
ಮೊಗಸಾಲೆಯವರ ಕಾದಂಬರಿ ‘ಕನಸಿನ ಬಳ್ಳಿ’. ಇಲ್ಲಿನ ಕಥಾನಾಯಕ ಸದಾನಂದ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ವೃತ್ತಿ ಮಾಡುತ್ತಿದ್ದವನು. ಇವನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ನರ್ಸ್ ಆಗಿದ್ದ ವಾಸಂತಿಯನ್ನು (ಆಕೆ ಎಳೆ ವಯಸ್ಸಿನ ವಿಧವೆ) ಮದುವೆಯಾಗಲು ಬಯಸಿ ತಾಯಿಯ ಒಪ್ಪಿಗೆ ಸಿಗದ ಕಾರಣಕ್ಕಾಗಿ ಬೇಸರಗೊಂಡು ನೌಕರಿ ಬಿಟ್ಟು ತನ್ನ ಪೂರ್ವಿಕರ ಹಳ್ಳಿಯಾದ ಕಾಸರಗೋಡು ಸಮೀಪದ ಕನ್ಯಾನಕ್ಕೆ ಬಂದು ಖಾಸಗಿ ಕ್ಲಿನಿಕ್ ಆರಂಭಿಸಿ ಅಲ್ಲಿಯೇ ಇರತೊಡಗುತ್ತಾನೆ. ತನ್ನ ತಂದೆ ನಿರ್ಲಕ್ಷಿಸಿ ಹೋಗಿದ್ದ ಕೃಷಿ ಜಮೀನನ್ನೂ ಅಭಿವೃದ್ಧಿಪಡಿಸುತ್ತಾ ಅದನ್ನು ಒಳ್ಳೆಯ ತೋಟವಾಗಿಸುತ್ತಾನೆ. ಕೊನೆಗೆ ತಂದೆ ತಾಯಿಯವರ ಒಪ್ಪಿಗೆ ದೊರಕಿಸಿಕೊಂಡು ವಾಸಂತಿಯನ್ನು ಭೇಟಿಯಾಗಿ ಮದುವೆಯ ದಿನ ನಿಶ್ಚಯಿಸಲೆಂದು ಮೈಸೂರಿಗೆ ಬಂದರೆ ಆಕೆ ಕೆಲವೇ ದಿನಗಳ ಹಿಂದೆ ಹೃದಯಾಘಾತದಿಂದ ತೀರಿಕೊಂಡಿದ್ದು ತಿಳಿಯುತ್ತದೆ.
ಪುಟಗಳು: 120
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !