
ಪ್ರಕಾಶಕರು: ಅನುಗ್ರಹ ಪ್ರಕಾಶನ
Publisher: Anugraha Prakashana
ಬರೆದವರು:
ಅನುಷ್ ಶೆಟ್ಟಿ
ಪುಸ್ತಕ ಓದಿದ ಹಲವು ಗಣ್ಯರು ಏನೆಂದರು?
ಖ್ಯಾತ ವಿಜ್ಞಾನ ಸಂವಹನಕಾರ ಜಾನ್ ಗಿಬ್ರಿನ್ ಹೇಳುವಂತೆ, ಕಳೆದ ಶತಮಾನದ ಭೌತವಿಜ್ಞಾನ ಲೋಕದಲ್ಲಿ ಆದ ಬಹುದೊಡ್ಡ ಸಾಧನೆ ಎಂದರೆ ಅದು ಕ್ವಾಂಟಮ್ ಮೆಕ್ಯಾನಿಕ್ಸ್ನ ಬೆಳವಣಿಗೆ. ಸಾಮಾನ್ಯರ ಅರಿವಿಗೇ ಬಾರದಂತೆ, ಅವರ ಜೀವನವನ್ನ ಬದಲಿಸಿರುವ ವೈಜ್ಞಾನಿಕ ಸಿದ್ಧಾಂತವಿದು. ಒಂದೀಡಿ ಕೋಣೆಯನ್ನು ತುಂಬುತ್ತಿದ್ದ ಒಂದು ಕಂಪ್ಯೂಟರ್ ಇಂದು ನಮ್ಮ ಅಂಗೈ ಅಗಲವಾಗಿರುವುದರಲ್ಲಿ ಈ ಸಿದ್ಧಾಂತದ ಕೊಡುಗೆ ಸಾಕಷ್ಟಿದೆ ಎಂದರೆ ಅದರ ಆಳ ಅರಿವಾದೀತು.
ವಿಜ್ಞಾನದ ಇತರ ವಿಭಾಗಗಳಿಗೆ ಹೋಲಿಸಿದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಇನ್ನೂ ಬೆಳವಣಿಗೆ ಕಾಣುತ್ತಿರುವ ಒಂದು ವಿಭಾಗ. ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದರೂ ಸದಾ ಕುತೂಹಲ ತುಂಬುವ ವಿಷಯವಿದು. ಪ್ರಾಯೋಗಿಕವಾಗಿ ಇನ್ನೂ ಸಾಧ್ಯವಾಗಿರದಿದ್ದರೂ, ಸೈದ್ಧಾಂತಿಕವಾಗಿ ಸಾಧ್ಯ ಎಂದು ವಾದಿಸಬಲ್ಲ ಹಲವು ವಿದ್ಯಾಮಾನಗಳನ್ನು (phenomenons) ಕ್ವಾಂಟಮ್ ಮೆಕ್ಯಾನಿಕ್ಸ್ ಮುನ್ನೆಲೆಗೆ ತರುತ್ತದೆ. ಅಂಥವುಗಳಲ್ಲಿ parallel universe ಹಾಗೂ time travel ಪ್ರಮುಖವಾದಂತವು.
ಅನುಷ್ ಶೆಟ್ಟಿ ಅವರ 'ನೀನು ನಿನ್ನೊಳಗೆ ಖೈದಿ' ಕೃತಿಯು ಇಂತಹ ವಿದ್ಯಾಮಾನಗಳನ್ನು ಆಧಾರವಾಗಿರಿಸಿಕೊಂಡು ರಚಿತವಾಗಿರುವ ಒಂದು sci-fi ಕಾದಂಬರಿ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಕೃತಿ ಎಂದು ಹೇಳಿದರೆ ಖಂಡಿತ ತಪ್ಪಾಗಲಿಕ್ಕಿಲ್ಲ. ಅಲ್ಲದೇ,ಅತ್ಯಂತ ವಿಶಿಷ್ಟವಾದ ವಸ್ತುವನ್ನು ಆಯ್ದುಕೊಂಡು, ಅಷ್ಟೇ ವಿಶಿಷ್ಟವಾದ ಕತೆಯನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಕೇವಲ ಕಾದಂಬರಿಯ ವಸ್ತುವಿನ ವಿಚಾರದಲ್ಲಷ್ಟೇ ಅಲ್ಲದೇ, ನಿರೂಪಣೆಯಲ್ಲಿಯೂ ಈ ಕೃತಿ ಹೊಸತನ ತೋರುತ್ತದೆ. ಖೈದಿಯ ಡೈರಿಯ ಪುಟಗಳನ್ನು ಯಥಾವತ್ತಾಗಿ ಮುದ್ರಿಸುವ ಪ್ರಯತ್ನ ಹಾಗೂ ಕಾದಂಬರಿಯ ಅಂತಿಮ ಭಾಗದ ನಿರೂಪಣೆ ಓದುಗನಿಗೆ ಒಂದು ಹೊಸ ಅನುಭವ ನೀಡುವಲ್ಲಿ ಯಶಸ್ವಿಯಾಗುತ್ತವೆ. ಒಂದೇ ಗುಟುಕಿನಲ್ಲಿ ಓದಿ ಮುಗಿಸಲು ಬೇಕಾದ ಎಲ್ಲ ಅರ್ಹತೆಗಳನ್ನೂ ಈ ಕೃತಿ ಹೊಂದಿದೆ.
ಈ ಕೃತಿ ಕೆಲವರಿಗೆ ಒಂದೇ ಓದಿಗೆ ಅತ್ಯಂತ ಇಷ್ಟವಾಗಿ ಮತ್ತೆ ಓದುವ ಹಂಬಲ ಮೂಡಬಹುದು. ಕೆಲವು ಭಾಗಗಳಲ್ಲಿ, ಕೆಲವರಿಗೆ ಈ ಕೃತಿ ಸಂಕೀರ್ಣವೂ ಎನ್ನಿಸಬಹುದು. ಈ ಎರಡು ಸಂದರ್ಭಗಳಿಗೂ ಖೈದಿಯ ಡೈರಿಯ ಈ ಸಾಲು ಉತ್ತರವಾಗಬಹುದು- "ಪದೇ ಪದೇ ಓದಿದ ಸಾಲನ್ನೇ ಓದುತಿರಬಹುದು."
-Vishwas Solagi
ಕೃಪೆ
https://www.goodreads.com/book/show/40239180-neenu-ninnolage-khaidi
ಪುಟಗಳು: 240