ಬ್ರಿಟಿಷರು ನಿಷೇಧಿಸಿದ್ದ ರೈತರ ಜಾಥಾಕ್ಕೆ ಸ್ವಾಗತ ನೀಡಿ ಎರಡು ದಿನ ಉಪಚಾರ ಮಾಡಿದ್ದವನು. ಅಂಥವನು ದುಡಿಯುವ ಜನರ ಸಿದ್ಧಾಂತಿ ಮತ್ತು ಮಾರ್ಗದರ್ಶಿ ಆಗಿರುವುದು ಸಂತಸದ ವಿಷಯ. ನಾವೆಲ್ಲಾ ಈ ಬರಹವನ್ನು ಸೂಕ್ಷ್ಮವಾಗಿ ಓದಿ ಗ್ರಹಿಸಬೇಕು, ಸಮಕಾಲೀನ ಸನ್ನಿವೇಶಗಳಿಗೆ ಅನ್ವಯಿಸಿ ಕ್ರಿಯಾಶೀಲರಾಗಬೇಕು.

ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರೆಂದು ಮನ್ನಣೆ ನೀಡುತ್ತಲೇ ಅವರನ್ನು ಭಯೋತ್ಪಾದಕರೆಂದು ಕರೆಯುವ ರೂಢಿಯೊಂದಿದೆ. ಬ್ರಿಟಿಷರೇ ಆ ಅಂಕಿತ ನೀಡಿದ್ದವರು. ಯುವಕರಿಗೆ ನೀಡಿದ ಸಂದೇಶದಲ್ಲಿ ಅದನ್ನು ಕುರಿತು ವಿವರಣೆಯನ್ನು ನೀಡಿರುವ ಭಗತ್ ತಾನೆಂದೂ ಭಯೋತ್ಪಾದಕನಲ್ಲವೆಂದು ಸಮಜಾಯಿಷಿ ನೀಡಿದ್ದಾನೆ. ಇಂದಿನ ನಮ್ಮ ಸಂದರ್ಭ ಹೇಗಿದೆಯೆಂದರೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ವಿರೋಧಿಸಿದರೂ ರಾಷ್ಟ್ರದ್ರೋಹದ ಆಪಾದನೆ ಹೊರಿಸಿಬಿಡುತ್ತಾರೆ. ಸುಳ್ಳುಸುಳ್ಳೇ ಪಾಕಿಸ್ತಾನದ ಪರ ಘೋಷಣೆ ಕೂಗಿದರೆಂದು ಕೆಲವರ ಮೇಲೆ ಆಪಾದನೆ ಮಾಡಲಾಗಿದೆ; ಅಂತಹ ಹುರುಳಿಲ್ಲದ ಆಪಾದನೆ ಮಾಡುವವರ ಸಾಂಸ್ಕೃತಿಕ ಸೈನ್ಯದ ಕಟ್ಟಾಳುಗಳು ಮೆರವಣಿಗೆಗಳಲ್ಲಿ ಬೆರೆತು ಅಂತಹ ಘೋಷಣೆ ಕೂಗಿ ಇತರರನ್ನು ಬಂಧನಕ್ಕೆ ಸಿಲುಕಿಸಿರುವುದೂ ಉಂಟು. ಅಂತಹ ಸಂದರ್ಭಗಳಲ್ಲಿ ಭಗತ್ ಸಿಂಗ್ ನಮಗೆ ಸಾಂತ್ವನ ನೀಡಬಲ್ಲ.

 

-ಜಿ. ರಾಮಕೃಷ್ಣ

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)