
ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ಆಡಿಯೋ ಪುಸ್ತಕದ ಅವಧಿ : 3 ಘಂಟೆ 55 ನಿಮಿಷ
ಕುವೆಂಪುರವರು ಹೆಚ್ಚು ಕಥೆಗಳನ್ನು ಬರೆದವರಲ್ಲ. ಅವರ ಎರಡೇ ಎರೆಡು ಕಥಾಸಂಕಲನಗಳು ಬಂದಿವೆ. ಒಂದು “ನನ್ನ ದೇವರು ಮತ್ತು ಇತರೆ ಕಥೆಗಳು”, ಮತ್ತೊಂದು “ಸನ್ಯಾಸಿ ಮತ್ತು ಇತರ ಕಥೆಗಳು”. ಎರೆಡೂ ಪುಸ್ತಕಗಳಿಂದ ಒಟ್ಟು ಹದಿನೇಳು ಕಥೆಗಳಿವೆ ಎಂದು ಎಣಿಸಿಡಬಹುದಷ್ಟೇ. ಆದರೆ ಅವರ ಸಣ್ಣ ಕಥೆಗಳನ್ನು ಓದುತ್ತಾ ಹೋದಂತೆ ಇವರು ಇನ್ನಷ್ಟು ಕಥೆಗಳನ್ನು ಬರೆಯಬೇಕಿತ್ತು ಎಂದು ಅನಿಸಲು ಶುರುವಾಯ್ತು ನನಗೆ.
ಅವರ ಕಥೆಗಳಲ್ಲಿ ಒಂದು ವೈವಿಧ್ಯತೆ ಇದೆ, ಉದಾರತೆ ಉದಾತ್ತತೆಯೂ ಇದೆ, ಒಂದು ಶೋಧನೆ ಇದೆ ಆತ್ಮಶೋಧನೆಯೂ ಇದೆ, ಸಮಾಜೋದ್ಧಾರ ಚಿಂತನೆಗಳಿವೆ, ಆ ಸಂದರ್ಭದ ಸಾಮಾಜಿಕ ಸಮಸ್ಯೆಗಳಿಗೆ ಹಿಡಿದ ಕನ್ನಡಿಯೂ ಇದೆ. ಆದರೆ ಆ ಹದಿನೇಳು ಕಥೆಗಳು ನಮಗೆ ಕೊಡುವ ಅನುಭವ ಅನನ್ಯ.
- ಆಶಾ ಜಗದೀಶ್, ಕೆಂಡಸಂಪಿಗೆ ವಿಮರ್ಶೆ
ಈಗ ಕೇಳಿ ನನ್ನ ದೇವರು ಮತ್ತು ಇತರ ಕಥೆಗಳು ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.