
ಇದು ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ನಾಲ್ಕನೇ ಸಂಪುಟ. ಇದರಲ್ಲಿ ನಾಲ್ಕು ಕಾದಂಬರಿಗಳಿದ್ದು ಇವು ಒಟ್ಟು ೫೬೭ ಪುಟಗಳಲ್ಲಿ ವ್ಯಾಪಿಸಿಕೊಂಡಿವೆ. ಪ್ರತಿ ಕಾದಂಬರಿ ಸರಾಸರಿ ೧೩೫ ಪುಟಗಳಷ್ಟಿವೆ. ಅಂದರೆ - ಈ ಕಾದಂಬರಿಗಳ ಗಾತ್ರ ದೊಡ್ಡದೇನಲ್ಲ. ಈ ಎಲ್ಲ ಕಾದಂಬರಿಗಳೂ ಈ ಹಿಂದೆ ೧೯೯೫ ರಿಂದ ೨೦೦೨ರ ವರೆಗಿನ ಏಳು ವರ್ಷಗಳ ಅವಧಿಯಲ್ಲಿ ಪ್ರಕಟವಾಗಿವೆ. ಉಪ್ಪು, ತೊಟ್ಟಿ, ಪಂಥ ಮತ್ತು ಅರ್ಥ - ಇಲ್ಲಿರುವ ಕಾದಂಬರಿಗಳು. ಎಲ್ಲ ಎರಡಕ್ಷರದ ಕಾದಂಬರಿಗಳೇ ಈ ಕೊನೆಯ ಸಂಪುಟದಲ್ಲಿ ಸೇರಿರುವುದು ಒಂದು ಸ್ವಾರಸ್ಯಕರ ಯೋಗಾಯೋಗ.
ಪುಟಗಳು: 495
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !