Click here to Download MyLang App

ರಕ್ತಾಕ್ಷಿ,    ಕುವೆಂಪು,  Rakthakshi,  kuvempu,

ರಕ್ತಾಕ್ಷಿ (ಇಬುಕ್)

e-book

ಪಬ್ಲಿಶರ್
ಕುವೆಂಪು
ಮಾಮೂಲು ಬೆಲೆ
Rs. 69.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಕುವೆಂಪು ಅವರು ಷೇಕ್ಸ್ ಪಿಯರನ ಹ್ಯಾಮ್ಲ್ ಟ್ ನಾಟಕವನ್ನು ಮೂಲವಾಗಿ ಇರಿಸಿಕೊಂಡು ಈ ನಾಟಕವನ್ನು ಬರೆದಿದ್ದಾರೆ. ಬಿದನೂರಿನ ಸಂಸ್ಠಾನದ ಕಥೆಯನ್ನು ಇದಕ್ಕೆ ಅಳವಡಿಸಿಕೊಂಡಿದ್ದಾರೆ.ಹ್ಯಾಮ್ಲಟ್ ನಲ್ಲಿ ನಾಯಕ ಹ್ಯಾಮ್ಲ್ ಟ್ ಪ್ರಧಾನವಾಗಿದ್ದರೆ ಇಲ್ಲಿ ರುದ್ರಾಂಬೆಯ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ.

 

ಪುಟಗಳು: 80

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಸತ್ಯನಾರಾಯಣ ಬಿ.ಆರ್.‌
’ಎಂದೊ ಮನು ಬರೆದಿಟ್ಟುದು ಇಂದೆಮಗೆ ಕಟ್ಟೇನು?’

ಬಹುತ್ವವೆಂಬುದು ಚಲನಶೀಲ ಮನಸ್ಥಿತಿ: ಅದು ಜಡವಾಗಿರಲು ಸಾಧ್ಯವೇ ಇಲ್ಲ. ಈ ಜಗತ್ತಿನಲ್ಲಿ ನಿತ್ಯ ಲಕ್ಷಾಂತರ ಮಂದಿ ಹುಟ್ಟುತ್ತಾರೆ; ಸಾಯುತ್ತಾರೆ. ವಿಶಾಲವಾದ ಅರ್ಥದಲ್ಲಿ ಅಷ್ಟೊಂದು ಅಭಿಪ್ರಾಯಗಳು ಹುಟ್ಟುತ್ತವೆ; ಸಾಯುತ್ತವೆ ಎಂದುಕೊಳ್ಳಬಹುದು. ರಕ್ತಾಕ್ಷಿ ನಾಟಕದಲ್ಲಿ ಕೋಟೆಯ ಕಾವಲುಗಾರ ಕೆಂಚಣ್ಣನ ಪಾತ್ರ ಮತ್ತು ನಾಯಕ ಬಸವಯ್ಯನ ಸ್ನೇಹಿತನಾದ ಹೊನ್ನಯ್ಯನ ಪಾತ್ರದ ನಡುವೆ ನಡೆವ ಒಂದು ಸಂಭಾಷಣೆಯನ್ನು ಗಮನಿಸಬಹುದು. ಸಂದರ್ಭ, ಹಿಂದಿನ ರಾತ್ರಿ, ಗತಿಸಿದ ಮಹಾರಾಜ ಬಸಪ್ಪನಾಯಕನ ಪ್ರೇತಾತ್ಮವನ್ನು ಕೆಂಚಣ್ಣ ಕಂಡು, ಅದನ್ನು ಹೊನ್ನಯ್ಯನಿಗೆ ತಿಳಿಸಿರುತ್ತಾನೆ. ಅದನ್ನು ಖಚಿತಪಡಿಸಿಕೊಳ್ಳಲು ಹೊನ್ನಯ್ಯನೂ ರಾತ್ರಿ ಕಾವಲಿಗೆ ಬಂದಿರುತ್ತಾನೆ. ಆಗ ಅವರಿಬ್ಬರ ನಡುವೆ ನಡೆವ ಸಂಭಾಷಣೆ:
ಹೊನ್ನಯ್ಯ: ಮುನಿದುಕೊಳ್ಳಬೇಡ, ಕೆಂಚಣ್ಣ. ಒಂದೊಂದು ಸಾರಿ ನಮ್ಮ ಭಯ, ನಮ್ಮ ಭ್ರಾಂತಿ ಇವುಗಳಿಂದ ಹೀಗೆಲ್ಲ ಅದ್ಭುತರೂಪಗಳು ಕಾಣುವುದುಂಟು....
ಕೆಂಚಣ್ಣ: ಅಯ್ಯೋ, ಅದು ಕಾಣಿಸಿಕೊಳ್ಳುವುದಕ್ಕೆ ಮೊದಲು ನನಗೆ ನೀವು ಹೇಳಿದ್ದು ಯಾವುದೂ ಇರಲಿಲ್ಲ ಎಂದು ಆಣೆ ಇಟ್ಟು ಬೇಕಾದರೂ ಹೇಳುತ್ತೇನೆ.
ಹೊನ್ನಯ್ಯ: ನಿನಗೆ ಮಾತ್ರವೇ ಅಲ್ಲ. ಎಂಥೆಂಥವರಿಗೂ ಕಾಣುವುದುಂಟು. ವೇದಾಂತ ಓದಿದರೆ ನಿನಗೂ ತಿಳಿಯುವುದು ಇದೆಲ್ಲ.
ಕೆಂಚಣ್ಣ: ಏನೋ ಸ್ವಾಮಿ, ನಿಮ್ಮ ವೇದಾಂತದ ಕಣ್ಣಿಗೆ ನುಣುಚಿಕೊಂಡು ಇನ್ನೆಷ್ಟು ವೇದಾಂತಗಳಿವೆಯೋ ನಾನೇನು ಬಲ್ಲೆ!........
ಇಲ್ಲಿ, ’ನಾನೇನು ಬಲ್ಲೆ!’ ಎಂಬ ಕೆಂಚಣ್ಣನ ಮಾತನ್ನು ’ನಾವೇನು ಬಲ್ಲೆವು’ ಎಂದು ಎಲ್ಲರೂ ಕೇಳಿಕೊಳ್ಳಬೇಕಿದೆ. ಈ ಸೃಷ್ಟಿಯನ್ನು, ಪ್ರಕೃತಿಯನ್ನು ಮನುಕುಲ ಅರ್ಥಮಾಡಿಕೊಳ್ಳುವ ಪ್ರಕ್ರಿಯೆ ನಿತ್ಯ ನಿರಂತರ. ಅದಕ್ಕೆ ಮನುಕುಲದಷ್ಟೇ ಇತಿಹಾಸವಿದೆ. ಆದರೆ ಅರ್ಥಮಾಡಿಕೊಂಡಿರುವುದು ಎಷ್ಟು ಎಂದರೆ, ಶೇಕಡಾ ಒಂದು ಎಂದು ಹೇಳುವುದು ಕಷ್ಟ. ಅಂತಹುದರಲ್ಲಿ, ಒಂದು ಕಾಲಘಟದಲ್ಲಿ ರೂಪಿತಗೊಂಡ ಒಂದು ಅಭಿಪ್ರಾಯ, ಒಂದು ಮತ ಮಾತ್ರ ಸರಿ; ಇನ್ನೊಂದು ತಪ್ಪು ಎಂದು ವಾದಿಸುವುದಿದೆಯಲ್ಲ ಅದರಂತಹ ಮೂರ್ಖತನ ಇನ್ನೊಂದಿಲ್ಲ. ಈ ನಿಟ್ಟಿನಲ್ಲಿಯೇ ಕುವೆಂಪು ಪ್ರಶ್ನೆ ’ಎಂದೊ ಮನು ಬರೆದಿಟ್ಟುದು ಇಂದೆಮಗೆ ಕಟ್ಟೇನು?’