ಒಂದು ತಿಂಗಳ ಹಿಂದೆ ನಾವು ಮೈಲ್ಯಾಂಗ್ ಸಕತ್ ಕತೆ ಸ್ಪರ್ಧೆಯನ್ನು ಏರ್ಪಡಿಸಿ ಕತೆಗಳನ್ನು ಆಹ್ವಾನಿಸಿದಾಗ ನಮಗೆ ಇಷ್ಟು ಸಂಖ್ಯೆಯಲ್ಲಿ ಇಷ್ಟು ಗುಣಮಟ್ಟದ ಕತೆಗಳು ಬರುತ್ತವೆಂದು ನಾವು ಖಂಡಿತ ಎಣಿಸಿರಲಿಲ್ಲ. ಇನ್ನೂರಕ್ಕೂ ಹೆಚ್ಚು ಕತೆಗಳು ಈ ಸ್ಪರ್ಧೆಗೆ ಹರಿದು ಬಂದಿವೆ. ಕೆಲವು ಕತೆಗಾರರು ಮೈಲ್ಯಾಂಗ್ ಓದುಗರಿಗೆ ಈಗಾಗಲೇ ಪರಿಚಯವಿರುವವರೂ ಇದ್ದಾರೆ. ಆದರೆ ಬಹುಪಾಲು ಸ್ಪರ್ಧಾಳುಗಳು ಮೈಲ್ಯಾಂಗ್ ಲೇಖಕರ ಪ್ರಪಂಚಕ್ಕೆ ಹೊಸಬರು. ಇದು ತುಂಬ ಸಂತೋಷದ ವಿಚಾರ!
ಕತೆಗಳು ಕರ್ನಾಟಕದ ಮೂಲೆ ಮೂಲೆಗಳಿಂದ ಬಂದಿವೆ. ಕತೆ ಬರೆದು ಕಳಿಸಿದವರಲ್ಲಿ ದೊಡ್ಡ ಎಣಿಕೆಯಲ್ಲಿ ಬರಹಗಾರ್ತಿಯರೂ ಇದ್ದಾರೆ. ಕತೆಗಳ ವಸ್ತು ವೈವಿಧ್ಯವಂತೂ ನಮ್ಮನ್ನು ದಂಗು ಬಡಿಸಿದೆ. ಕತೆಗಳ ಒಟ್ಟಾರೆ ಗುಣಮಟ್ಟ ತುಂಬ ಪ್ರೋತ್ಸಾಹದಾಯಕವಾಗಿದೆ. ನಮ್ಮ ಕನ್ನಡದ ಕತೆಗಾರರ ಸ್ಪಂದನೆಯ ಆಳ/ಅಗಲಗಳು , ಸಂವೇದನೆಯ ಸೂಕ್ಷ್ಮತೆಗಳೂ ಬೆರಗುಗೊಳಿಸುವಂತಿವೆ.
-ಮೈಲ್ಯಾಂಗ್ ಸಂಪಾದಕರು
ಮೊದಲ ಬಹುಮಾನ ಪಡೆದ ಕತೆ:
ಬೆಳಗಾವಿಯ ಬಸವಣ್ಣೆಪ್ಪ ಕಂಬಾರ್ ಅವರ "ಡಬಲ್ ಪನ್ನ ಧೋತ್ರ. ಒಂದು ಚಸ್ಮಾ"
ಎರಡನೆಯ ಬಹುಮಾನ ಪಡೆದ ಎರಡು ಕತೆಗಳು:
1. ಕೊಪ್ಪದ ಸಂಪತ್ ಸಿರಿಮನೆ - ಪದಬಂಧ
2. ಬೆಂಗಳೂರಿನ ಗುರುರಾಜ ಕುಲಕರ್ಣಿ - ಗಂಡಬಿದಿರು ಎಂಬ ಧರ್ಮದಂಡ
ಮೂರನೆಯ ಬಹುಮಾನ ಪಡೆದ ಎರಡು ಕತೆಗಳು:
1. ಬೀದರಿನ ಕಪಿಲ ಪಿ ಹುಮನಾಬಾದೆ - ಸಂತೆಯೊಳಗಿನ ಗೂಡು
2. ಗೋರ್ಸಗದ್ದೆಯ ದೀಪ್ತಿ ವಿ. ಹೆಗಡೆ - ಕರಣೇಷು ಮಂತ್ರಿ
ಮೆಚ್ಚುಗೆ ಗಳಿಸಿದ 11 ಕತೆಗಳು:
1. ಬೆಂಗಳೂರಿನ ಸಚಿನ್ ಎಚ್.ಎಸ್ - ಪ್ಲೀಸ್ ಎಂಟರ್ ಯುವರ್ ಪಿನ್
2. ಬೆಂಗಳೂರಿನ ಅಂಜನಾ ಹೆಗಡೆ - ಒಮಲ್ತಿ
3. ಮೈಸೂರಿನ ಸಂತೋಷ ತಾಮ್ರಪರ್ಣಿ - ಕೇಶಾರ್ಪಣಮಸ್ತು
4. ವಿಜಯಪುರದ ವಲವಿ ಹಿಟ್ನಳ್ಳಿ - ಅಂತರಂಗ ಬಹಿರಂಗಗಳ ತಿಕ್ಕಾಟ
5. ಸಾಗರದ ಅಕ್ಷಯ ಪಂಡಿತ - ಫ್ರೀ ವೇ..
6. ಸಿರಸಿಯ ಎಸ್.ಜಿ.ಅಕ್ಷಯ ಕುಮಾರ - ಕಾರ್ತೀಕ
7. ಜೋಗಿಬೆಟ್ಟುವಿನ ಮುಹಮ್ಮದ್ ಮುನವ್ವರ್ - ಚಿತ್ರಗಾರ
8. ಕುಮಟಾದ ಶುಭಶ್ರೀ ಭಟ್ - ನಿನ್ನಿರುವು ಪಾರಿಜಾತ
9. ಬೆಂಗಳೂರಿನ ಎನ್. ಧೀರೇಂದ್ರ - ಶ್ರೀ ಚೆನ್ನ ಕೇಶವ
10. ಬೆಂಗಳೂರಿನ ದಾದಾಪೀರ್ ಜೈಮನ್ - ನದಿ
11. ಗುಂಡಿಬೈಲಿನ ವಿಷ್ಣು ಭಟ್ ಹೊಸ್ಮನೆ - ನಿನ್ನೆಯಿಂದ ದೇವರಿಲ್ಲ
ಪುಟಗಳು: 140
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !